ದೀಪಿಕಾ ಹೃದಯ ಬಡಿತದಲ್ಲಿ ಏರು-ಪೇರು: ಪ್ರಭಾಸ್ ತೆಗೆದುಕೊಂಡ ನಿರ್ಧಾರವೇನು?

ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಪ್ರಭಾಸ್ , ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿರುವ ಸಿನಿಮಾ ಚಿತ್ರೀಕರಣ ವೇಳೆ ಡಿಪ್ಪಿಗೆ ಹಾರ್ಟ್‌ಬೀಟ್ ಹೆಚ್ಚಾಗಿತ್ತು. ಆ ಕಾರಣಕ್ಕೆ ಆಸ್ಪತ್ರೆ ದಾಖಲಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಬಳಿಕ ದೀಪಿಕಾ ಅನಾರೋಗ್ಯದ ಸುದ್ದಿಯೆಲ್ಲಾ ಸುಳ್ಳು ಎಂಬ ಮಾತು ಕೂಡ ಕೇಳಿ ಬಂದಿತ್ತು.

ದೀಪಿಕಾ ಪಡುಕೋಣೆ ಬಹಳ ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಜೊತೆ ನಟಿಸುತ್ತಿರುವುದರಿಂದ ಡಿಪ್ಪಿ ಫ್ಯಾನ್ಸ್‌ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ದೀಪಿಕಾ ಅನಾರೋಗ್ಯದ ಸುದ್ದಿ ಸಹಜವಾಗಿಯೇ ಆತಂಕ ಹೆಚ್ಚಿಸಿತ್ತು.

ಅದ್ಯಾವಾಗ ದೀಪಿಕಾ ಹಾರ್ಟ್‌ಬೀಟ್ ಹೆಚ್ಚಾಗಿದೆ ಎನ್ನುವ ಸುದ್ದಿ ಸದ್ದು ಮಾಡಲು ಶುರು ಮಾಡಿತ್ತು. ತಕ್ಷಣವೇ ಅದೆಲ್ಲಾ ಸುಳ್ಳು ಎಂಬ ಸುದ್ದಿ ಬಂದು ಅಭಿಮಾನಿಗಳು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದ್ರೀಗ ಟಾಲಿವುಡ್‌ನಲ್ಲಿ ದೀಪಿಕಾ ಅನಾರೋಗ್ಯವನ್ನು ಪುಷ್ಟೀಕರಿಸುವ ಸುದ್ದಿಯೊಂದು ಓಡಾಡುತ್ತಿದೆ. ಇದು ದೀಪಿಕಾ ಫ್ಯಾನ್ಸ್‌ ಆತಂಕಕ್ಕೆ ಕಾರಣವಾಗಿದ್ದರೆ. ಡಾರ್ಲಿಂಗ್ ಅಭಿಮಾನಿಗಳಲ್ಲಿ ಮತ್ತಷ್ಟು ಅಭಿಮಾನ ಹೆಚ್ಚಾಗಿದೆ.

ಮಸ್ತಾನಿ ಹೃದಯಕ್ಕೇನಾಗಿದೆ?

ಮಸ್ತಾನಿ ಹೃದಯಕ್ಕೇನಾಗಿದೆ?

ಮೂರು-ನಾಲ್ಕು ದಿನಗಳ ಹಿಂದೆ ದೀಪಿಕಾ ಪಡುಕೋಣೆ ಹೃದಯ ಬಡಿತದಲ್ಲಿ ಏರು-ಪೇರಾಗಿತ್ತು. ಈ ಕಾರಣಕ್ಕೆ ಆಯಾಸಗೊಂಡಿದ್ದ ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಸುದ್ದು ಆತಂಕ ಸೃಷ್ಟಿಸಿತ್ತು. ಆದ್ರೀಗ ಮತ್ತೆ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಹೋಗಿದ್ದು ನಿಜ ಆದರೆ ದಾಖಲಾಗಿಲ್ಲ. ಆರೋಗ್ಯ ತಪಾಸಣೆ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ನೂ ದೀಪಿಕಾ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

'ಪ್ರಾಜೆಕ್ಟ್ ಕೆ' ಶೂಟಿಂಗ್ ಮುಂದೂಡಿಕೆ

'ಪ್ರಾಜೆಕ್ಟ್ ಕೆ' ಶೂಟಿಂಗ್ ಮುಂದೂಡಿಕೆ

'ಪ್ರಾಜೆಕ್ಟ್ ಕೆ' ಶೂಟಿಂಗ್‌ಗಾಗಿ ದೀಪಿಕಾ ಹೈದರಾಬಾದ್‌ಗೆ ಬಂದಿದ್ದರು. ಈ ವೇಳೆ ದೀಪಿಕಾ ಆರೋಗ್ಯ ಕೆಟ್ಟಿದ್ದರಿಂದ ಪ್ರಭಾಸ್ ಸಿನಿಮಾ ಶೂಟಿಂಗ್ ಅನ್ನು ಪೋಸ್ಟ್‌ಪೋನ್ ಮಾಡುವಂತೆ ನಿರ್ದೇಶಕರಲ್ಲಿ ಮನವಿ ಮಾಡಿಕೊಂಡಿದ್ದಾರಂತೆ. ಒಂದು ವಾರಗಳ ಕಾಲ ಸಿನಿಮಾ ಶೂಟಿಂಗ್ ಮುಂದೂಡುವಂತೆ ಕೇಳಿಕೊಂಡಿದ್ದು, ಇಡೀ ಚಿತ್ರತಂಡ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಡಾರ್ಲಿಂಗ್ ಪ್ರಭಾಸ್ ತನ್ನ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಎಂದು ಟಾಲಿವುಡ್ ಹೇಳುತ್ತಿದೆ.

ನಿರ್ಧಾರ ದೀಪಿಕಾಳದ್ದೇ ಎಂದಿರೋ ಪ್ರಭಾಸ್ !

ನಿರ್ಧಾರ ದೀಪಿಕಾಳದ್ದೇ ಎಂದಿರೋ ಪ್ರಭಾಸ್ !

ವೈದ್ಯಕೀಯ ತಪಾಸಣೆ ಬಳಿಕ ದೀಪಿಕಾ ಪಡುಕೋಣೆ ಆರೋಗ್ಯವೀಗ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಸಿನಿಮಾ ಶೂಟಿಂಗ್ ಆರಂಭ ಆಗುತ್ತಿದೆ. ಆದರೆ, ಸಿನಿಮಾ ಯಾವಾಗ ರಿಲೀಸ್ ಆಗಬೇಕು ಅನ್ನುವ ನಿರ್ಧಾರವನ್ನು ದೀಪಿಕಾಗೆ ತೆಗೆದುಕೊಳ್ಳುವಂತೆ ಪ್ರಭಾಸ್ ಹೇಳಿದ್ದಾರೆ ಎಂದು ಬಾಲಿವುಡ್ ಲೈಫ್‌ ವರದಿ ಮಾಡಿದೆ.

ದೀಪಿಕಾ ಅನಾರೋಗ್ಯದ ಗೊಂದಲವೇನು?

ದೀಪಿಕಾ ಅನಾರೋಗ್ಯದ ಗೊಂದಲವೇನು?

ದೀಪಿಕಾ ಪಡುಕೋಣೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಆಸ್ಪತ್ರೆಯೊಂದಕ್ಕೆ ಹೋಗಿದ್ದು ನಿಜ. ಆಯಾಸ ಆಗಿದ್ದರಿಂದ ದೀಪಿಕಾ ವೈದ್ಯರನ್ನು ಭೇಟಿ ಮಾಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿಲ್ಲ. ಕೇವಲ ಚಿಕಿತ್ಸೆ ಪಡೆದಿದ್ದಾರೆ. ನಿರಂತರ ಶೂಟಿಂಗ್ ಕಾರಣದಿಂದ ಆಯಾಸಗೊಂಡಿರಬಹುದು ಎಂದು ವೈದ್ಯರು ಊಹೆ ಮಾಡಿದ್ದಾರೆ ಅಂತ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.

More from Filmibeat

English summary
Deepika Padukone Health Issue Prabhas Asked Director To Postpone Shooting, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X