'ಪೋಕಿರಿ 2', 'ಬ್ಯುಸಿನೆಸ್‌ಮ್ಯಾನ್ 2' ಮಾಡೋ ಆಸೆಯಿತ್ತು: ಮಹೇಶ್ ಬಾಬು ಫ್ರೀ ಇರಲಿಲ್ಲ'!

'ಪೋಕಿರಿ' ಮಹೇಶ್ ಬಾಬು ಕರಿಯರ್‌ಗೆ ತಿರುವು ಕೊಟ್ಟ ಸಿನಿಮಾಗಳಲ್ಲೊಂದು. ಹಾಗೇ ಮಹೇಶ್ ಬಾಬು ನಟಿಸಿದ 'ಬ್ಯುಸಿನೆಸ್‌ಮ್ಯಾನ್' ಕೂಡ ಪ್ರಿನ್ಸ್ ಕರಿಯರ್‌ಗೆ ಕಿಕ್ ಕೊಟ್ಟ ಸಿನಿಮಾ. ಈ ಎರಡೂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಮತ್ಯಾರೂ ಅಲ್ಲ 'ಲೈಗರ್' ನಿರ್ದೇಶಕ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ಸದ್ಯ 'ಲೈಗರ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಲೈಗರ್' ಇದೇ ಆಗಸ್ಟ್ 25ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಮಧ್ಯೆ ಪುರಿ ಜಗನ್ನಾಥ್ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಬಗ್ಗೆ ಮಾತಾಡಿದ್ದಾರೆ.

'ಪೋಕಿರಿ 2', 'ಬ್ಯುಸಿನೆಸ್‌ಮ್ಯಾನ್ 2' ಮಾಡೋ ಆಸೆ ಇತ್ತು

ಮಹೇಶ್ ಬಾಬು ಕರಿಯರ್‌ಗೆ ಬೂಸ್ಟ್ ಕೊಟ್ಟ 'ಪೋಕಿರಿ' ಹಾಗೂ ಬ್ಯುಸಿನೆಸ್‌ಮ್ಯಾನ್ ಎರಡೂ ಸಿನಿಮಾಗಳು ಸೀಕ್ವೆಲ್ ಆಗಬೇಕಿತ್ತು. ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ 'ಪೋಕಿರಿ' ಕೆಲವು ದಿನಗಳ ಹಿಂದಷ್ಟೇ ಮಹೇಶ್ ಬಾಬು ಹುಟ್ಟುಹಬ್ಬಕ್ಕೆ ರೀ-ರಿಲೀಸ್ ಆಗಿತ್ತು. ಆಗಲೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು.

 Director Puri Jagannadh Wants Make Pokiri 2 And Businessman 2

ಪುರಿ ಜಗನ್ನಾಥ್ ಮಹೇಶ್ ಬಾಬುಗಾಗಿ ನಿರ್ದೇಶಿಸಿದ ಈ ಎರಡು ಸಿನಿಮಾಗಳು ಸೀಕ್ವೆಲ್ ಮಾಡುವುದಕ್ಕೆ ಮುಂದಾಗಿದ್ದರು. " ನನಗೆ 'ಪೋಕಿರಿ 2' ಹಾಗೂ 'ಬ್ಯುಸಿನೆಸ್ ಮ್ಯಾನ್ 2' ಎರಡೂ ಸಿನಿಮಾಗಳನ್ನೂ ಪಾರ್ಟ್ 2 ಮಾಡುವ ಫ್ಲ್ಯಾನ್ ಇತ್ತು." ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಮಹೇಶ್ ಬಾಬು ಪ್ರೀ ಇರಲಿಲ್ಲ.

'ಪೋಕಿರಿ' ಹಾಗೂ 'ಬ್ಯುಸಿನೆಸ್‌ಮ್ಯಾನ್' ಬಳಿಕ ಪ್ರಿನ್ಸ್ ಮಹೇಶ್ ಬಾಬು ಜೊತೆ ಪುರಿ ಜಗನ್ನಾಥ್ ಮತ್ತೊಂದು ಸಿನಿಮಾ ಮಾಡಲೇ ಇಲ್ಲ. 'ಜನ ಗನ ಮನ' ಅನ್ನೋ ಸಿನಿಮಾ ಅನೌನ್ಸ್ ಆಗಿದ್ದರೂ, ಬಳಿಕ ಈ ಸಿನಿಮಾ ಟೇಕಾಫ್ ಆಗಲೇ ಇಲ್ಲ. ಅಲ್ಲಿಂದ ಇಲ್ಲಿವರೆಗೂ ಒಂದೇ ಒಂದು ಸಿನಿಮಾ ಮಾಡಿಲ್ಲ.

" ಮಹೇಶ್ ಬಾಬು ಸರ್ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ನಾವುಸ ಸೀಕ್ವೆಲ್ ಬಗ್ಗೆ ಮಾತನಾಡಲೇ ಇಲ್ಲ. ಹೀಗಾಗಿ ಎರಡೂ ಸಿನಿಮಾಗಳೂ ಟೇಕಾಫ್ ಆಗಲಿಲ್ಲ." ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ. ಎರಡು ಅದ್ಬುತ ಗಳಿಕೆ ಕಂಡ ಸಿನಿಮಾಗಳು ಸೀಕ್ವೆಲ್ ಬಂದಿದ್ದರು ಹೊಸದೊಂದು ದಾಖಲೆ ಸೃಷ್ಟಿಯಾಗುವ ಸಾಧ್ಯತೆಗಳೂ ಇತ್ತು.

'ಬ್ಯುಸಿನೆಸ್‌ಮ್ಯಾನ್' ಹಿಂದಿಗೆ ಮಾಡೋ ಆಸೆಯಿದೆ

ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಬ್ಯುಸಿನೆಸ್‌ಮ್ಯಾನ್' ದಾಖಲೆ ಬರೆದಿತ್ತು. ಹೀಗಾಗಿ ಪುರಿ ಜಗನ್ನಾಥ್‌ಗೆ ಬಾಲಿವುಡ್‌ನಲ್ಲಿ 'ಬ್ಯುಸಿನೆಸ್‌ಮ್ಯಾನ್' ಸಿನಿಮಾ ಮಾಡುವ ಆಸೆ ಇದೆಯಂತೆ. ಇದು ಡೈಲಾಗ್ ಓರಿಯೆಂಟೆಡ್ ಸಿನಿಮಾ ಆಗಿರುವುದರಿಂದ ಹೀರೊಗೆ ಸಖತ್ ಸ್ಕೋಪ್ ಇದೆ. ಹೀಗಾಗಿ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಚೆನ್ನಾಗಿ ಹೋಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

ಸದ್ಯ ಪುರಿ ಜಗನ್ನಾಥ್ 'ಲೈಗರ್' ಸಿನಿಮಾ ಬಿಡುಗಡೆ ಬ್ಯುಸಿಯಲ್ಲಿದ್ದಾರೆ. ಒಂದು ವೇಳೆ ವಿಜಯ್ ದೇವರಕೊಂಡಗಾಗಿ ನಿರ್ದೇಶಿಸಿದ ಸಿನಿಮಾ ಕೈ ಹಿಡಿದರೆ, ಪುರಿ ಜಗನ್ನಾಥ್‌ಗೆ ಬಾಲಿವುಡ್ ಬೆಲ್ಟ್‌ನಲ್ಲಿ ಬೇಡಿಕೆ ಹೆಚ್ಚಾಗಬಹುದು. ಆಗ 'ಪೋಕಿರಿ 2' ಹಾಗೂ 'ಬ್ಯುಸಿನೆಸ್‌ಮ್ಯಾನ್ 2' ಈ ಎರಡೂ ಸಿನಿಮಾಗಳೂ ಬಾಲಿವುಡ್‌ನಲ್ಲಿ ಟೇಕಾಫ್ ಆದರೂ ಅಚ್ಚರಿ ಪಡಬೇಕಿಲ್ಲ. ಸದ್ಯಕ್ಕೀಗ ಅಗಸ್ಟ್ 25ಕ್ಕೆ ರಿಲೀಸ್‌ಗೆ ರೆಡಿಯಾಗಿರುವ 'ಲೈಗರ್' ಮೇಲೆ ಎಲ್ಲರ ಕಣ್ಣಿದೆ.

More from Filmibeat

English summary
Director Puri Jagannadh Wants Make Pokiri 2 And Businessman 2. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X