ಸಮಂತಾಗೆ ವಿಚ್ಛೇದನ ಕೊಟ್ಟು ಗರ್ಲ್‌ಫ್ರೆಂಡ್ ಜೊತೆ ಸಿಕ್ಕಿಬಿದ್ದ ನಾಗಚೈತನ್ಯ: ವೈರಲ್ ಆಯ್ತು ಫೋಟೊ

ನಾಗಚೈತನ್ಯ ಹಾಗೂ ಸಮಂತಾ ವಿಚ್ಚೇದನ ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಲೇ ಇದೆ. ಒಂದ್ಕಡೆ ಸಮಂತಾ ಅಭಿಮಾನಿಗಳು ನಾಗಚೈತನ್ಯ ವಿರುದ್ಧ ತಿರುಗಿಬಿದ್ದರೆ, ಇನ್ನೊಂದು ಕಡೆ ನಾಗಚೈತನ್ಯ ಅಭಿಮಾನಿಗಳು ವಿಚ್ಚೇದನಕ್ಕೆ ಸಮಂತಾನೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

ನಾಗಚೈತನ್ಯ ಹಾಗೂ ಸಮಂತಾ ಡಿವೋರ್ಸ್ ಅನೌನ್ಸ್ ಮಾಡುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕಿತ್ತಾಡುತ್ತಿದ್ದರು. ಇತ್ತ ನಾಗಚೈತನ್ಯ ಬಾಳಲ್ಲಿ ಚಿಕ್ಕದಾಗಿ ಮತ್ತೊಂದು ಲವ್ ಸ್ಟೋರಿ ಶುರುವಾಗಿತ್ತು. ಟಾಲಿವುಡ್‌ನಲ್ಲಿ ನಾಗಚೈತನ್ಯಗೆ ಹೊಸ ಗರ್ಲ್‌ಫ್ರೆಂಡ್ ಸಿಕ್ಕಿದ್ದಾಳೆ ಅಂತ ವರದಿಯನ್ನೂ ಮಾಡಿತ್ತು.

Divorce With Samantha Actor Naga Chaitanya caught with Sobhita Dhulipala In London

ಹೌದು, ದಕ್ಷಿಣ ಭಾರತದ ನಟಿ ಶೋಭಿತಾ ಧುಲಿಪಲಾ ಜೊತೆ ನಾಗಚೈತನ್ಯ ಲವ್ವಿ-ಡವ್ವಿ ಶುರು ಹಚ್ಚಿಕೊಂಡಿದ್ದಾರೆಂದು ಗುಲ್ಲೆದ್ದಿತ್ತು. ಅದ್ಯಾವಾಗ ಇಬ್ಬರ ಮ್ಯಾಟರ್ ವೈರಲ್ ಆಗುವುದಕ್ಕೆ ಶುರುವಾದವೋ, ಆಗ ಶೋಭಿತಾ ಹಾಗೂ ನಾಗಚೈತನ್ಯ ಇಬ್ಬರೂ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದರು. ಕೊನೆಗೂ, ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಬ್ಬರ ಪ್ರೇಮ ಪ್ರಕರಣಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು.

ಲಂಡನ್‌ನಲ್ಲಿ ನಾಗಚೈತನ್ಯ-ಶೋಭಿತಾ

ನಾಗಚೈತನ್ಯ ಹಾಗೂ ನಟಿ ಶೋಭಿಯಾ ಧುಲಿಪಲಾ ಇಬ್ಬರೂ ಲಂಡನ್‌ಗೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ನಾಗಚೈತನ್ಯ ಲಂಡನ್‌ನ ರೆಸ್ಟೋರೆಂಟ್ ಒಂದಕ್ಕೆ ಶೋಭಿತಾರನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಆ ನಾಗಚೈತನ್ಯ ಜೊತೆ ರೆಸ್ಟೋರೆಂಟ್ ಶೆಫ್ ಫೋಟೊ ತೆಗೆಸಿಕೊಂಡಿದ್ದರು. ಅದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Divorce With Samantha Actor Naga Chaitanya caught with Sobhita Dhulipala In London

ರೆಸ್ಟೋರೆಂಟ್ ಶೆಫ್ ಸುರೇಂದರ್ ಮೋಹನ್ ಸೋಶಿಯಲ್ ಮೀಡಿಯಾದಲ್ಲಿ ನಾಗಚೈತನ್ಯ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಆ ಫೋಟೊದ ಬ್ಯಾಕ್‌ಗ್ರೌಂಡ್‌ನಲ್ಲಿ ಶೋಭಿತಾ ಮುಖಕ್ಕೆ ಕೈ ಅಡ್ಡ ಹಿಡಿದು ಕೂತಿದ್ದಾರೆ. ಇದೇ ಫೋಟೊ ನೋಡಿ, ಶೋಭಿತಾಗೆ ಮಾರ್ಕ್ ಮಾಡಿ, ಇಬ್ಬರೂ ಡೇಟಿಂಗ್ ಮಾಡ್ತಿರೋದು ಪಕ್ಕಾ ಅಂತಿದ್ದಾರೆ ನೆಟ್ಟಿಗರು.

ಬ್ಯಾಕ್‌ಗ್ರೌಂಡ್‌ನಲ್ಲಿರೋದು ಶೋಭಿತಾನಾ?

ಈ ವೈರಲ್ ಆಗುತ್ತಿರುವ ಫೋಟೊ ಲಂಡನ್‌ನ ಜಮವರ್ ಅನ್ನೋ ರೆಸ್ಟೋರೆಂಟ್‌ನಲ್ಲಿ ತೆಗೆದಿದ್ದು ಎನ್ನಲಾಗಿದೆ. ಇಲ್ಲಿನ ಶೆಫ್ ಸುರೇಂದರ್ ಮೋಹನ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಕಾಡ್ಗಿಚ್ಚಿನಂತೆ ಹಬ್ಬಿದೆ. ನೆಟ್ಟಿಗರು ಈ ಫೋಟೊ ನೋಡಿ ಬ್ಯಾಕ್‌ಗ್ರೌಂಡ್‌ನಲ್ಲಿ ಇರೋದು ಶೋಭಿತಾನಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ.

2022 ನವೆಂಬರ್ 2022ರಂದೂ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಲಾ ಫೋಟೊಗಳು ವೈರಲ್ ಆಗಿದ್ದವು. ಆಗಲೂ ಇಬ್ಬರೂ ಒಟ್ಟಿಗೆ ಲಂಡನ್ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿತ್ತು. ಆಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಪ್ರತ್ಯೇಕವಾಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಅಭಿಮಾನಿಗಳೇ ಫೋಟೊಶಾಪ್‌ನಲ್ಲಿ ಇಬ್ಬರನ್ನು ಒಟ್ಟಿಗೆ ಸೇರಿದ್ದರು.

ಡೇಟಿಂಗ್ ಬಗೆ ತುಟಿಬಿಚ್ಚಿಲ್ಲ ಈ ಜೋಡಿ

ಸಮಂತಾಗೆ ನಾಗಚೈತನ್ಯ ವಿಚ್ಛೇದನ ನೀಡಿದ ಬಳಿಕ ಬಾಲಿವುಡ್ ಸಿನಿಮಾ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ ಆಗಿತ್ತು. ಆ ಸಿನಿಮಾದ ಪ್ರಚಾರದ ವೇಳೆ ನಾಗಚೈತನ್ಯಗೆ ಹೊಸ ಗರ್ಲ್‌ಫ್ರೆಂಡ್ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಆದರೆ, ಆ ವೇಳೆ ನಾಗಚೈತನ್ಯ " ನನ್ನ ನಗುವೇ ಉತ್ತರ" ಎಂದು ಹೇಳಿ ಎಸ್ಕೆಪ್ ಆಗಿದ್ದರು.

ಇತ್ತ ಶೋಭಿತಾ ಧುಲಿಪಲಾಗೂ ಇದೇ ಪ್ರಶ್ನೆ ಹಾಕಲಾಗಿತ್ತು. ಆದರೆ, ಶೋಭಿತಾ ಕೂಡ ಡೇಟಿಂಗ್ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದೂವರೆಗೂ ನಾಗಚೈತನ್ಯ ಹಾಗೂ ಶೋಭಿತಾ ತಮ್ಮ ಡೇಟಿಂಗ್ ಮ್ಯಾಟರ್‌ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಇತ್ತ ಮತ್ತೆ ಸಮಂತಾ ಹಾಗೂ ನಾಗಚೈತನ್ಯ ಒಂದಾಗಬಹುದು ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

More from Filmibeat

English summary
Divorce With Samantha actor Naga Chaitanya caught with Sobhita Dhulipala In London. Naga Chaitanya and Sobhita Dhulipala enjoyed a dinner date in London Photo Goes on social media, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X