"ಜನ ನಾಯಗನ್ ರಿಲೀಸ್ ಆದ ಕೂಡಲೇ ತಮಿಳುನಾಡು ಅಲುಗಾಡಲಿದೆ"- ತೆಲುಗು ನಿರ್ದೇಶಕ ಕಾಮೆಂಟ್
ತಮಿಳು ಚಿತ್ರರಂಗದ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಅದಕ್ಕೂ ಮುನ್ನ ಅವರು ನಟಿಸಿದ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಯಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಬೇಕಿತ್ತು. ಆದರೆ, ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗಿದೆ. ಇದು ಈಗೀಗ ರಾಜಕೀಯ ರೂಪ ಪಡೆದುಕೊಳ್ಳುತ್ತಿದೆ.
'ಜನ ನಾಯಗನ್' ಸಿನಿಮಾ ರಿಲೀಸ್‌ಗೆ ಸೆನ್ಸಾರ್ ಮಂಡಳಿ ಅನುಮತಿ ನೀಡದೇ ಇರುವುದರಿಂದ ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾವನ್ನು ಮುಂದೂಡಿದೆ. ಆದರೆ, ವಿಜಯ್ ಸಿನಿಮಾ ರಿಲೀಸ್‌ಗೆ ಬೇಕಂತಲೇ ತಡೆಯೊಡ್ಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಹುನ್ನಾರ ಎಂದು ಕಾಮೆಂಟ್‌ಗಳು ಕೇಳಿ ಬರುತ್ತಿವೆ. ಜೊತೆ ವಿಜಯ್ ಅಭಿಮಾನಿಗಳು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಜಯ್ ಸಿನಿಮಾ ರಿಲೀಸ್ ಆಗದೇ ಇರುವುದಕ್ಕೆ ಟಿವಿಕೆ ಮುಖಂಡರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ 'ಜನ ನಾಯಕನ್' ಸಿನಿಮಾ ಕುರಿತು ಟಾಲಿವುಡ್‌ನ ಜನಪ್ರಿಯ ನಿರ್ದೇಶಕ ಅನಿಲ್ ರಾವಿಪುಡಿ ಈ ಸಿನಿಮಾ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದು ಈಗ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ವಿಜಯ್ ಸಿನಿಮಾ ತಮಿಳುನಾಡನ್ನು ಅಲುಗಾಡಿಸಲಿದೆ ಎಂದು ಯಾಕೆ ಹೇಳಿದ್ರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಜನ ನಾಯಗನ್' ಸಿನಿಮಾ ವಿವಾದಕ್ಕೆ ಈಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸಿನಿಮಾ ತೆಲುಗಿನ ಜನಪ್ರಿಯ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿದ್ದ 'ಭಗವಂತ್ ಕೇಸರಿ' ಸಿನಿಮಾದ ರಿಮೇಕ್ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಹೀಗೆ ಪ್ರಚಾರ ಮಾಡಲಾಗುತ್ತಿದೆ. ಆದ್ರೀದು ಇದು ರಿಮೇಕ್ ಅಲ್ಲ, ಸಂಪೂರ್ಣವಾಗಿ ದಳಪತಿ ವಿಜಯ್ ಚಿತ್ರ ಎಂದು ನಿರ್ದೇಶಕ ವಿನೋದ್ ಸ್ಪಷ್ಟಪಡಿಸಿದ್ದರು. ಆದರೂ, ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು.
ಇತ್ತೀಚೆಗೆ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಜನಪ್ರಿಯ ನಿರ್ದೇಶಕ ಅನಿಲ್ ರಾವಿಪುಡಿ, 'ಜನ ನಾಯಕನ್' ಚಿತ್ರವು 'ಭಗವಂತ್ ಕೇಸರಿ'ಯ ರಿಮೇಕ್ ಹೌದಾ ಅಥವಾ ಅಲ್ವಾ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ. 'ಜನ ನಾಯಕನ್' ಟ್ರೈಲರ್ ನನಗೆ ತುಂಬಾನೇ ಇಷ್ಟ ಆಯ್ತು. ವಿಜಯ್ ಅಂತಹ ಸೂಪರ್‌ಸ್ಟಾರ್ ಅನ್ನು ಇಟ್ಟುಕೊಂಡು ಹೈ ಆಕ್ಷನ್ ಡ್ರಾಮ ಸಿನಿಮಾ ಮಾಡುತ್ತಿದ್ದಾರೆ. ಕಥೆಯಲ್ಲಿ ಇನ್ನೂ ಕೆಲವು ಮುಂದಿನ ಹಂತದ ವಿಚಾರಗಳನ್ನು ಸೇರಿಸಿರುವ ಹಾಗಿದೆ. ಆದರೆ, ಆತ್ಮ ಮಾತ್ರ 'ಭಗವಂತ್ ಕೇಸರಿ' ಸಿನಿಮಾದ್ದೇ ಆಗಿರುತ್ತೆ" ಎಂದು ನಿರ್ದೇಶಕ ಅನಿಲ್ ಹೇಳಿದ್ದಾರೆ.

ಹಾಗೇ "ವಿಜಯ್ ಕೊನೆಯ ಸಿನಿಮಾ ಯಾವಾಗ ಬಂದರೂ, ಅದು ಎಲ್ಲಾ ದಾಖಲೆಗಳು ಅಲುಗಾಡಿಸುತ್ತೆಂದು ಖಂಡಿತವಾಗಿ ಹೇಳುತ್ತೇನೆ" ಭರವಸೆಯ ಮಾತುಗಳನ್ನಾಡಿದ್ದಾರೆ. "ಅಂದು ವಿಜಯ್ ಅವರೊಂದಿಗೆ ಈ ಸಿನಿಮಾವನ್ನು ನೀವೇ ಮಾಡಬೇಕೆಂಬ ಚರ್ಚೆ ನಡೆದಿತ್ತು. ಆದರೆ ಯಾಕೆ ಮಾಡಲಿಲ್ಲ?" ಎಂದು ನಿರೂಪಕರು ಪ್ರಶ್ನೆ ಮಾಡಿದ್ದರು. ಅದಕ್ಕೆ ಅನಿಲ್ ರವಿಪುಡಿ "ನಾವು ದಳಪತಿ ವಿಜಯ್ ಜೊತೆ ಸಿನಿಮಾ ಮಾಡಬೇಕು ಅಂದುಕೊಂಡಿದ್ವಿ. ಆದರೆ, ಸ್ಟ್ರೈಟ್ ಸಬ್ಜೆಕ್ಟ್ ಮಾಡುತ್ತೇನೆಂದು ವಿಜಯ್ ಅವರಿಗೇ ಹೇಳಿದ್ದೆ. ವಿಜಯ್ ಕೊನೆಯ ಸಿನಿಮಾ ರಿಮೇಕ್ ಆಗ್ಬಿಟ್ಟರೆ ಹೇಗೆ ಎಂಬ ಆತಂಕವಿತ್ತು. ಆದರೆ, ವಿಜಯ್ ಅವರಿಗೆ 'ಭಗವಂತ್ ಕೇಸರಿ' ಮೇಲೆ ಮನಸಿತ್ತು. ಅದರಲ್ಲಿನ ಕೆಲವು ಅಂಶಗಳು ಅವರಿಗೆ ತುಂಬಾ ಇಷ್ಟ ಆಗಿತ್ತು." ಎಂದು ನಿರ್ದೇಶನ ಅನಿಲ್ ರವಿಪುಡಿ ಹೇಳಿದ್ದಾರೆ.
ದಳಪತಿ ವಿಜಯ್ ಕೊನೆಯ ಸಿನಿಮಾ ಇದಾಗಿದ್ದರಿಂದ ರಿಮೇಕ್ ಬೇಡವೆಂದು ಹಲವು ಮಂದಿ ಹೇಳಿದ್ದರಂತೆ. ಆದರೆ, ವಿಜಯ್‌ಗೆ ಈ ಸಿನಿಮಾ ಮೇಲೆ ನಂಬಿಕೆಯಿತ್ತು ಅನ್ನೋದನ್ನು 'ಭಗವಂತ್ ಕೇಸರಿ' ಸಿನಿಮಾದ ನಿರ್ದೇಶಕ ಅನಿಲ್ ರವಿಪುಡಿ ಹೇಳಿದ್ದಾರೆ. ಇದರೊಂದಿಗೆ "ಹೆಣ್ಣು ಮಕ್ಕಳ ವಿಷಯಗಳು ವಿಜಯ್ ಅವರಿಂದ ಹೇಳಿಸಿದರೆ, ಅದು ಜನರನ್ನು ದೊಡ್ಡ ಮಟ್ಟದಲ್ಲಿ ತಲುಪುತ್ತವೆ. ಅಷ್ಟೇ ಅಲ್ಲದೆ ಅವರ ಅಭಿಮಾನಿಗಳು ಇಷ್ಟ ಪಡುವಂತಹ ಬೇಕಾದಷ್ಟು ಅಂಶಗಳು ಆ ಸಿನಿಮಾದಲ್ಲಿವೆ. ಜನ ನಾಯಕನ್ ಸಿನಿಮಾ ರಿಲೀಸ್ ಆದ ತಕ್ಷಣ ತಮಿಳುನಾಡು ಅಲುಗಾಡಲಿದೆ" ಎಂದು ಅನಿಲ್ ರಾವಿಪುಡಿ ಹೇಳಿಕೆ ಕೊಟ್ಟಿದ್ದು ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications











