ನಟಸಾರ್ವಭೌಮ ಸಂಗೀತ ನಿರ್ದೇಶಕನ ಮಾಜಿ ಪತ್ನಿ ಜೊತೆ ಶಿವಕಾರ್ತಿಕೇಯನ್ ಅಫೇರ್? ಡಿ ಇಮಾನ್ ಆರೋಪಕ್ಕೆ ತಿರುಗೇಟು!
ತಮಿಳು ಚಿತ್ರರಂಗದ ಸ್ಟಾರ್ ನಟ ಶಿವಕಾರ್ತಿಕೇಯನ್ ಮೇಲೆ ಸಂಗೀತ ನಿರ್ದೇಶಕ ಡಿ ಇಮಾನ್ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಮಾಜಿ ಪತ್ನಿ ಮೋನಿಯಾ ತಿರುಗೇಟು ನೀಡಿದ್ದು, ಶಿವಕಾರ್ತಿಕೇಯನ್ ಬೆಂಬಲಕ್ಕೆ ನಿಂತಿದ್ದಾರೆ.
ಡಿ ಇಮಾನ್ ತಮಿಳು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ನಟಸಾರ್ವಭೌಮ' ಸಿನಿಮಾಗೂ ಇವರೇ ಸಂಗೀತ ನೀಡಿದ್ದರು. ಇತ್ತೀಚೆಗೆ ಈ ಸಂಗೀತ ನಿರ್ದೇಶಕ ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ವಿರುದ್ಧ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದ್ದರು.

ಮೊದಲ ಪತ್ನಿ ಮೋನಿಕಾ ಜೊತೆಗಿನ ವಿಚ್ಛೇದನಕ್ಕೆ ನಟ ಶಿವಕಾರ್ತಿಕೇಯನ್ ಕಾರಣ ಅಂತ ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ವೈರಲ್ ಆಗಿದ್ದು, ಮಾಜಿ ಪತ್ನಿ ಮೋನಿಕಾ ತಿರುಗೇಟು ಕೊಟ್ಟಿದ್ದಾರೆ. ನಟ ಶಿವಕಾರ್ತಿಕೇಯನ್ ಪರವಾಗಿ ನಿಂತಿದ್ದಾರೆ. ಅಷ್ಟಕ್ಕೂ ಸಂಗೀತ ನಿರ್ದೇಶನ ಡಿ ಇಮಾನ್, ಮಾಜಿ ಪತ್ನಿ ಮೋನಿಕಾ, ಶಿವಕಾರ್ತಿಕೇಯನ್ ನಡುವಿನ ವಿವಾದವೇನು? ತಿಳಿಯಲು ಮುಂದೆ ಓದಿ.
"ಶಿವಕಾರ್ತಿಕೇಯನ್ ದ್ರೋಹ ಮರೆಯೋದಿಲ್ಲ"
ಸಂಗೀತ ನಿರ್ದೇಶಕ ಡಿ. ಇಮಾನ್ ಮೊದಲ ಪತ್ನಿ ಮೋನಿಕಾರೊಂದಿಗೆ ವಿಚ್ಚೇದನ ಪಡೆದಿದ್ದಾರೆ. ಇದಕ್ಕೆ ಶಿವಕಾರ್ತಿಕೇಯನ್ ಕಾರಣ ಅಂತ ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದು ವೈರಲ್ ಆಗುತ್ತಿದೆ. ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ "ಶಿವಕಾರ್ತಿಕೇಯನ್ ಅನ್ನು ಈ ಜನ್ಮದಲ್ಲಿ ಮರೆಯೋದಿಲ್ಲ. ಅವರು ನನಗೆ ದೊಡ್ಡ ದ್ರೋಹ ಮಾಡಿದ್ದಾರೆ. ನನ್ನ ಮಕ್ಕಳ ಭವಿಷ್ಯದ ದೃಷ್ಠಿಯಂದ ಅವರು ಮಾಡಿದ ದ್ರೋಹವೇನು ಅನ್ನೋದನ್ನು ಹೇಳುವುದಿಲ್ಲ." ಎಂದು ಮಾಜಿ ಪತ್ನಿಯೊಂದಿಗೆ ಶಿವಕಾರ್ತಿಕೇಯನ್ ಅಫೇರ್ ಇಟ್ಟುಕೊಂಡಿದ್ದರು ಎಂದು ಪರೋಕ್ಷವಾಗಿ ಆರೋಪಿಸಿದ್ದರು.

ಮೊದಲ ಪತ್ನಿಗೆ ಡಿ ಇಮಾನ್ ವಿಚ್ಛೇದನ
ಸಂಗೀತ ನಿರ್ದೇಶಕ ಡಿ ಇಮಾನ್ ಮೊದಲ ಪತ್ನಿ ಮೋನಿಕಾ ರಿಚರ್ಡ್‌ರನ್ನು 2008ರಲ್ಲಿ ವಿವಾಹವಾಗಿದ್ದರು. ಮದುವೆಯಾದ 13 ವರ್ಷಗಳ ಬಳಿಕ, ಅಂದರೆ, 2021 ಡಿಸೆಂಬರ್‌ನಲ್ಲಿ ವಿಚ್ಛೇದನ ನೀಡಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ವಿಚ್ಛೇದನ ನೀಡಿದ ಆರು ತಿಂಗಳಲ್ಲಿಯೇ ಅಮೆಲಿ ಎಂಬುವವರೊಂದಿಗೆ ಎರಡನೇ ವಿವಾಹವಾಗಿದ್ದಾರೆ. ಯೂಟ್ಯೂನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಪತ್ನಿ ಹಾಗೂ ಶಿವಕಾರ್ತಿಕೇಯನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಕ್ಕೆ ಮಾಜಿ ಪತ್ನಿ ಮೋನಿಕಾ ತಿರುಗೇಟು ನೀಡಿದ್ದಾರೆ.
ವಿಚ್ಛೇದನಕ್ಕೆ ಕಾರಣ ತಿಳಿಸಿದ ಮಾಜಿ ಪತ್ನಿ
ಶಿವಕಾರ್ತಿಕೇಯನ್ ತನಗೆ ದ್ರೋಹ ಮಾಡಿದ್ದಾರೆಂದು ಇಮಾನ್ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅಫೇರ್ ಅನ್ನೋ ವಿಷಯಕ್ಕೆ ಚರ್ಚೆಯಾಗುತ್ತಿತ್ತು. ಈ ವಿಚಾರಕ್ಕೆ ಇಮಾನ್ ಮಾಜಿ ಪತ್ನಿ ಮೋನಿಕಾ ತಮ್ಮ ವಿಚ್ಛೇದನಕ್ಕೆ ಶಿವಕಾರ್ತಿಕೇಯನ್ ಕಾರಣ ಎಂಬ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. "ನಟ ಶಿವಕಾರ್ತಿಕೇಯನ್ ನಮ್ಮ ಫ್ಯಾಮಿಲಿ ಫ್ರೆಂಡ್. ಅವರು ತುಂಬಾ ಓಳ್ಳೆಯ ವ್ಯಕ್ತಿ. ಇಮಾನ್ ಜೊತೆ ಶಿವಕಾರ್ತಿಕೇಯನ್ ಉತ್ತಮ ಸ್ನೇಹವನ್ನು ಹೊಂದಿದ್ದರು. ಒಬ್ಬ ಸ್ನೇಹಿತನಾಗಿ ಯಾವಾಗಲೂ ನಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದಾರೆ. ಇಮಾನ್ ಮತ್ತು ನಾನು ವಿಚ್ಛೇದನ ಪಡೆಯಬಾರದೆಂದು ನಮ್ಮ ನಡುವೆ ಪಂಚಾಯ್ತಿ ಮಾಡಲು ಬಂದಿದ್ದರು. ಇಮಾನ್ ವಿಚ್ಛೇದನದ ನಿರ್ಧಾರವನ್ನು ಶಿವಕಾರ್ತಿಕೇಯನ್ ಬೆಂಬಲಿಸಲಿಲ್ಲ. ನ್ಯಾಯದ ಪರವಾಗಿ ನಿಂತರು. ಶಿವಕಾರ್ತಿಕೇಯನ್ ಮಾಡಿದ್ದು ಇಮಾನ್‌ಗೆ ಇಷ್ಟವಾಗಲಿಲ್ಲ." ಎಂದು ಮಾಜಿ ಪತ್ನಿ ಮೋನಿಕಾ ಹೇಳಿದ್ದಾರೆ.
"ಈ ಕಾರಣಕ್ಕೆ ನಂಬಿಕೆ ದ್ರೋಹ ಎಂದಿರಬಹುದು"
ಪಂಚಾಯ್ತಿ ವೇಳೆ ನಟ ಶಿವಕಾರ್ತಿಕೇಯನ್, ಇಮಾನ್‌ಗೆ ಬೆಂಬಲ ನೀಡದಿರುವುದಕ್ಕೆ ನಂಬಿಕೆ ದ್ರೋಹ ಎಂದು ಹೇಳಿರಬಹುದೆಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ಹೊರಗಿನವರು ಈ ಹೇಳಿಕೆಯನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಈ ಹೇಳಿಕೆ ಬಲಿಯಾದವರು ಶಿವಕಾರ್ತಿಕೇಯನ್. ಇದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ." ಎಂದು ಮಾಜಿ ಪತ್ನಿ ಮೋನಿಕಾ ಹೇಳಿಕೆ ಕೊಟ್ಟಿದ್ದಾರೆ.
ಶಿವಕಾರ್ತಿಕೇಯನ್-ಇಮಾನ್ ಹಿಟ್ ಜೋಡಿ
ಶಿವಕಾರ್ತಿಕೇಯನ್ ನಟಿಸಿದ ಸಿನಿಮಾಗಳಿಗೆ ಇಮಾನ್ ಸಂಗೀತ ನೀಡಿದ್ದರು. 'ಮನಂಕೋತಿ ಪರ್ವಿ', 'ವರೂತಪದತ ವಲಿಬರ್ ಸಂಗಮ', 'ರಜಿನಿ ಮುರುಗನ್', 'ನಮ್ಮ ವುಟ್ಟಿಪಿಳ್ಳೈ' ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಆ ಸಿನಿಮಾಗಳಲ್ಲಿ ಕಾಣಿಸಿಕೊಂಡ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು.


Click it and Unblock the Notifications











