ಆಂಧ್ರ ಸಿಎಂ ಭೇಟಿ ಮಾಡಲು ತೆರಳಿದ ಚಿರಂಜೀವಿ, ಮಹೇಶ್ ಬಾಬು, ಪ್ರಭಾಸ್, ರಾಜಮೌಳಿ: ಯಶಸ್ವಿಯಾಗುತ್ತಾ ಭೇಟಿ?

ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ದರವನ್ನು ಸರ್ಕಾರ ನಿಗದಿ ಮಾಡಿದ ವಿಚಾರಕ್ಕೆ ಟಾಲಿವುಡ್‌ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಜಗನ್ ಸರ್ಕಾರದ ವಿರುದ್ಧ ಕೆಲ ತಾರೆಯರು ತಿರುಗಿಬಿದ್ದಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟ ಪವನ್ ಕಲ್ಯಾಣ್, ನಾನಿ ಸೇರಿದಂತೆ ಅನೇಕ ನಟರು ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರ ಸಿಎಂ ಜಗನ್ ಜೊತೆ ಮೆಗಾಸ್ಟಾರ್ ಚಿರಂಜೀವಿ ಚರ್ಚೆ ಮಾಡಿದ್ದರು. ಈಗ ಮತ್ತೆ ಚಿರಂಜೀವಿ ಮುಂದಾಳತ್ವದಲ್ಲಿ ಟಾಲಿವುಡ್ ಮಂದಿ ಜಗನ್ ಭೇಟಿ ಮಾಡಲು ತೆರಳಿದ್ದಾರೆ.

ಚಿರಂಜೀವಿ ಮತ್ತೆ ಟಾಲಿವುಡ್ ಸ್ಟಾರ್ ನಟರನ್ನೆಲ್ಲಾ ಒಗ್ಗೂಡಿಸಿದ್ದಾರೆ. ನಾಗಾರ್ಜುನಾ, ಮಹೇಶ್ ಬಾಬು, ಪ್ರಭಾಸ್, ಸೇರಿದಂತೆ ಬಿಗ್ ಸ್ಟಾರ್‌ಗಳು ಮೆಗಾಸ್ಟಾರ್ ಜೊತೆ ಸಿನಿಮ ಭೇಟಿ ಮಾಡಲು ತೆರಳಿಸಿದ್ದಾರೆ. ಈ ಭೇಟಿಯಾದರೂ ಯಶಸ್ವಯಾಗಬಹುದು ಎಂಬ ಆಶಾ ಭಾವನೆಯಲ್ಲಿ ಟಾಲಿವುಡ್‌ ಇದೆ. ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಟಾಲಿವುಡ್ ಸ್ಟಾರ್‌ಗಳು ಸಿ ಎಂ ಜಗನ್ ಭೇಟಿ ಮಾಡಲು ತೆರಳಿದ್ದಾರೆ.

 ಏರ್‌ಪೋರ್ಟ್‌ನಲ್ಲಿ ತೆಲುಗು ತಾರೆಯರು

ಏರ್‌ಪೋರ್ಟ್‌ನಲ್ಲಿ ತೆಲುಗು ತಾರೆಯರು

ಇಂದು(ಫೆಬ್ರವರಿ 10) ಮುಂಜಾನೇ ಹೈದರಾಬಾದ್‌ನ ಏರ್‌ಪೋರ್ಟ್‌ನಲ್ಲಿ ಟಾಲಿವುಡ್‌ ತಾರೆಯರು ಪ್ರತ್ಯಕ್ಷ ಆಗಿದ್ದರು. ವಿಜಯವಾಡದಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಭೇಟಿಗೆ ತೆರಳಲು ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ ಮುಂದಾಳತ್ವದಲ್ಲಿ ಟಾಲಿವುಡ್ ಸೂಪರ್‌ಸ್ಟಾರ್‌ಗಳು ಹಾಗೂ ಸ್ಟಾರ್ ನಿರ್ದೇಶಕರು, ನಿರ್ಮಾಪಕರು ವಿಜಯವಾಡಕ್ಕೆ ತೆರಳಿದ್ದಾರೆ. ಈ ಭೇಟಿ ತೆಲುಗು ಚಿತ್ರರಂಗಕ್ಕೆ ಅತೀ ಮುಖ್ಯವಾಗಿದ್ದು, ಮುಂದೆ ಬಿಡುಗಡೆಯಾಗಲಿರುವ ಸಿನಿಮಾಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಸಿಎಂ ಜಗನ್ ಭೇಟಿಗೆ ತಾರೆಯರು ದೌಡು

ಆಂಧ್ರದಲ್ಲಿ ಸಿನಿಮಾ ಟಿಕೆಟ್ ಬೆಲೆಯನ್ನು ಜಗನ್ ಸರ್ಕಾರ ಇಳಿಸಿತ್ತು. ಅಲ್ಲದೆ ಸರ್ಕಾರದ ಆನ್‌ಲೈನ್ ಪೋರ್ಟಲ್ ಮೂಲಕವೇ ಟಿಕೆಟ್ ಸೇಲ್ ಮಾಡಲು ನಿರ್ಧರಿಸಲಾಗಿತ್ತು. ಇದರಿಂದ ಚಿತ್ರರಂಗಕ್ಕೆ ಭಾರೀ ಏಟು ಬೀಳಲಿದೆ ಎಂಬ ವಾದ ವ್ಯಕ್ತವಾಗಿತ್ತು. ಹೀಗಾಗಿ ಇಂದು ಮೆಗಾಸ್ಟಾರ್ ಚಿರಂಜೀವಿ, ಸೂಪರ್‌ಸ್ಟಾರ್ ಮಹೇಶ್ ಬಾಬು, ಯಂಗ್ ರೆಬೆಲ್ ಪ್ರಭಾಸ್, ನಿರ್ದೇಶಕ ರಾಜಮೌಳಿ, ಕೊರಟಾಲ ಶಿವ ನಿರ್ಮಾಪಕ ದಿಲ್ ರಾಜು, ದಾನಯ್ಯ ಸೇರಿದಂತೆ ಹಲವು ಮಂದಿ ಸಿಎಂ ಭೇಟಿ ಮಾಡಿ ಟಿಕೆಟ್ ದರದ ಬಗ್ಗೆ ಚರ್ಚೆ ಮಾಡಲಿದ್ದಾರೆ.

 ಸಿಎಂ ಜಗನ್ ಮುಂದೆ ತಾರೆಯರ ಬೇಡಿಕೆ ಏನು?

ಸಿಎಂ ಜಗನ್ ಮುಂದೆ ತಾರೆಯರ ಬೇಡಿಕೆ ಏನು?

ಆಂಧ್ರದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ, ಸಿನಿಮಾ ಟಿಕೆಟ್ ಬೆಲೆಯನ್ನು ನಿಗದಿ ಪಡಿಸಿತ್ತು. ಒಂದು ದಿನಕ್ಕೆ ಕೇವಲ ನಾಲ್ಕು ಶೋಗಳನ್ನು ಮಾತ್ರ ಪ್ರದರ್ಶನ ಮಾಡಬೇಕು ಎಂದು ಹೇಳಿತ್ತು. ಇದರೊಂದಿಗೆ ಕೊರೊನಾ ಸಮಯದಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದೆ. ಇದೆಲ್ಲದರಿಂದ ಟಾಲಿವುಡ್‌ಗೆ ಭಾರೀ ನಷ್ಟವಾಗಿದೆ. ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿಗೆ ಇವು ಯಾವ ರೀತಿ ಪೆಟ್ಟು ಬೀಳುತ್ತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಹೀಗಾಗಿ ತಮ್ಮ ಸಮಸ್ಯೆಗಳನ್ನು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮುಂದೆ ಹೇಳಿಕೊಳ್ಳಲಿದ್ದಾರೆ.

 ಟಾಲಿವುಡ್ ಬಿಗ್ ಬಜೆಟ್ ಸಿನಿಮಾಗಳ್ಯಾವುವು?

ಟಾಲಿವುಡ್ ಬಿಗ್ ಬಜೆಟ್ ಸಿನಿಮಾಗಳ್ಯಾವುವು?

ಟಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ RRR, ಕೊರಟಾಲ ಶಿವ ನಿರ್ದೇಶನದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಕಾಜಲ್ ಅಗರ್ವಾಲ್, ರಾಮ್‌ಚರಣ್ ಹಾಗೂ ಪೂಜಾ ಹೆಗ್ಡೆಯ 'ಆಚಾರ್ಯ', ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ'. ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಸಿಎಂ ಜೊತೆಗಿನ ಈ ಸಭೆಯಲ್ಲಿ ಹೊರ ಬರುವ ನಿರ್ಧಾರದ ಮೇಲೆ ಬಿಗ್ ಬಜೆಟ್ ಸಿನಿಮಾಗಳ ಭವಿಷ್ಯ ನಿಂತಿದೆ.

More from Filmibeat

English summary
Chiranjeevi, Mahesh Babu, Prabhas, Rajamouli, Koratala Shiva, Nagarjuna fly to Vijayawada to meet Andra CM YS Jagan. The celebrities will meet the CM to discuss issues regarding to movie ticket prices and 50% occupancy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X