ಬಾಲಯ್ಯನ ಜೊತೆಗಿನ ಸಿನಿಮಾ ಮಾಡಿದ್ದು ನನ್ನ ಜೀವನದ ಅತೀ ದೊಡ್ಡ ತಪ್ಪು ಎಂದಿದ್ದರೇ ಅನುಷ್ಕಾ ಶೆಟ್ಟಿ?

ಕರಾವಳಿಯ ಸ್ವೀಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳನ್ನು ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಒಂದು ಕಾಲದಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾದು ಕೂರುತ್ತಿದ್ದರು. ಆದರೆ, ಅದೇನಾಯ್ತೋ ಗೊತ್ತಿಲ್ಲ. 'ಬಾಹುಬಲಿ 2' ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಬಿಟ್ಟರೆ, ಮತ್ತೆ 'ಬಾಹುಬಲಿ', 'ಅರುಂಧತಿ'ಯನ್ನು ನೆನೆಪಿಸುವಂತಹ ಸಿನಿಮಾ ಬರಲೇ ಇಲ್ಲ.

ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸೀರಿಸ್ ಅನುಷ್ಕಾ ಶೆಟ್ಟಿಗೆ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಹೆಸರು ತಂದುಕೊಟ್ಟಿತ್ತು. ಈ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿಗೆ ಒಳ್ಳೊಳ್ಳೆ ಆಫರ್‌ಗಳು ಕೂಡ ಬರುವುದಕ್ಕೆ ಶುರುವಾಗಿದ್ದವು. ಆಲ್ ಇಂಡಿಯಾ ಲೆವೆಲ್‌ನಲ್ಲಿ ಅನುಷ್ಕಾ ಶೆಟ್ಟಿಗೆ ಕ್ರೇಜ್ ಹೆಚ್ಚಾಗಿದ್ದರೂ, ಇವರು ಮಾತ್ರ ಸಿನಿಮಾದಿಂದ ದೂರವೇ ಉಳಿದು ಬಿಟ್ಟಿದ್ದರು. 2018 ರಿಂದ 2023ರವರೆಗೆ ಅನುಷ್ಕಾ ನಟಿಸಿದ್ದು ಕೇವಲ 3 ಸಿನಿಮಾ ಮಾತ್ರ.

Did Anushka Shetty say acting with Balakrishna was the biggest mistake of her career

ಇನ್ನು ಅನುಷ್ಕಾ ಶೆಟ್ಟಿಯನ್ನೇ ಜನರು ಮರತೇ ಬಿಟ್ಟರು ಎನ್ನುವಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಎರಡೂ ಸಿನಿಮಾಗಳು ಅನುಷ್ಕಾ ಅಭಿಮಾನಿಗಳಿಗೆ ಇಷ್ಟ ಆಗಬಹುದು. ಹೀಗಿರುವಾಗ ಟಾಲಿವುಡ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿಯೊಂದು ವೈರಲ್ ಆಗಿದೆ. ಬಾಲಕೃಷ್ಣ ಜೊತೆ ನಟಿಸಿದ್ದು ತನ್ನ ವೃತ್ತಿ ಬದುಕಿ ಅತೀ ದೊಡ್ಡ ತಪ್ಪು ಎಂದು ಅನುಷ್ಕಾ ಶೆಟ್ಟಿ ಹೇಳಿದ್ದರು ಎಂಬ ಸುದ್ದಿ ಓಡಾಡುತ್ತಿದೆ. ಅಸಲಿಗೆ ಏನಿದು ವೈರಲ್ ಸುದ್ದಿ? ಬಾಲಯ್ಯನ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಅನುಷ್ಕಾ ಶೆಟ್ಟಿಗೆ ಸ್ಟಾರ್ ಹೀರೋಗಳಿಗೆ ಇರುವಷ್ಟೇ ಕ್ರೇಜ್ ಇದೆ. ಇವರು ನಟಿಸಿದ ಸಿನಿಮಾಗಳು ಸ್ಟಾರ್ ಹೀರೋಗಳಷ್ಟೇ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡುತ್ತವೆ. ಆ ಮಟ್ಟಿಗೆ ಕರಾವಳಿ ಸುಂದರಿ ಪವರ್‌ಫುಲ್ ಆಗಿದ್ದಾರೆ. ಆದರೆ, ಆರಂಭದ ದಿನಗಳಲ್ಲಿ ಅನುಷ್ಕಾ ಶೆಟ್ಟಿ ಬೇರೆಯವರಂತೆ ನಾಯಕಿಯಾಗಿ ರೊಮ್ಯಾಂಟಿಕ್ ಸೀನ್‌ಗಳಲ್ಲಿ ನಟಿಸಿದ್ದಾರೆ. ಈ ಸಮಯದಲ್ಲಿ ತೆಲುಗಿನ ದಿಗ್ಗಜ ಬಾಲಕೃಷ್ಣ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದರಲ್ಲಿ ನಟಿಸಬಾರದಿತ್ತು ಎಂದು ಅನುಷ್ಕಾ ಹೇಳಿಕೊಂಡಿದ್ದು ಈಗ ವೈರಲ್ ಆಗುತ್ತಿದೆ.

Did Anushka Shetty say acting with Balakrishna was the biggest mistake of her career

ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳವು. ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಜೊತೆ ' ಒಕ್ಕ ಮಗಾಡು' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇದು ಕಮಲ್ ಹಾಸನ್ ನಟಿಸಿದ್ದ 'ಇಂಡಿಯನ್' ಸಿನಿಮಾದ ರಿಮೇಕ್. 'ಒಕ್ಕ ಮಗಾಡು' ಸಿನಿಮಾ 2008ರಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಪ್ರೇಕ್ಷಕರು ಈ ಸಿನಿಮಾ ನೋಡಿ ರೊಚ್ಚಿಗೆದ್ದು ಟೀಕೆಗಳನ್ನು ಮಾಡಿದ್ದರು.

ಇತ್ತೀಚೆಗೆ ಅನುಷ್ಕಾ ಶೆಟ್ಟಿ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತಾಡುವಾಗ, ಅದೊಂದು ಸಿನಿಮಾ ಮಾಡಬಾರದಿತ್ತು ಎಂದು ಅಸಮಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಬಾಲಯ್ಯನ ಸಿನಿಮಾದಲ್ಲಿ ನಾನು ಯಾಕೆ ಇದ್ದೇನೆ ಅನ್ನೋದೇ ಗೊತ್ತಾಗುತ್ತಿಲ್ಲ. ಆ ಸಿನಿಮಾದಲ್ಲಿ ನಟಿಸಿದ್ದು, ತನ್ನ ಬದುಕಿನ ಅತೀ ದೊಡ್ಡ ತಪ್ಪು ಎಂದು ಅನುಷ್ಕಾ ಶೆಟ್ಟಿ ಹೇಳಿರುವ ಬಗ್ಗೆ ಸುದ್ದಿಯಾಗಿದೆ. ಟಾಲಿವುಡ್‌ನಲ್ಲಿ ಈ ಸುದ್ದಿ ಈಗ ಮತ್ತೆ ವೈರಲ್ ಆಗುವುದಕ್ಕೆ ಶುರುವಾಗಿದೆ. ಈ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇನ್ನು ವೃತ್ತಿ ಬದುಕಿನ ಕಡೆ ಬರುವುದಾರೇ, ಅನುಷ್ಕಾ ಶೆಟ್ಟಿ ಸದ್ಯಕೀಗ 'ಘಾಟಿ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅನುಷ್ಕಾ ಲುಕ್‌ ಮತ್ತೆ ಅವರ ಹಳೆಯ ಖದರ್ ಅನ್ನು ನೆನಪಿಸುತ್ತಿದೆ. ರಗಡ್ ಲುಕ್ ಕೊಟ್ಟು ಅನುಷ್ಕಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೊಂದು ಕಡೆ 'ಖತನಾರ್' ಎಂಬ ಮಲಯಾಳಂ ಸಿನಿಮಾದಲ್ಲೂ ನಟಿಸುತ್ತಿದ್ದು, ಈ ಸಿನಿಮಾ ಕೂಡ ಅವರ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಆಗುವ ಸಾಧ್ಯತೆಯಿದೆ ಎಂದು ಸಿನಿಮಾ ಮಂದಿ ಭವಿಷ್ಯ ನುಡಿಯುತ್ತಿದ್ದಾರೆ.

More from Filmibeat

English summary
Did Anushka Shetty say acting with Balakrishna was the biggest mistake of her career?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X