ನಟ-ನಿರ್ದೇಶಕನ ನಡುವೆ ಲಿಪ್ ಲಾಕ್!: ಚುಂಬಿಸಿದ್ದು ಏಕೆ ಎಂದು ವಿವರಿಸಿದ ನಿರ್ದೇಶಕ
ಸಿನಿಮಾಗಳಲ್ಲಿ ಇತ್ತೀಚೆಗೆ ಲಿಪ್ ಲಾಕ್ ಸರ್ವೇ ಸಾಮಾನ್ಯ ಎನಿಸಿದೆ. ಹೀರೋ ಮತ್ತು ಹೀರೋಯಿನ್ ನಡುವಿನ ಚುಂಬನ ದೃಶ್ಯಗಳು ಸೆನ್ಸೇಷನ್ ಸೃಷ್ಟಿಸುವುದಿದೆ. ಹಾಗೆಯೇ ಕೆಲವೊಮ್ಮೆ ನಟಿಯರು ತುಟಿಗೆ ತುಟಿಯೊತ್ತಿ ಸುದ್ದಿ ಮಾಡುತ್ತಿರುತ್ತಾರೆ. ಆದರೆ ನಿರ್ದೇಶಕ ಮತ್ತು ಹೀರೋ ಮಧ್ಯೆಯೇ ಲಿಪ್ ಲಾಕ್ ನಡೆದರೆ?
Recommended Video
ಇದು ಇತ್ತೀಚೆಗೆ ಸುದ್ದಿಯಾಗಿರುವ ಸಂಗತಿ. ಕೆಲವು ದಿನಗಳ ಹಿಂದೆ ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿರುವ ಕೃಷ್ಣ ಆಂಡ್ ಹಿಸ್ ಲೀಲಾ ಚಿತ್ರ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಕೃಷ್ಣ ಎಂಬಾತ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಇರಿಸಿಕೊಳ್ಳುವ ದೃಶ್ಯಗಳು ಹೆಚ್ಚಾಗಿವೆ. ಅವುಗಳಲ್ಲಿ ರಾಧೆ ಎಂಬ ಪಾತ್ರದೊಂದಿಗೆ ಆತ ಸಂಬಂಧ ಇರಿಸಿಕೊಳ್ಳುವ ದೃಶ್ಯಗಳು ವಿವಾದ ಸೃಷ್ಟಿಸಿದ್ದವು. ಈ ಚಿತ್ರ ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ಆರೋಪಿಸಲಾಗಿತ್ತು. ಮುಂದೆ ಓದಿ...

ಚರ್ಚೆಯಾಗುತ್ತಿರುವ ಫೋಟೊ
ಆದರೆ ಅದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲ ಸೃಷ್ಟಿಸಿದ್ದು ಚಿತ್ರದ ನಿರ್ದೇಶಕ ರವಿಕಾಂತ್ ಪೆರೆಪು ಹಾಗೂ ನಾಯಕ ಸಿಧು ಜೊನ್ನಲಗದ್ದ ನಡುವಿನ ಲಿಕ್ ಲಾಕ್ ಫೋಟೊ. ಇದು ಸಾಮಾಜಿಕ ಜಾಲತಾಣದಲ್ಲಿ ಒಂದು ವಾರದಿಂದ ಚರ್ಚೆಯಾಗುತ್ತಿದೆ. ಈ ಫೋಟೊಕ್ಕೆ ನಿರ್ದೇಶಕ ರವಿಕಾಂತ್ ಈಗ ಸ್ಪಷ್ಟೀಕರಣ ನೀಡಿದ್ದಾರೆ.

ಚುಂಬಿಸುವ ಫೋಟೊ
ರವಿಕಾಂತ್ ಮತ್ತು ಸಿಧು ಈ ಚಿತ್ರಕ್ಕಾಗಿ 2017ರಿಂದಲೂ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗುವ ಕೆಲವು ದಿನಗಳ ಮುನ್ನವಷ್ಟೇ ನಟ ಸಿಧು, ರವಿ ಪೆರಪು ಅವರ ತುಟಿಗೆ ಚುಂಬಿಸುತ್ತಿರುವ ಫೋಟೊ ಹಂಚಿಕೊಂಡಿದ್ದರು. ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಜನರ ಅಸಮಾಧಾನ
ನೀವಿಬ್ಬರೂ ಸಲಿಂಗ ಕಾಮಿಗಳೇ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರನ್ನೂ ಪ್ರಶ್ನಿಸಿದ್ದರು. ಇದು ಅಸಹ್ಯಕರ ಫೋಟೊ. ಜಾಲತಾಣದಲ್ಲಿ ಇಂತಹ ಫೋಟೊ ಹಾಕುವ ಮುನ್ನ ಸಾಮಾಜಿಕ ಬದ್ಧತೆಯ ಬಗ್ಗೆ ಯೋಚಿಸಬೇಕಲ್ಲವೇ ಎಂದು ಕಿಡಿಕಾರಿದ್ದರು. ಇದು ಸಿನಿಮಾ ಪ್ರಚಾರದ ಕೀಳುಮಟ್ಟದ ತಂತ್ರ ಎಂದು ಕೆಲವು ಟೀಕಿಸಿದ್ದರು.

ಸಂಭ್ರಮದ ವೇಳೆ ಸೆರೆಯಾಗಿದ್ದು...
ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರವಿಕಾಂತ್, ಇದು ಪಬ್ಲಿಸಿಟಿಗಾಗಿ ಮಾಡಿದ ಫೋಟೊವಲ್ಲ. ಮೂರು ವರ್ಷಗಳ ಕಠಿಣ ಶ್ರಮ ಕೊನೆಗೂ ಹೊರಬರುತ್ತಿರುವುದರ ಸಂಭ್ರಮವಷ್ಟೇ. ಇಷ್ಟ ಸಮಯ ಕಷ್ಟಪಟ್ಟಿದ್ದ ಇಬ್ಬರಿಗೂ ಭಾವುಕ ಸಮಯವಾಗಿತ್ತು. ಆಗ ಖುಷಿಯ ನಡುವೆ ಈರೀತಿ ಚುಂಬಿಸಿದ್ದು. ಇದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಚಿತ್ರದ ವಿರುದ್ಧ ಆಕ್ರೋಶ
'ಕೃಷ್ಣ ಆಂಡ್ ಹಿಸ್ ಲೀಲಾ' ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್ ನೆಟ್ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಕೃಷ್ಣ ಹೆಸರಿನ ನಾಯಕ ವಿವಿಧ ಮಹಿಳೆಯರೊಂದಿಗೆ ಸಂಬಂಧ ಇರಿಸಿಕೊಂಡಿರುತ್ತಾನೆ. ಅದರಲ್ಲಿ ರಾಧಾ ಎನ್ನುವ ಪಾತ್ರವೂ ಬರುತ್ತದೆ. ಇದು ವಿವಾದ ಸೃಷ್ಟಿಸಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಈ ಚಿತ್ರದಿಂದ ಹಾನಿಯಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.


Click it and Unblock the Notifications