Samantha: ವಿವಾದಾತ್ಮಕ ಸೆಲೆಬ್ರೆಟಿ ಜ್ಯೋತಿಷ್ಯ ಮತ್ತೆ ಪ್ರತ್ಯಕ್ಷ; ಸಮಂತಾ 2ನೇ ಮದುವೆ ಬಗ್ಗೆ ವೇಣು ಸ್ವಾಮಿ ಹೇಳಿದ್ದೇನು?
ಸಮಂತಾ 2ನೇ ಮದುವೆ ಕಳೆದ ಎರಡು ಮೂರು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಸಮಂತಾ ಸಿನಿಮಾಗಳಿಗಿಂತ ಹೆಚ್ಚಾಗು ವೈಯಕ್ತಿಕ ಜೀವನದಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಬಗ್ಗೆನೇ ಚರ್ಚೆಯಾಗುತ್ತಿತ್ತು. ಡಿಸೆಂಬರ್ 1ರಂದು 2ನೇ ಮದುವೆಯ ಬಳಿಕ ಸಮಂತಾ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ.
ಸಮಂತಾ ಹಾಗೂ ಪತಿ, ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಇಬ್ಬರಿಗೂ ಇದು 2ನೇ ಮದುವೆ. ಹೀಗಾಗಿ ಈ ಜೋಡಿಯ ಎರಡನೇ ಮದುವೆ ಭಾರೀ ಸುದ್ದಿಯಾಗುತ್ತಿದೆ. ಕೆಲವರು ನವ ದಂಪತಿಗಳಿಗೆ ಶುಭ ಕೋರುತ್ತಿದ್ದಾರೆ. ಇನ್ನು ಕೆಲವರು ಈ ಮದುವೆಯನ್ನು ಪರೋಕ್ಷವಾಗಿ ಟೀಕಿಸುತ್ತಿದ್ದಾರೆ. ಹೀಗಾಗಿ ಕಳೆದ ಮೂರು ದಿನಗಳಿಂದ ಸಮಂತಾ ಮದುವೆ ಹಾಟ್ ಟಾಪಿಕ್ ಆಗಿಬಿಟ್ಟಿದೆ.

ಮೊದಲ ಮದುವೆ ಮುರಿದು ಬಿದ್ದ ಬಳಿಕ ಸಮಂತಾ ಹಾಗೂ ರಾಜ್ ಇಬ್ಬರೂ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಈಶಾ ಫೌಂಡೇಶನ್ ಯೋಗ ಸೆಂಟರ್‌ನದ ಲಿಂಗಭೈರವಿ ದೇವಸ್ಥಾನದಲ್ಲಿ ಈ ಜೋಡಿ ಭೂತಶುದ್ಧಿ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ಮತ್ತೆ ಸಮಸ್ಯೆ ಆಗದೇ ಇರಲಿ ಎಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಂತೆ ಇದೆ. ಈ ಮಧ್ಯೆ ವಿವಾದಾತ್ಮಕ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಮತ್ತೆ ಪ್ರತ್ಯಕ್ಷ ಆಗಿದ್ದು ಸಮಂತಾ 2ನೇ ಮದುವೆ ಬಗ್ಗೆ ಮಾತಾಡಿದ್ದಾರೆ. ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ತೆಲುಗಿನ ವಿವಾದಾತ್ಮಕ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಈ ಹಿಂದೆ ಸಮಂತಾ-ನಾಗಚೈತನ್ಯ ವಿಚಾರದಲ್ಲೂ ಭವಿಷ್ಯ ನುಡಿದಿದ್ದರು. ವೇಣುಸ್ವಾಮಿ ಹೇಳಿದಂತೆ ಭವಿಷ್ಯ ನಿಜವಾಗಿತ್ತು. ಇನ್ನು ತೆಲುಗಿನ ನಟಿಯರು ಸ್ಟಾರ್ ನಟಿಯರು ವಿಶೇಷ ಪೂಜೆಗಳನ್ನು ಮಾಡಿಸುವುದಕ್ಕೆ ವೇಣುಸ್ಬಾಮಿಯ ಮೊರೆ ಹೋಗುತ್ತಾರೆ. ಸಾಕಷ್ಟು ನಟಿಯವರು ವೇಣುಸ್ವಾಮಿಯ ಜೊತೆ ವಿಶೇಷ ಪೂಜೆಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಆದರೆ, ಇತ್ತೀಚೆಗೆ ತೆಲುಗು ತಾರೆಯರ ವೃತ್ತಿ ಬದುಕು ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಭವಿಷ್ಯ ನುಡಿದು ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯ ಮುರಿದು ಬೀಳುತ್ತೆ. ಇಬ್ಬರೂ ವಿಚ್ಚೇದನ ಕೊಟ್ಟು ಬೇರೆಯಾಗುತ್ತಾರೆಂದು ಈ ಹಿಂದೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಸಮಂತಾ-ನಾಗಚೈತನ್ಯ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಇದೇ ವೇಳೆ ಇವರಿಬ್ಬರೂ 2ನೇ ಮದುವೆ ಆಗುತ್ತಾರೆಂದು ಹೇಳಿದ್ದರು. ಅದರಂತೆ ಈಗ ಇಬ್ಬರೂ 2ನೇ ಮದುವೆಯಾಗಿದ್ದಾರೆ. ಅದರಲ್ಲೂ ಸಮಂತಾ 2ನೇ ಮದುವೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಸಮಂತಾ ಮದುವೆಯಾಗುತ್ತಿದ್ದಂತೆ ವೇಣುಸ್ವಾಮಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ.

ಸಮಂತಾ ಎರಡನೇ ಮದುವೆ ಆಗುತ್ತಿದ್ದಂತೆ ವೇಣುಸ್ವಾಮಿ ಕೊಟ್ಟ ಹೇಳಿಕೆಗಳು ವೈರಲ್ ಆಗುತ್ತಿವೆ. "ಸಮಂತಾ ಮದುವೆಯಾಗುತ್ತಿದ್ದಂತೆ ಬೆಳಗ್ಗೆಯಿಂದಲೂ ನನಗೆ ಹಲವು ಫೋನ್ ಕರೆಗಳು ಬರುತ್ತಿವೆ. ಸಮಂತಾ ಎರಡನೇ ಮದುವೆಯಾಗಿದ್ದಾರೆ. ಅವರ ಜೀವನ ಮುಂದೆ ಹೇಗಿರುತ್ತೆ? ಎಂದು ಜನರು ಕೇಳುತ್ತಿದ್ದಾರೆ. ಆದರೆ, ನಾನು ಯಾರೊಬ್ಬರ ಬಗ್ಗೆನೂ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೋಗುತ್ತೇನೆ" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ವೇಣುಸ್ವಾಮಿ ಟಾಲಿವುಡ್ ಟಾಪ್ ಸೆಲೆಬ್ರೆಟಿಗಳ ವೈಯಕ್ತಿಕ ಜೀವನದ ಬಗ್ಗೆ ಭವಿಷ್ಯ ನುಡಿಯುತ್ತಿದ್ದರು. ಪ್ರಭಾಸ್ ಮದುವೆ, ನಾಗಾರ್ಜುನ ಮಕ್ಕಳ ವೈವಾಹಿಕ ಜೀವನ, ಚಿರಂಜೀವಿ ಮಗಳ ವಿಚ್ಚೇದನ ಸೇರಿದಂತೆ ಹಲವರ ನಿದ್ದೆಗೆಡಿಸಿದ್ದರು. ಆಗ ಟಾಲಿವುಡ್ ಮಂದಿ ವೇಣುಸ್ವಾಮಿ ಹೇಳಿಕೆಗಳನ್ನು ಖಂಡಿಸಿದ್ದರು. ಅವರ ಅಭಿಮಾನಿಗಳು ವೇಣುಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಹೀಗಾಗಿ ವೇಣುಸ್ವಾಮಿ ಸಮಂತಾ 2ನೇ ಮದುವೆ ಬಗ್ಗೆ ಏನೂ ಮಾತಾಡಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











