"ನೀವು ತಪ್ಪು ದಾರಿ ಹಿಡಿದಿದ್ದರೆ ಸರಿಪಡಿಸಿಕೊಳ್ಳಿ"; ಅಲ್ಲು ಅರ್ಜುನ್ ವಿರುದ್ಧ ನಾಗಬಾಬು ಮಿಸ್ಟರಿ ಪೋಸ್ಟ್
ಟಾಲಿವುಡ್‌ನಲ್ಲಿ ಎರಡು ಕುಟುಂಬಗಳ ಕಲಹ ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಅದೆಷ್ಟೇ ಮುಚ್ಚಿಡುವುದಕ್ಕೆ ಪ್ರಯತ್ನ ಪಟ್ಟರೂ ಅದು ಆಗಾಗ ಸ್ಪೋಟಗೊಳ್ಳುತ್ತಲೇ ಇದೆ. ಮೆಗಾ ಸ್ಟಾರ್ ಚಿರಂಜೀವಿ ಕುಟುಂಬ ಹಾಗೂ ಅಲ್ಲು ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ. ಎರಡೂ ಕುಟುಂಬಗಳಲ್ಲಿ ವೈಮನಸ್ಸು ಮೂಡಿದೆ ಎಂಬ ಸುದ್ದಿ ಓಡಾಡುತ್ತಲೇ ಇತ್ತು. ಅದ್ರೀಗ ಅದ್ಯಾಕೋ ಅದೆಲ್ಲವೂ ನಿಜ ಅಂತ ಅನಿಸುವುದಕ್ಕೆ ಶುರುವಾಗಿದೆ.
ಮೆಗಾ ಕುಟುಂಬದ ಹೀರೋಗಳಿಗೂ 'ಪುಷ್ಪ 2' ಹೀರೋ ಅಲ್ಲು ಅರ್ಜುನ್‌ಗೂ ಆಗುತ್ತಿಲ್ಲ. ಇಂತಹದ್ದೊಂದು ಚರ್ಚೆ ಟಾಲಿವುಡ್‌ನಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಆದರೆ, 'ಪುಷ್ಪ 2' ಬಿಡುಗಡೆ ಚರ್ಚೆ ಜೋರಾಗಿದೆ. ಅದಕ್ಕೆ ಮೆಗಾಸ್ಟಾರ್ ಚಿರಂಜೀವಿಯ ಸಹೋದರ ನಾಗಬಾಬು ಉಪ್ಪು ಖಾರ ಸುರಿದಿದ್ದಾರೆ. ಮತ್ತೊಂದು ವಿವಾದಾತ್ಮಕ ಟ್ವೀಟ್ (ಎಕ್ಸ್) ಮಾಡಿದ್ದು, ಅದು ಅಲ್ಲು ಅರ್ಜುನ್ ಅಭಿಮಾನಿಗಳನ್ನು ಕೆರಳಿದೆ.

ಇತ್ತೀಚೆಗೆ 'ಪುಷ್ಪ 2' ಇವೆಂಟ್‌ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಅಭಿಮಾನಿಗಳನ್ನು 'ಆರ್ಮಿ' ಎಂದು ಕರೆದಿದ್ದರು. ಇದು ಮೆಗಾ ಫ್ಯಾನ್ಸ್ ಕಣ್ಣು ಕುಕ್ಕಿತ್ತು. ಅದಕ್ಕೂ ಮುನ್ನ ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್' ಇವೆಂಟ್‌ನಲ್ಲಿ ಮೆಗಾ ಫ್ಯಾನ್ಸ್ ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಆದರೆ, ಇಬ್ಬರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲ್ಲಿಲ್ಲ. ಇನ್ನೇನು ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳ ಬಾಕಿ ಇರುವಾಗಲೇ ನಾಗಬಾಬು ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ.
'ಪುಷ್ಪ 2' ಹೀರೋ ಅಲ್ಲು ಅರ್ಜುನ್ ತಮ್ಮ ಯಾವುದೇ ಸಿನಿಮಾ ರಿಲೀಸ್ ವೇಳೆ ನಡೆಯುವ ಇವೆಂಟ್‌ನಲ್ಲಿ ಮೆಗಾಸ್ಟಾರ್ ಹೆಸರು ತೆಗೆದುಕೊಳ್ಳುತ್ತಿದ್ದರು. ಹಾಗೇ ಪವರ್‌ಸ್ಟಾರ್ ಪವನ್‌ಕಲ್ಯಾಣ್ ಬಗ್ಗೆ ಮಾತಾಡದೇ ಇರುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಅಲ್ಲು ಅರ್ಜುನ್ ಇವರಿಬ್ಬರ ಹೆಸರನ್ನೂ ತೆಗೆಯುತ್ತಿಲ್ಲ. ಈ ಕಾರಣಕ್ಕೆ ಇಬ್ಬರ ನಡುವಿನ ಮನಸ್ತಾಪ ಎನ್ನಲಾಗುತ್ತಿದೆ. ಈಗ ನಾಗಬಾಬು ಮಾಡಿದ ಮತ್ತೊಂದು ಪೋಸ್ಟ್ ಪರೋಕ್ಷವಾಗಿ ಅಲ್ಲು ಅರ್ಜುನ್‌ಗೆ ವಾರ್ನಿಂಗ್ ಕೊಟ್ಟಂತೆ ಇದೆ.
ನಾಗಬಾಬು ಹೀಗೆ ಮಾರ್ಮಿಕವಾಗಿ ಟ್ವೀಟ್ ಮಾಡುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ವಿವಾದಾತ್ಮಕ ಫೋಸ್ಟ್‌ಗಳನ್ನು ಮಾಡಿ ಸುದ್ದಿಯಾಗಿದ್ದರು. ಅಲ್ಲು ಅರ್ಜುನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಿಡಿಕಾರಿದ ಬಳಿಕ ಸ್ವಲ್ಪ ದಿನ ಸೈಲೆಂಟ್ ಆಗಿದ್ದರು. ಈಗ 'ಪುಷ್ಪ 2' ರಿಲೀಸ್ ಆಗುತ್ತಿರುವ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅವರ ಹಿತವಚನವನ್ನು ಪೋಸ್ಟ್ ಮಾಡುವ ಮೂಲಕ ಅಲ್ಲು ಅರ್ಜುನ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಏನಿದೆ ಅನ್ನೋದನ್ನು ನೋಡುವುದಾದರೆ, "ನೀನು ತಪ್ಪು ದಾರಿ ಹಿಡಿದಿರುವುದು ನಿನ್ನ ಅರಿವಿಗೆ ಬಂದರೆ, ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಅದಕ್ಕೆ ಹೆಚ್ಚು ಸಮಯದ ತೆಗೆದುಕೊಂಡರೆ, ನೀನು ಇರಬೇಕಾಗಿತ್ತೋ ಅಲ್ಲಿಗೆ ಮರಳವುದಕ್ಕೆ ತುಂಬಾನೇ ಕಷ್ಟ ಆಗಬಹುದು. - ಸ್ವಾಮಿ ವಿವೇಕಾನಂದ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಅನ್ನು ಅಲ್ಲು ಅರ್ಜುನ್‌ಗೆ ವಾರ್ನಿಂಗ್ ಕೊಡುವುದಕ್ಕೇ ನಾಗಬಾಬು ಮಾಡಿದ್ದಾರೆಂಬ ವಾದ ಅಭಿಮಾನಿಗಳದ್ದು. ಈ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಾಗಬಾಬು ವಿರುದ್ಧ ಅಲ್ಲು ಅರ್ಜುನ್ ಫ್ಯಾನ್ಸ್ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ಈ ವಿವಾದಾತ್ಮಕ ಪೋಸ್ಟ್ ಬಳಿಕ ನಾಗಬಾಬುನೂ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಅಲ್ಲು ಅರ್ಜುನ್ ಕೂಡ ರಿಯಾಕ್ಟ್ ಮಾಡಿಲ್ಲ.


Click it and Unblock the Notifications











