'ವಾಲ್ತೇರು ವೀರಯ್ಯ' 2ನೇ ದಿನದ ಕಲೆಕ್ಷನ್ ಬಾಲಯ್ಯದ ಸಿನಿಮಾದ 2 & 3ನೇ ದಿನ ಗಳಿಕೆಗೆ ಸಮ!

ಸಂಕ್ರಾಂತಿ ಹಬ್ಬಕ್ಕೆ ತೆಲುಗು ಸಿನಿಪ್ರಿಯರಿಗೆ ಎರಡು ಮಾಸ್ ಸಿನಿಮಾಗಳು ಸಿಕ್ಕಿವೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ವಾಲ್ತೇರು ವೀರಯ್ಯ' ಒಂದಾದ್ರೆ, ಇನ್ನೊಂದು ಕಿಂಗ್ ಆಫ್ ಮಾಸ್ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ'. ಈ ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿ ರಿಲೀಸ್ ಆಗಿದೆ.

ಚಿರಂಜೀವಿ ಹಾಗೂ ರವಿತೇಜ ಅಭಿನಯದ 'ವಾಲ್ತೇರು ವೀರಯ್ಯ', ಬಾಲಯ್ಯ ಅಭಿನಯದ 'ವೀರ ಸಿಂಹ ರೆಡ್ಡಿ'. ಈ ಎರಡೂ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರೂ, ಬಾಕ್ಸಾಫೀಸ್‌ನಲ್ಲಿ ಸಂಕ್ರಾಂತಿಯ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿವೆ.

ಚಿರಂಜೀವಿ ಹಾಗೂ ರವಿತೇಜ ಸಿನಿಮಾ 'ವಾಲ್ತೇರು ವೀರಯ್ಯ' ಮೇಲೆ ನಿರೀಕ್ಷೆ ಹೆಚ್ಚಿತ್ತು. ಈ ಬಾರಿ ಮೆಗಾಸ್ಟಾರ್ ತಮ್ಮ ಮ್ಯಾನರಿಸಂನಿಂದಲ್ಲೇ ಬಾಕ್ಸಾಫೀಸ್ ಲೂಟಿ ಮಾಡ್ಬಹುದು ಎಂದು ನೀರಿಕ್ಷೆಯನ್ನು ಇಟ್ಟುಕೊಂಡಿದ್ದರು. ಹಾಗಿದ್ದರೆ, ನಿರೀಕ್ಷೆಯಂತೆ ಸಿನಿಮಾ ಕಲೆಕ್ಷನ್ ಮಾಡುತ್ತಿದೆಯಾ? ಎದುರಾಳಿ ಬಾಲಯ್ಯ ಸಿನಿಮಾದ ಗಳಿಕೆಯನ್ನು ಮೀರಿಸಿತೇ 'ವಾಲ್ತೇರು ವೀರಯ್ಯ'? ತಿಳಿಯಲು ಮುಂದೆ ಓದಿ.

'ವಾಲ್ತೇರು ವೀರಯ್ಯ'2ನೇ ದಿನದ ಕಲೆಕ್ಷನ್ ಎಷ್ಟು?

'ವಾಲ್ತೇರು ವೀರಯ್ಯ'2ನೇ ದಿನದ ಕಲೆಕ್ಷನ್ ಎಷ್ಟು?

ಮೆಗಾಸ್ಟಾರ್ ಚಿರಂಜೀವಿ, ರವಿತೇಜ ಹಾಗೂ ಶ್ರುತಿ ಹಾಸನ್ ಅಭಿನಯದ ಸಿನಿಮಾ 'ವಾಲ್ತೇರು ವೀರಯ್ಯ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ,ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಎರಡನೇ ದಿನ ವಿಶ್ವದಾದ್ಯಂತ 20 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಆಂಧ್ರ, ತೆಲಂಗಾಣ ಸೇರಿದಂತೆ ವಿದೇಶದಲ್ಲಿ, ಅದರಲ್ಲೂ ಅಮೆರಿಕದಲ್ಲಿ ರೆಸ್ಪಾನ್ಸ್ ಜೋರಾಗಿದೆ ಎನ್ನಲಾಗಿದೆ. ಸಂಕ್ರಾಂತಿ ಹಬ್ಬದಂದು (ಜನವರಿ 15) ನಿರೀಕ್ಷೆ ದುಪ್ಪಟ್ಟಾಗಿದೆ.

'ವಾಲ್ತೇರು ವೀರಯ್ಯ' 2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ವಾಲ್ತೇರು ವೀರಯ್ಯ' 2 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ಮೆಗಾಸ್ಟಾರ್ ಸಿನಿಮಾ 'ವಾಲ್ತೇರು ವೀರಯ್ಯ' ಮೊದಲ ದಿನ ಸುಮಾರು 33 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು. ಅದೇ ಎರಡನೇ ದಿನ ಸುಮಾರು 20 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅಲ್ಲಿಗೆ ಮೆಗಾಸ್ಟಾರ್ ಸಿನಿಮಾ ಮೊದಲೆರಡು ದಿನ ಸುಮಾರು 53 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇಂದು (ಜನವರಿ 15) ಈ ಸಿನಿಮಾ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಬಾಲಯ್ಯ ಮುಂದೆ ತೊಡೆತಟ್ಟಿದ ಚಿರು

ಬಾಲಯ್ಯ ಮುಂದೆ ತೊಡೆತಟ್ಟಿದ ಚಿರು

ಸಂಕ್ರಾಂತಿ ಹಬ್ಬಕ್ಕೆ ಬಾಲಕೃಷ್ಣ ಅಭಿನಯದ ಸಿನಿಮಾ 'ವೀರ ಸಿಂಹ ರೆಡ್ಡಿ' ಕೂಡ ರಿಲೀಸ್ ಆಗಿದೆ. ಚಿರಜೀವಿ ಸಿನಿಮಾಗಿಂತ ಒಂದು ದಿನ ಮುನ್ನವೇ ಸಿನಿಮಾ ತೆರೆಕಂಡಿತ್ತು. ಹೀಗಾಗಿ ಬಿಡುಗಡೆ ವಿಚಾರದಲ್ಲಿ ಒಂದು ದಿನ ಮುಂದಿದೆ. ಆದರೂ, ಕಲೆಕ್ಷನ್ ವಿಚಾರದಲ್ಲಿ ಎರಡನೇ ಹಾಗೂ ಮೂರನೇ ದಿನ ಹಿಂದೆ ಬಿದ್ದಿದೆ.'ವೀರ ಸಿಂಹ ರೆಡ್ಡಿ' ಎರಡನೇ ದಿನ ವಿಶ್ವದಾದ್ಯಂತ ಕೇವಲ 5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಾಗೇ ಮೂರನೇ ದಿನ ಕೊಂಚ ಏರಿಕೆ ಕಂಡಿದ್ದು, 8 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ಚಿರಂಜೀವಿಯ ಎರಡನೇ ದಿನ ಕಲೆಕ್ಷನ್, ಬಾಲಯ್ಯನ ಎರಡು ಹಾಗೂ ಮೂರನೇ ದಿನದ ಒಟ್ಟು ಗಳಿಕೆಗೂ ಸಮವಿಲ್ಲ ಎಂದು ಟ್ರೇಲ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ.

ಸಂಕ್ರಾಂತಿ ದಿನವೇ ನಿರ್ಣಾಯಕ

ಸಂಕ್ರಾಂತಿ ದಿನವೇ ನಿರ್ಣಾಯಕ

ಹಬ್ಬದ ಸಂಭ್ರಮದಲ್ಲಿರೋ ತೆಲುಗು ಮಂದಿ ಸಿನಿಮಾ ಕಡೆ ಮುಖ ಮಾಡುತ್ತಾರಾ? ಅನ್ನೋ ಪ್ರಶ್ನೆ ಇದ್ದೇ ಇದೆ. ಆದರೆ, ಈ ಹಿಂದೆ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿವೆ. ಹೀಗಾಗಿ ಈ ದಿನ ಯಾವ ಸಿನಿಮಾವನ್ನು ಹೆಚ್ಚು ಮಂದಿ ನೋಡುತ್ತಾರೆ ಅನ್ನೋದರ ಮೇಲೆ ಸಿನಿಮಾ ಭವಿಷ್ಯ ಲೆಕ್ಕ ಹಾಕಬಹುದು. ಸದ್ಯ ಬಾಲಕೃಷ್ಣ ಕ್ರೇಜ್ ಜೋರಾಗಿದ್ದರೂ, ಕಳೆದ ಎರಡು ದಿನ ಡಲ್ ಹೊಡೆದಿದೆ. ಆದರೂ ಮಾಸ್ ಸಿನಿಮಾ ಆಗಿರೋದ್ರಿಂದ ಹಬ್ಬದ ಬಳಿಕ ಕಲೆಕ್ಷನ್ ಚೆನ್ನಾಗಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Chiranjeevi Movie Waltair Veerayya Box Office Day 2 Collection What About Veera Simha Reddy And Varisu, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X