ಪವಿತ್ರಾ ಲೋಕೇಶ್ ಮತ್ತು ನರೇಶ್ ಮೇಲೆ ಕಿಡಿಕಾರಿದ ತೆಲುಗು ನಟಿ ಶ್ರೀರೆಡ್ಡಿ!

ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿವಾದ ಎರಡು ರಾಜ್ಯಗಳಲ್ಲೂ ಸಂಚಲನ ಸೃಷ್ಟಿಸಿದೆ. ಇಬ್ಬರ ಅಫೇರ್ ಈಗ ಬೀದಿಗೆ ಬಂದಿದೆ. ಕಳೆದೆರಡು ವಾರಗಳಿಂದ ಪವಿತ್ರಾ ಲೋಕೇಶ್, ನರೇಶ್ ಹಾಗೂ ರಮ್ಯಾ ರಘುಪತಿ ರಂಪಾಟ ನಡೆಯುತ್ತಲೇ ಇದೆ. ಈಗ ಇದೇ ವಿಚಾರವಾಗಿ ನಟಿ ಶ್ರೀರೆಡ್ಡಿ ಸೆನ್ಸೇಷನಲ್ ಕಮೆಂಟ್ ಮಾಡಿದ್ದಾರೆ.

ಶ್ರೀರೆಡ್ಡಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದು ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಇಬ್ಬರ ಮೇಲೂ ಹಲವು ಆರೋಪಗಳನ್ನು ಮಾಡಿದ್ದಾರೆ.

ನರೇಶ್ ಪತ್ನಿ ಮೂರನೇ ಪತ್ನಿ ರಮ್ಯಾ ರಘುಪತಿಗೆ ಅಡ್ಡಿಪಡಿಸಲು ನೀವು ಯಾರು? ರಮ್ಯಾ ಕ್ಯಾರೆಕ್ಟರ್ ಬಗ್ಗೆ ಮಾತನಾಡಲು ನೀವು ಯಾರು? ಅವರ ಬಗ್ಗೆ ಮಾತಾಡಲು ನಿನಗೆ ಯಾವ ಹಕ್ಕಿದೆ? ಬೇರೆಯವರ ಬದುಕಿಗೆ ಏಕೆ ಬೆಂಕಿ ಹಚ್ಚುತ್ತಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅಷ್ಟಕ್ಕೂ ಶ್ರೀರೆಡ್ಡಿ ಹೇಳಿದ್ದೇನು? ಆಕೆಯ ಮೇಲೆ ಏನು ಆರೋಪ ಏನು ಎಂಬುವುದನ್ನು ತಿಳಿಯಲು ಮುಂದೆ ಓದಿ.

ನರೇಶ್ ವಿರುದ್ಧ ಕಿಡಿಕಾರಿದ ಶ್ರೀ ರೆಡ್ಡಿ

ನರೇಶ್ ವಿರುದ್ಧ ಕಿಡಿಕಾರಿದ ಶ್ರೀ ರೆಡ್ಡಿ

ಶ್ರೀರೆಡ್ಡಿ ಮೀಟೂ ಆಂದೋಲನ ಮಾಡುವಾಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇವರ ಮೇಲೆ ಕಿಡಿಕಾರಿದ್ದರು. ಆ ವೇಳೆ ಶ್ರೀರೆಡ್ಡಿಯನ್ನು ಬ್ಯಾನ್ ಮಾಡಿದ್ದರು. ಇದನ್ನು ಶ್ರೀ ರೆಡ್ಡಿನೆನೆಪಿಸಿಕೊಂಡಿದ್ದಾರೆ. ಶ್ರೀರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ಮಾಡಿದಾಗ ನರೇಶ್ ಆ್ಯಸಿಡ್‌ನಿಂದ ಕೈ ತೊಳೆಯಬೇಕು ಎಂದು ಕಮೆಂಟ್ ಮಾಡಿದ್ದರು. ಅದನ್ನು ಶ್ರೀ ರೆfಡಿ ಈಗ ನೆನಪಿಸಿಕೊಂಡಿದ್ದಾರೆ

ಅಪಹಾಸ್ಯ ಮಾಡಿದವರ ವಿರುದ್ಧ ಕಿಡಿ

ಅಪಹಾಸ್ಯ ಮಾಡಿದವರ ವಿರುದ್ಧ ಕಿಡಿ

ಪವಿತ್ರ ಲೋಕೇಶ್, ನರೇಶ್, ಕರಾಟೆ ಕಲ್ಯಾಣಿ, ಪವನ್ ಕಲ್ಯಾಣ್ ಹೆಸರನ್ನು ಶ್ರೀರೆಡ್ಡಿ ಮತ್ತೆ ಪ್ರಸ್ತಾಪಿಸಿದ್ದಾರೆ. ಮೀಟೂ ಪ್ರತಿಭಟನೆಯ ವೇಳೆ ಇವರೆಲ್ಲರೂ ಅಪಹಾಸ್ಯ ಮಾಡಿದ್ದರು. ಈಗ ಅವರ ಜೀವನ ಏನಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಿಡಿಕಾರಿದ್ದಾರೆ. ಪವಿತ್ರಾ ಹಲವರ ಜೊತೆ ಸಂಬಂಧ ಹೊಂದಿದ್ದು, ಹಲವರ ಜೀವನ ಹಾಳು ಮಾಡಿದ್ದಾರೆ ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.

ರಮ್ಯಾ ಮೇಲಿನ ಆರೋಪಕ್ಕೆ ಕಿಡಿ

ರಮ್ಯಾ ಮೇಲಿನ ಆರೋಪಕ್ಕೆ ಕಿಡಿ

ಇತ್ತೀಚೆಗೆ ಪವಿತ್ರಾ ಲೋಕೇಶ್ ಅವರ ಮೇಲೆ ಸ್ಟಿಂಗ್ ಅಪರೇಷನ್ ಮಾಡಿದ್ದರ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿರುವುದಾಗಿ ಹೇಳಿದ್ದಾರೆ. ಇನ್ನೊಂದು ಕಡೆ ನರೇಶ್ ಇದೆಲ್ಲವನ್ನೂ ರಮ್ಯಾ ರಘುಪತಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವುದಕ್ಕೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಮೈಸೂರು ಹೋಟೆಲ್‌ನಲ್ಲಿ ಗಲಾಟೆ

ಮೈಸೂರು ಹೋಟೆಲ್‌ನಲ್ಲಿ ಗಲಾಟೆ

ಮೈಸೂರಿನ ಹೋಟೆಲ್ ಒಂದರಲ್ಲಿ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಇದ್ದರು. ಆಗ ಅಲ್ಲಿಗೆ ಹೋಗಿದ್ದ ಪತ್ನಿ ರಮ್ಯಾ ರಘುಪತಿ ರಂಪಾಟ ಮಾಡಿದ್ದರು. ಈ ವೇಳೆ ಪವಿತ್ರಾ ಲೋಕೇಶ್‌ಗೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಚಪ್ಪಲಿ ತೋರಿಸಿದ ವಿಡಿಯೋ ಕೂಡ ವೈರಲ್ ಆಗಿದೆ.

More from Filmibeat

English summary
Controversy Queen Sri Reddy Slams VK Naresh and Kannada Actress Pavitra Lokesh, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X