twitter
    For Quick Alerts
    ALLOW NOTIFICATIONS  
    For Daily Alerts

    ಇನ್ಮುಂದೆ ಸರ್ಕಾರದ ಆನ್‌ಲೈನ್ ವೆಬ್‌ಸೈಟ್ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ: ಹೊಸ ರೂಲ್ಸ್

    |

    ಸಿನಿಮಾ ನೋಡಬೇಕು ಅಂದರೆ, ಥಿಯೇಟರ್‌ಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತೇವೆ. ಕೆಲವರು ಆನ್‌ಲೈನ್ ವೆಬ್‌ಸೈಟ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ. ಆದರೆ, ಈಗ ಈ ಎರಡೂ ಪದ್ಧತಿಗಳಿಗೂ ಶೀಘ್ರದಲ್ಲೇ ತಿಲಾಂಜಲಿ ಇಡಲಾಗುತ್ತಿದೆ. ಸರ್ಕಾರದ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತದೆ.

    ಈ ಹೊಸ ನೀತಿಗೆ ಸಿನಿಮಾರಂಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಯಾಕಂದ್ರೆ, ಸರ್ಕಾರ ಕೇವಲ ಟಿಕೆಟ್‌ಗಳನ್ನಷ್ಟೇ ಮಾರಾಟ ಮಾಡುವುದಿಲ್ಲ. ಬದಲಾಗಿ, ಎಷ್ಟು ಶೋಗಳನ್ನು ಪ್ರದರ್ಶನ ಮಾಡಬೇಕು. ಒಂದು ಟಿಕೆಟ್‌ಗೆ ಎಷ್ಟು ಹಣ ನಿಗದಿ ಮಾಡಬೇಕು ಅನ್ನುವುದನ್ನೂ ಸರ್ಕಾರವೇ ನಿರ್ಧರಿಸಲಿದೆ. ಅಂದ ಹಾಗೆ ಈ ಹೊಸ ರೂಲ್ಸ್ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ. ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಹೊಸ ನೀತಿಯನ್ನು ಜಾರಿಗೆ ಮಾಡಿದೆ. ಆಂಧ್ರ ಸರ್ಕಾರ ಹೊಸ ಬಿಲ್ ಪಾಸ್ ಮಾಡಿದ್ದು ಯಾಕೆ? ಇದರಿಂದ ಏನು ಪ್ರಯೋಜನ ಅನ್ನುವುದನ್ನು ಮುಂದೆ ಓದಿ.

    ಸರ್ಕಾರದಿಂದಲೇ ಸಿನಿಮಾ ಟಿಕೆಟ್ ಮಾರಾಟ

    ಸರ್ಕಾರದಿಂದಲೇ ಸಿನಿಮಾ ಟಿಕೆಟ್ ಮಾರಾಟ

    ಆಂಧ್ರ ಪ್ರದೇಶ ಸರ್ಕಾರ ಬುಧವಾರ (ನವೆಂಬರ್ 24) ಸಿನಿಮಾ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರದ ಆನ್‌ಲೈನ್ ವೇದಿಕೆ ಮೂಲಕವೇ ಚಿತ್ರಮಂದಿರಗಳು ಆನ್‌ಲೈನ್ ಟಿಕೆಟ್ ಮಾರಾಟ ಮಾಡುವುದು ಕಡ್ಡಾಯಗೊಳಿಸುವ ಮಸೂದೆಗೆ ಆಂಧ್ರದ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ವಿಧಾನ ಪರಿಷತ್‌ನಲ್ಲಿ ಈ ಹೊಸ ಮಸೂದೆಯನ್ನು ಸರ್ಕಾರ ಪ್ರಸ್ತಾಪಿಸಲಿದೆ. ಈ ಮೂಲಕ ಆಂಧ್ರದಲ್ಲಿ ಸಿನಿಮಾ ಟಿಕೆಟ್ ಮಾರಾಟ ಹಕ್ಕು ಸರ್ಕಾರದ ಪಾಲಾಗಲಿದೆ. ಆಂಧ್ರ ಪ್ರದೇಶದ ಸಿನಿಮಾ ರೆಗ್ಯೂಲೇಷನ್ ಕಾಯ್ದೆ ಅಡಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ.

    ಅಧಿಕ ಶೋ ಇಲ್ಲ.. ದುಬಾರಿ ಟಿಕೆಟ್‌ಗೆ ಕತ್ತರಿ

    ಅಧಿಕ ಶೋ ಇಲ್ಲ.. ದುಬಾರಿ ಟಿಕೆಟ್‌ಗೆ ಕತ್ತರಿ

    ಆಂಧ್ರ ಸರ್ಕಾರ ಜಾರಿ ಮಾಡಿದ ಹೊಸ ಮಸೂದೆಯಿಂದ ಟಾಲಿವುಡ್‌ಗೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಕಾಯ್ದೆ ಪ್ರಕಾರ, ಆಂಧ್ರದಲ್ಲಿ ಯಾವುದೇ ಸಿನಿಮಾ ದಿನಕ್ಕೆ ನಾಲ್ಕು ಶೋಗಳಿಗಿಂತ ಹೆಚ್ಚು ಪ್ರದರ್ಶನ ಮಾಡುವಂತಿಲ್ಲ." ಸೂಪರ್‌ಸ್ಟಾರ್ ಸಿನಿಮಾಗಳು ಬಿಡುಗಡೆಯಾದಾಗ ವಿತರಕರು ಹಣ ಮಾಡುವ ಉದ್ದೇಶದಿಂದ ದಿನಕ್ಕೆ ಆರರಿಂದ ಏಳು ಶೋಗಳನ್ನು ಪ್ರದರ್ಶನ ಆಯೋಜಿಸುತ್ತಿದ್ದರು. ಅಲ್ಲದೆ ಒಂದು ಟಿಕೆಟ್‌ಗೆ 500 ರೂಪಾಯಿಗಳಿಂದ 1000 ಸಾವಿರ ರೂಪಾಯಿಗಳವರೆಗೆ ಟಿಕೆಟ್ ದರವನ್ನು ಹೆಚ್ಚಿಸಲಾಗುತ್ತಿತ್ತು." ಎಂದು ಆಂಧ್ರದ ಮಾಹಿತಿ ಹಾಗೂ ಸಾರ್ವಜನಿಕ ಸಂಪಕ ಸಚಿವ ಪೇರ್ನಿ ವೆಂಕಟ್ರಾಮಯ್ಯ ತಿಳಿಸಿದ್ದಾರೆ.

    ವಿತರಕರು, ನಿರ್ಮಾಪಕರು ತೆರಿಗೆ ವಂಚಿಸುವಂತಿಲ್ಲ

    ವಿತರಕರು, ನಿರ್ಮಾಪಕರು ತೆರಿಗೆ ವಂಚಿಸುವಂತಿಲ್ಲ

    "ಈ ಆನ್‌ಲೈನ್ ವೇದಿಕೆಯನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳುವುದರಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕಿದಂತಾಗುತ್ತೆ. ನಿರ್ಮಾಪಕರು ಮತ್ತು ವಿತರಕರು ತೆರಿಗೆ ವಂಚನೆ ಮಾಡುವುದನ್ನು ತಪ್ಪಿಸಬಹುದು. ಅಲ್ಲದೆ ಥಿಯೇಟರ್‌ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೇಟ್‌ವೇ ಮೂಲಕ ಪ್ರತಿ ದಿನ ಹಣ ವರ್ಗಾವಣೆಯಾಗುತ್ತೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಆನ್‌ಲೈನ್ ಟಿಕೆಟ್‌ ಬುಕಿಂಗ್‌ನಿಂದ ಏನು ಲಾಭ?

    ಆನ್‌ಲೈನ್ ಟಿಕೆಟ್‌ ಬುಕಿಂಗ್‌ನಿಂದ ಏನು ಲಾಭ?

    "ಆನ್‌ಲೈನ್ ಬುಕಿಂಗ್ ವ್ಯವಸ್ಥೆಯಿಂದ ಜನರಿಗೆ ಹಲವು ಅನುಕೂಲಗಳಿವೆ. ಜನರು ಟಿಕೆಟ್ ಖರೀದಿ ಮಾಡಲು ಸರದಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯದ ಜೊತೆ ಬ್ಲ್ಯಾಕ್ ಟಿಕೆಟ್ ಮಾರಾಟ ವ್ಯವಸ್ಥೆಯನ್ನು ತಡೆಯಬಹುದು. ತಮಗೆ ಬೇಕಾದ ಚಿತ್ರಮಂದಿರಗಳಲ್ಲಿ, ಆನ್‌ಲೈನ್ ಮೂಲಕ, ಫೋನ್ ಮೂಲಕ, ಎಸ್‌ಎಂಎಸ್ ಮಾಡುವ ಮಾಡುವ ಮೂಲಕ ಟಿಕೆಟ್ ಪಡೆಯಬಹುದಾಗಿದೆ." ಎಂದು ಸಚಿವರು ವಿವರಿಸಿದ್ದಾರೆ. ಆದರೆ, RRR ಅಂತಹ ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು ಸಂಕಷ್ಟ ಎದುರಿಸಬೇಕಾಗಬಹುದು. ಟಿಕೆಟ್ ದರ ಏರಿಕೆ ಮಾಡದೆ ಹೋದರೆ ಸಿನಿಮಾಗೆ ಹಾಕಿದ ಬಂಡವಾಳ ಬರುವುದಿಲ್ಲ ಎಂಬುದು ನಿರ್ಮಾಪಕರ ಅಳಲು.

    English summary
    Andra government has decided to introduce a seamless online movie booking system. Cinema halls to sell their movie tickets through a andra government run online platform new roles.
    Thursday, November 25, 2021, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X