ಪ್ರಭಾಸ್ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಪಾತ್ರ ರಿವೀಲ್

ನಾಗ್ ಅಶ್ವಿನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಪ್ರಭಾಸ್ ಜತೆ ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ದೀಪಿಕಾ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Recommended Video

Deepika Padukone a create record in Indian film industry | Filmibeat Kannada

ಕನ್ನಡದ 'ಐಶ್ವರ್ಯಾ' ಚಿತ್ರದ ನಂತರ ಅವರ ದಕ್ಷಿಣ ಭಾರತದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ರಜನಿಕಾಂತ್ ಮತ್ತು ದೀಪಿಕಾ ಪಡುಕೋಣೆಯ 'ಕೊಚಾಡಿಯನ್' ತಮಿಳು ಚಿತ್ರ ಬಿಡುಗಡೆಯಾಗಿತ್ತು. ಆದರೆ ಇದು ಅನಿಮೇಷನ್ ಚಿತ್ರ.

ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದೀಪಿಕಾ ಮಾಡಿದ್ದ ಟ್ವೀಟ್, ಪ್ರಭಾಸ್ ಅಭಿಮಾನಿಗಳನ್ನು ಕೆರಳಿಸಿತ್ತು. ಮುಂದೆ ಓದಿ..

ದೀಪಿಕಾ ವಿರುದ್ಧ ಅಸಮಾಧಾನ

ದೀಪಿಕಾ ವಿರುದ್ಧ ಅಸಮಾಧಾನ

ಪ್ರಭಾಸ್ ಅವರ 21ನೇ ಚಿತ್ರವಾಗಿರುವುದರಿಂದ ಇನ್ನೂ ಹೆಸರಿಡದ ಈ ಸಿನಿಮಾಕ್ಕೆ 'ಪ್ರಭಾಸ್ 21' ಎಂದು ಕರೆಯಲಾಗುತ್ತಿದೆ. ಇದಕ್ಕೆ ಆಕ್ಷೇಪ ಇರುವಂತೆ ದೀಪಿಕಾ, ಈ ಚಿತ್ರದ ಹೆಸರು 'ಪ್ರಭಾಸ್ 21' ಅಲ್ಲ ಎಂದಿದ್ದರು. ಜತೆಗೆ ಇದು ತ್ರಿಭಾಷಾ ಚಿತ್ರ- ಹಿಂದಿ, ತೆಲುಗು, ತಮಿಳಲ್ಲಿ ತಯಾರಾಗುತ್ತಿದೆ ಎಂದಿದ್ದರು. ಸಿನಿಮಾ ಮೂಲವಾಗಿ ತಯಾರಾಗುವುದು ತೆಲುಗಿನಲ್ಲಿ. ಆದರೆ ದೀಪಿಕಾ ಹಿಂದಿಯನ್ನು ಮೂಲ ಭಾಷೆ ಎಂಬಂತೆ ಉಲ್ಲೇಖಿಸಿತ್ತು ಅನೇಕರ ಸಿಟ್ಟಿಗೆ ಕಾರಣವಾಗಿತ್ತು.

ಡ್ಯಾನ್ಸರ್ ಆಗಿ ದೀಪಿಕಾ

ಡ್ಯಾನ್ಸರ್ ಆಗಿ ದೀಪಿಕಾ

ವೈಜ್ಞಾನಿಕ ಸಂಗತಿಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ದೀಪಿಕಾ ಮತ್ತು ಪ್ರಭಾಸ್ ಅವರ ಪಾತ್ರದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ದೀಪಿಕಾ ಇದರಲ್ಲಿ ನೃತ್ಯಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವು ಚಿತ್ರದಲ್ಲಿ ಅನೇಕ ತಿರುವುಗಳನ್ನು ನೀಡಲಿದೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರಾದ ಪ್ರಭಾಸ್-ದೀಪಿಕಾ

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರಾದ ಪ್ರಭಾಸ್-ದೀಪಿಕಾ

ಈ ಸಿನಿಮಾದ ಕಾರಣದಿಂದಾಗಿ ಸಾಮಾಜಿಕ ಜಾಲತಾಣದಲ್ಲಿಯೂ ದೀಪಿಕಾ ಮತ್ತು ಪ್ರಭಾಸ್ ಒಬ್ಬರನ್ನೊಬ್ಬರು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಐದು ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಪ್ರಭಾಸ್, ಫಾಲೋ ಮಾಡುತ್ತಿದ್ದದ್ದು ನಾಲ್ಕೇ ನಾಲ್ಕು ಮಂದಿಯನ್ನು. ಈಗ ಅದಕ್ಕೆ ದೀಪಿಕಾ ಪಡುಕೋಣೆ ಸೇರ್ಪಡೆಯಾಗಿದ್ದಾರೆ. ಇನ್ನು 50.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ದೀಪಿಕಾ ಪಡುಕೋಣೆ 126 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಈಗ ಪ್ರಭಾಸ್ ಅವರನ್ನೂ ಹಿಂಬಾಲಿಸಲು ಶುರುಮಾಡಿದ್ದಾರೆ.

ಮುಂದಿದೆ ಅದ್ಭುತ ಪಯಣ

ಮುಂದಿದೆ ಅದ್ಭುತ ಪಯಣ

ತೆಲುಗಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ನ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಅದ್ಧೂರಿ ಚಿತ್ರವನ್ನು ಘೋಷಿಸಲಾಗಿದೆ. ಈ ಚಿತ್ರದ ಬಗ್ಗೆ ಬಹಳ ಥ್ರಿಲ್ ಉಂಟಾಗಿರುವುದಾಗಿ ದೀಪಿಕಾ ಹೇಳಿಕೊಂಡಿದ್ದಾರೆ. ನಂಬಲು ಅಸಾಧ್ಯವಾದಂತಹ ಪಯಣ ಮುಂದೆ ಇದೆ ಎನ್ನುವುದನ್ನು ನಂಬಲು ಆಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

More from Filmibeat

English summary
Reports says Deepika Padukone will play as a dancer in her first Telugu movie with Prabhas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X