5 ದಿನದಲ್ಲೇ ₹100 ಕೋಟಿ ಕ್ಲಬ್ ಸೇರಿದ 'ವಾಲ್ತೇರು ವೀರಯ್ಯ': ಬಾಲಯ್ಯ ಸಿನಿಮಾದ ಕಥೆಯೇನು?

ಟಾಲಿವುಡ್‌ನಲ್ಲಿ ಸಂಕ್ರಾಂತಿ ಸಮರ ಕಾವು ಏರಿತ್ತು. ಒಂದ್ಕಡೆ ಮೆಗಾಸ್ಟಾರ್ ಚಿರಂಜೀವಿ. ಇನ್ನೊಂದು ಕಡೆ ಕಿಂಗ್ ಆಫ್ ಮಾಸ್ ಬಾಲಕೃಷ್ಣ ಬಾಕ್ಸಾಫೀಸ್‌ನಲ್ಲಿ ಯುದ್ಧಕ್ಕೆ ಇಳಿದಿದ್ದರು. ದಿಗ್ಗಜರಿಬ್ಬರ ಈ ಬಾಕ್ಸಾಫೀಸ್ ಕಾದಾಟದಲ್ಲಿ ಗೆಲುವು ಸಿಕ್ಕಿದ್ದು ಯಾರಿಗೆ? ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಕಲೆಕ್ಷನ್ ಹೇಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

'ಗಾಡ್ ಫಾದರ್' ರಿಲೀಸ್ ಬಳಿಕ ಮೆಗಾಸ್ಟಾರ್ ಚಿರಂಜೀವಿಯ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿತ್ತು. ಅದಕ್ಕೆ ಕಾರಣ ಚಿರಂಜೀವಿ ಲುಕ್ ಹಾಗೂ ಮ್ಯಾನರಿಸಂ. ಜೊತೆಗೆ ಮೆಗಾಸ್ಟಾರ್ ಹಾಗೂ ರವಿತೇಜ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ದುಪ್ಪಟ್ಟಿತ್ತು. ಅದಕ್ಕೆ ತಕ್ಕಂತೆ ಬಾಕ್ಸಾಫೀಸ್‌ನಲ್ಲೂ ಕಲೆಕ್ಷನ್ ಭರ್ಜರಿಯಾಗೇ ಇದೆ.

'ವಾಲ್ತೇರು ವೀರಯ್ಯ' ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ 'ವಾಲ್ತೇರು ವೀರಯ್ಯ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿಯೇ ₹100 ಕೋಟಿ ರೂ ಕ್ಲಬ್ ಸೇರಿದೆ.

5ನೇ ದಿನದ ಕಲೆಕ್ಷನ್ ಎಷ್ಟು?

5ನೇ ದಿನದ ಕಲೆಕ್ಷನ್ ಎಷ್ಟು?

ಸಂಕ್ರಾಂತಿ ಹಬ್ಬ ಮುಗಿದರೂ ಮೆಗಾಸ್ಟಾರ್ ಸಿನಿಮಾ ಕಲೆಕ್ಷನ್ ತಗ್ಗುವಂತೆ ಕಾಣುತ್ತಿಲ್ಲ. ಜನರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ಐದನೇ ದಿನವೂ (ಜನವರಿ 17) ಬಾಕ್ಸಾಫೀಸ್‌ ಕಲೆಕ್ಷನ್ ಜೋರಾಗಿಯೇ ಇದೆ.ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಐದನೇ ದಿನ 'ವಾಲ್ತೇರು ವೀರಯ್ಯ' ಸುಮಾರು 13 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ.

5 ದಿನದಲ್ಲೇ ₹100 ಕೋಟಿ ಕ್ಲಬ್

5 ದಿನದಲ್ಲೇ ₹100 ಕೋಟಿ ಕ್ಲಬ್

ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ' ರಿಲೀಸ್ ಆಗಿ ಆರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ. ನಿನ್ನೆನೇ(ಜನವರಿ 17) ವರ್ಲ್ಡ್‌ವೈಡ್ ಕಲೆಕ್ಷನ್ 108 ಕೋಟಿ ರೂ. ಕಲೆಕ್ಷನ್ ಆಗಿತ್ತು. ಈಗ ದೇಶದಾದ್ಯಂತ ಮೊದಲ ಐದು ದಿನಗಳಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲೇ 100.30 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಅಮೆರಿಕದಲ್ಲಿ ಅತೀ ಹೆಚ್ಚು ಕಲೆಕ್ಷನ್

ಅಮೆರಿಕದಲ್ಲಿ ಅತೀ ಹೆಚ್ಚು ಕಲೆಕ್ಷನ್

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಗೆ ಅಮೆರಿಕದಲ್ಲಿ ಹೆಚ್ಚು ಬೇಡಿಕೆಯಿದೆ. ಈ ಹಿಂದೆ ತೆರೆಕಂಡಿದ್ದ 'ಸೈರಾ ನರಸಿಂಹ ರೆಡ್ಡಿ' ಯುಎಸ್‌ಎ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ 'ವಾಲ್ತೇರು ವೀರಯ್ಯ' ಸುಮಾರು 2.6 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡುವ ಮೂಲಕ 'ಸೈರಾ ನರಸಿಂಹ ರೆಡ್ಡಿ' ಕಲೆಕ್ಷನ್ ಅನ್ನೂ ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಈ ಮೂಲಕ ವಿದೇಶದಲ್ಲಿಯೂ 'ವಾಲ್ತೇರು ವೀರಯ್ಯ' ಚಿಂದಿ ಉಡಾಯಿಸುತ್ತಿದೆ.

'ವೀರ ಸಿಂಹ ರೆಡ್ಡಿ' ಕಲೆಕ್ಷನ್ ಎಷ್ಟು?

'ವೀರ ಸಿಂಹ ರೆಡ್ಡಿ' ಕಲೆಕ್ಷನ್ ಎಷ್ಟು?

ಮೆಗಾಸ್ಟಾರ್ ಚಿರಂಜೀವಿ ಜೊತೆನೇ ಬಾಲಯ್ಯ ಅಭಿನಯದ 'ವೀರ ಸಿಂಹ ರೆಡ್ಡಿ' ಕೂಡ ಬಾಕ್ಸಾಫೀಸ್ ಕಮಾಲ್ ಮಾಡಿದೆ. ನಿನ್ನೆಯೇ(ಜನವರಿ 17) ವಿಶ್ವದಾದ್ಯಂತ 104 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಹೇಳಿಕೊಂಡಿತ್ತು. ಆದರೆ, ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, ಭಾರತದಲ್ಲಿ ಈ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.

More from Filmibeat

English summary
Chiranjeevi Starrer Waltair Veerayya Movie Entered 100cr In Box Office Collection 5 Days, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X