ತೆಲುಗಿನ ವಿವಾದಾತ್ಮಕ ಸೆಲೆಬ್ರೆಟಿ ಜ್ಯೋತಿಷಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇಕೆ? ನಾಗ ಚೈತನ್ಯ-ಶೋಭಿತಾ ಕಾರಣವೇ?
ಭಾರತದಲ್ಲಿ ಇಂದಿಗೂ ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಇಂತಹ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಬೇಕು ಅನ್ನೋದು ಹಲವರ ಕನಸು. ಹೀಗಾಗಿ ಪ್ರತಿ ಸೀಸನ್‌ನಲ್ಲಿಯೂ ಸಿನಿಮಾ ತಾರೆಯರಿಂದ ಹಿಡಿದು ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್‌ಗಳ ವರೆಗೂ ಈ ರಿಯಾಲಿಟಿ ಶೋಗೆ ಹೋಗುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ.
ಇತ್ತೀಚೆಗಷ್ಟೆ ಭಾರತದಲ್ಲಿ ಬಿಗ್ ಬಾಸ್ ಹಿಂದಿ ಹಾಗೂ ತೆಲುಗು ಮುಕ್ತಾಯಗೊಂಡಿದೆ. ಅದರಲ್ಲೂ ಬಿಗ್ ಬಾಸ್ ತೆಲುಗು 9 ಕೆಲವು ದಿನಗಳ ಹಿಂದಷ್ಟೇ ಮುಕ್ತಾಯಗೊಂಡಿದೆ. ಈ ಸೀಸನ್‌ನಲ್ಲಿ ಹಲವು ಪ್ರತಿಭೆಗಳು ತಮ್ಮ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಪ್ರತಿ ಸೀಸನ್‌ನಲ್ಲಿ ಕೆಲವು ಪ್ರತಿಭೆಗಳು ಸಿಕ್ಕಾಪಟ್ಟೆ ಮನರಂಜನೆ ನೀಡಿದ್ದಾರೆ. ಮತ್ತೆ ಕೆಲವರು ವಿವಾದಗಳನ್ನು ಸೃಷ್ಟಿಸಿದ್ದಾರೆ. ಇನ್ನು ಕೆಲವರು ತಮ್ಮ ಹಾಸ್ಯ ಪ್ರಜ್ಞೆಯಿಂದ ಮಿಂಚಿ ಹೊರ ಬಂದಿದ್ದಾರೆ.

ಈ ಬಾರಿ ಬಿಗ್ ಬಾಸ್ ಸೀಸನ್ 9ರಲ್ಲಿ ತೆಲುಗಿನ ವಿವಾದಾತ್ಮಕ ಜ್ಯೋತಿಷಿ ವೇಣುಸ್ವಾಮಿ ಪ್ರವೇಶ ಮಾಡುತ್ತಾರೆಂಬ ಸುದ್ದಿ ಕೇಳಿ ಬಂದಿತ್ತು. ಕೆಲವು ಸೀಸನ್‌ಗಳಿಂದ ಇವರ ಹೆಸರು ಕೇಳಿ ಬರುತ್ತಲೇ ಇತ್ತು. ಅದರಲ್ಲೂ ಸೀಸನ್ 9ರಲ್ಲಿ ವೇಣುಸ್ವಾಮಿ ಬಂದೇ ಬರುತ್ತಾರೆಂಬ ಪುಕಾರು ಹಬ್ಬಿತ್ತು. ಆದರೆ ಈ ಪುಕಾರು ನಿಜವಾಗಿದ್ದು, ವೇಣು ಸ್ವಾಮಿ ಈ ಆಫರ್ ಅನ್ನು ಯಾಕೆ ತಿರಸ್ಕರಿಸಿದ್ದರು? ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 8 ಆರಂಭದ ಸಮಯದಿಂದಲೂ ವೇಣುಸ್ವಾಮಿ ಹೆಸರು ಚರ್ಚೆಯಲ್ಲಿದೆ. ಈ ಬಾರಿ ಸೀಸನ್ 9ರಲ್ಲಿ ಬಂದೇ ಬರುತ್ತಾರೆಂದು ಹೇಳಲಾಗಿದ್ದರೂ, ಕೊನೆಯ ಕ್ಷಣಗಳಲ್ಲಿ ಹಿಂದೆ ಸರಿದರು. ವೇಣುಸ್ವಾಮಿ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ವಿವಾಹದ ಬದುಕಿನ ಬಗ್ಗೆ ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕೊನೆಗೆ ಇದು ತೆಲಂಗಾಣದ ಮಹಿಳಾ ಆಯೋಗದವರೆಗೂ ತಲುಪಿತ್ತು. ಹೀಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಾರೆ ಎನ್ನಲಾಗಿತ್ತು. ಕೊನೆಗೆ ಆ ಆಫರ್ ಅನ್ನು ತಿರಸ್ಕರಿಸಿದರು ಎನ್ನಲಾಗಿದೆ.
ಇಂತಹದ್ದೊಂದು ಸುದ್ದಿ ಹರಿದಾಡುತ್ತಿರುವಾಗಲೇ ಒಂದು ಕಾಲದ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಒಂದು ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಬಿಗ್ ಬಾಸ್ ಸೀಸನ್ 9ರಿಂದ ಆಫರ್ ಬಂದಿತ್ತು. ಆದರೆ, ಆ ಆಫರ್ ಅನ್ನು ತಿರಸ್ಕರಿಸಿದ್ದಾಗಿ ರಿವೀಲ್ ಮಾಡಿದ್ದಾರೆ. ಹಾಗೇ ಹೊಸ ವರ್ಷದ ಸೆಲೆಬ್ರೆಷನ್ ಬಗ್ಗೆಯೂ ತಿಳಿಸಿದ್ದಾರೆ. "ಎಲ್ಲಾ ಕಡೆಯಲ್ಲಿಯೂ ನನ್ನನ್ನು ಸಹಿಸದ ಜನರೇ ಇದ್ದಾರೆ. ಜನವರಿ 1 ರಂದು ಮಾತ್ರ ವೇಣುಸ್ವಾಮಿ ಮದ್ಯ ಸೇವಿಸುವುದಿಲ್ಲ. ಆದರೆ, ಡಿಸೆಂಬರ್ 31ರಂದು ಕುಡಿಯುತ್ತಾನೆಂದು ಹೇಳುತ್ತಾರೆ. ಅಸಲಿಗೆ ನಾನು ಹೊರಗೆ ಹೋಗುವುದಿಲ್ಲ. ಒಮ್ಮೆ ಸೆಲೆಬ್ರಿಟಿ ಸ್ಥಾನಮಾನ ಪಡೆದ ನಂತರ ನಾನು ವಿವಾದಿತ ವ್ಯಕ್ತಿಯಾಗಿಟ್ಟಿದ್ದೇನೆ. ನನಗೆ ಪಬ್‌ಗಳಿಗೆ ಹೋಗುವುದೆಂದರೆ ಇಷ್ಟ. ಈಗ ಹೊರಗೆ ಹೋಗದಿರಲು ಜನರಿಂದ ಬರುವ ನೆಗೆಟಿವ್ ಕಮೆಂಟ್ಸ್ ಎಂದು ಹೇಳಿದ್ದಾರೆ.
ಹಾಗೇ ಅವರು ಜಾತಕ ಹೇಳುವ ಬಗ್ಗೆನೂ ಹೇಳಿಕೊಂಡಿದ್ದಾರೆ. "ನನಗೆ ಮಾಹಿತಿ ಜಾತಕಗಳ ಮೂಲಕ ಸಿಗುವುದಿಲ್ಲ. ನಾನು ಪಬ್‌ಗೆ ಹೋಗಿ ಕೂತರೆ ವಿಚ್ಛೇದನ ಪಡೆಯೋರು ಬಂದು ಮಾತನಾಡುತ್ತಾರೆ. ಅಂತಹವರನ್ನು ಚಪ್ಪಲಿಯಿಂದ ಹೊಡೆಯಬೇಕು. ನನ್ನನ್ನು ಟೀಕಿಸಲು ಅವರು ಎಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆಂದರೆ, ಅವರನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದ ಪರಿಸ್ಥಿತಿಯಿದೆ. ನಾನು ಎಲ್ಲಿಗೆ ಹೋದರೂ ನನಗೆ ಸಮಸ್ಯೆ ಎದುರಾಗುತ್ತೆ. ಡಿಸೆಂಬರ್ 31ರ ರಾತ್ರಿ ನಾನು ಮನೆಯಲ್ಲಿ ಇಷ್ಟವಾದ ಆಹಾರ ತರಿಸಿಕೊಂಡು, ಹಾಸ್ಯ ಸಿನಿಮಾಗಳನ್ನು ನೋಡಿ ಆನಂದಿಸುತ್ತೇನೆ. ರಾತ್ರಿ 11:30ರ ಹೊತ್ತಿಗೆ ಮಲಗುತ್ತೇನೆ." ಎಂದು ವೇಣುಸ್ವಾಮಿ ಹೇಳಿದ್ದಾರೆ.
ಹಾಗೇ "ನಾನು ಕಾರು ಖರೀದಿಸಿದರೆ, ಐಫೋನ್ ಖರೀದಿಸಿದರೆ ನಿದ್ರೆ ಮಾಡದ ಮನುಷ್ಯರಿದ್ದಾರೆ. ಕಲಿಯುಗದಲ್ಲಿ, ತೆಲುಗು ರಾಜ್ಯಗಳಲ್ಲಿ ಇರುವಷ್ಟು ಭೀಕರವಾದ ಅಸೂಯೆ ಮತ್ತು ದ್ವೇಷ ಪ್ರಪಂಚದ ಬೇರೆಲ್ಲೂ ಇಲ್ಲ. ದೇಶ, ಕಾಲ, ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ವರ್ತಿಸಬೇಕು. ಸಾಧ್ಯವಾದಷ್ಟು ಖಾಸಗಿ ಜೀವನವೇ ನನಗೆ ಇಷ್ಟ. ಒಂದು ವೇಳೆ ನಾನು ಎಂಜಾಯ್ ಮಾಡಬೇಕೆಂದು ಅನಿಸಿದರೆ, ಬೇರೆ ದೇಶಕ್ಕೆ ಹೋದಾಗ ಬಹಳ ಆನಂದಿಸುತ್ತೇನೆ" ಎಂದು ವೇಣುಸ್ವಾಮಿ ಹೇಳಿದ್ದಾರೆ.


Click it and Unblock the Notifications











