Dasara Box Office Prediction: ಅಮೆರಿಕದಲ್ಲಿ ದಾಖಲೆ ಗಳಿಕೆ.. ಭಾರತದಲ್ಲಿ 70% ಫುಲ್.. ಬಾಕ್ಸಾಫೀಸ್ ಲೆಕ್ಕಾಚಾರವೇನು?
'ದಸರಾ' ಈ ವಾರ ರಿಲೀಸ್ ಆಗಿರುವ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾ. ನಾನಿ-ಕೀರ್ತಿ ಸುರೇಶ್ ಕಾಂಬಿನೇಷನ್ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್ ಕಬ್ಜ ಮಾಡಿವೆ. ಈಗ ಮತ್ತೊಂದು ತೆಲುಗು ಸಿನಿಮಾದ ಕಲೆಕ್ಷನ್ ಹೇಗಿರುತ್ತೆ ಅನ್ನೋದನ್ನು ಲೆಕ್ಕಾಚಾರ ಹಾಕುತ್ತಿವೆ.
ಉಳಿದ ಸ್ಟಾರ್ ಸಿನಿಮಾಗಳಂತೆ ನಾನಿಯ ಸಿನಿಮಾ ಕೂಡ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿದೆ. ಭಾರತದಲ್ಲಿ ಬಿಡುಗಡೆಗೂ ಮುನ್ನ ಅಮೆರಿಕದಲ್ಲಿ ಪ್ರೀಮಿಯರ್ ಕಂಡಿದೆ. ಇತ್ತೀಚೆಗೆ ನಾನಿ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದು ತೀರಾ ಕಡಿಮೆ. ಹೀಗಾಗಿ ಟಾಲಿವುಡ್ ಮಂದಿ 'ದಸರಾ' ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುತ್ತೆ ಅನ್ನೋ ನಿರೀಕ್ಷೆ ಇಟ್ಟುಕೊಂಡಿದೆ.

'ದಸರಾ' ಇಂದು (ಮಾರ್ಚ್ 30) ರಿಲೀಸ್ ಆಗಿದೆ. ನಾನಿ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಬಾಕ್ಸಾಫೀಸ್ ಅಂದಾಜು ಲೆಕ್ಕಾಚಾರ ಹಾಕಿದ್ದಾರೆ. ಹಾಗಿದ್ರೆ, ಈ ಪ್ಯಾನ್ ಇಂಡಿಯಾ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್ ಏನಂತಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ದಸರಾ' ಫಸ್ಟ್ ಡೇ ಕಲೆಕ್ಷನ್ ಲೆಕ್ಕಾಚಾರವೇನು?
'ದಸರಾ' ಮೊದಲ ದಿನ ಉತ್ತಮ ಕಲೆಕ್ಷನ್ ಮಾಡುತ್ತೆ ಅನ್ನೋ ಲೆಕ್ಕಾಚಾರ ಹಾಕಲಾಗಿತ್ತು. ಯಾಕಂದ್ರೆ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪೈಪೋಟಿ ಮಾಡುವುದಕ್ಕೆ ದೊಡ್ಡ ಸಿನಿಮಾ ಯಾವುದೂ ಇಲ್ಲ. ಅಲ್ಲದೆ ಹಬ್ಬದ ಮೂಡಿನಲ್ಲಿ ಇದ್ದಾರೆ. ಅಲ್ಲದೆ ನಾನಿ ಇದೇ ಮೊದಲ ಬಾರಿಗೆ ಸಿಕ್ಕಾಪಟ್ಟೆ ರಗಡ್ ಆಗಿ ಮಾಸ್ ಲುಕ್ ಕೊಟ್ಟು, ಗ್ರ್ಯಾಂಡ್ ಆಗಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರದ ಪ್ರಕಾರ, 'ದಸರಾ' ಮೊದಲ ದಿನದ ಗಳಿಕೆ 20 ಕೋಟಿ ರೂ. ದಾಟುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಐದೂ ಭಾಷೆಗಳಿಂದ ಭಾರತದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು ಎಂದು ಅಂದಾಜಿಸಲಾಗಿದೆ. ಇನ್ನು ವಿದೇಶದ ಗಳಿಕೆ ಸೇರಿದರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಭಾರತದ ಪ್ರತಿಕ್ರಿಯೆ ಹೇಗಿದೆ?
'ದಸರಾ' ಸಿನಿಮಾಗೆ ಭಾರತದಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಥಿಯೇಟರ್‌ಗಳು ಸರಾಸರಿ ಶೇ.70ರಷ್ಟು ತುಂಬಿವೆ ಎಂದು ವರದಿಯಾಗಿವೆ. ಆದ್ರೆ, ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಟಿಕೆಟ್‌ಗಳು ಮಾರಾಟ ಆಗಿವೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಮುಂದಿನ ಮೂರು ದಿನಗಳು ನಿರ್ಮಾಣಕ ಆಗಿದ್ದು, ಉತ್ತಮ ಗಳಿಕೆ ಕಂಡರೆ, ನಾನಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗೆದ್ದಂತೆ. ಇನ್ನು ಹಿಂದಿ ಭಾಷೆಯಲ್ಲಿ ಅಡ್ವಾನ್ಸ್ ಬುಕಿಂಗ್ ನಿಂದಾನೇ 2.25 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
ಮೊದಲ ದಿನವೇ 'ದಸರಾ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನಿ, ಕೀರ್ತಿ ಸುರೇಶ್ ನಟನೆ ಸೂಪರ್ ಅಂತಿರೋ ಪ್ರೇಕ್ಷಕರು ನಿರೂಪಣೆ ಗೊಂದಲಮಯವಾಗಿದೆ ಎಂದು ಹೇಳುತ್ತಿದ್ದಾರೆ. ಆದರೂ, ಹೀಗಾಗಿ ಶುಕ್ರವಾರ, ಶನಿವಾರ, ಭಾನುವಾರ ಈ ಸಿನಿಮಾ ಎಷ್ಟು ಗಳಿಕೆ ಮಾಡುತ್ತೆ? ಅನ್ನೋ ಲೆಕ್ಕ ಸಿಗಬೇಕಿದೆ. ಆದರೆ, ಅಮೆರಿಕದಲ್ಲಿ ಸಿನಿಮಾಗೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಅಮೆರಿಕದಲ್ಲಿ 'ದಸರಾ' ಗಳಿಕೆ ಹೇಗಿದೆ?
'ದಸರಾ' ಮೊದಲು ಅಮೆರಿಕದಲ್ಲಿ ಪ್ರೀಮಿಯರ್ ಆಗಿದೆ. ಮೂಲಗಳ ಪ್ರಕಾರ, ಪ್ರೀಮಿಯರ್ ಹಾಗೂ ಮೊದಲ ದಿನದ ಕಲೆಕ್ಷನ್ ಸುಮಾರು 6 ರಿಂದ 7 ಲಕ್ಷ ಅಮೆರಿಕನ್ ಡಾಲರ್ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಈ ಮೂಲಕ ಸುಮಾರು 4 ರಿಂದ 5 ಕೋಟಿ ರೂ. ಕಲೆಕ್ಷನ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕ ಹಾಗೂ ಹಿಂದಿ ಬೆಲ್ಟ್‌ನಲ್ಲಿ 'ದಸರಾ' ಕಲೆಕ್ಷನ್ ಅವರ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಎಂದು ಹೇಳಾಗುತ್ತಿದೆ. ಅಲ್ಲದೆ ಅಜಯ್ ದೇವಗನ್ ಅಭಿನಯದ 'ಬೋಲಾ' ಸಿನಿಮಾ ಕಲೆಕ್ಷನ್ ಅನ್ನು ಹಿಂದಿಕ್ಕಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ. ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರೋದ್ರಿಂದ ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಹೇಗಿರುತ್ತೆ ಅನ್ನೋ ಪ್ರಶ್ನೆ ಎದ್ದಿದೆ.


Click it and Unblock the Notifications











