Duniya Vijay: ಟಾಲಿವುಡ್‌ ಲೆಜೆಂಡ್ ಬಾಲಕೃಷ್ಣ ಎದುರು ಮುಸಲಿ ಮಡುಗು ಅವತಾರವೆತ್ತಿದ ವಿಜಯ್

ಚಿತ್ರರಂಗದಲ್ಲಿ ದುನಿಯಾ ವಿಜಯ್ ಎರಡನೇ ಇನ್ನಿಂಗ್ಸ್ ಭರ್ಜರಿಯಾಗಿ ಆರಂಭ ಆಗಿದೆ. 'ಸಲಗ' ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದೇ ಮಾಡಿದ್ದು ಟಾಲಿವುಡ್ ಕೈ ಬೀಸಿ ಕರೆದಿತ್ತು. ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್‌ಗೆ ಪವರ್‌ಫುಲ್ ರೋಲ್‌ಗೆ ಆಫರ್ ಬಂದಿತ್ತು. ಈಗ ಅದೇ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇದು ದುನಿಯಾ ವಿಜಯ್ ಅಭಿಮಾನಿಗಳಿಗೆ ಖುಷಿ ಕೊಡುವುದಂತೂ ಗ್ಯಾರಂಟಿ.

ದುನಿಯಾ ವಿಜಯ್ ಮತ್ತೆ ಚಿತ್ರರಂಗದಲ್ಲಿ ನೆಲೆಯೂರಲು ತಾವೇ ನಿರ್ದೇಶನಕ್ಕೆ ಇಳಿದಿದ್ದರು. ಮೊದಲ ಸಿನಿಮಾ ನಿರ್ದೇಶನದಲ್ಲಿಯೇ ದುನಿಯಾ ವಿಜಯ್ ಸಿಕ್ಸರ್ ಬಾರಿಸಿದ್ದರು. 'ಸಲಗ' ಗೆದ್ದಲ್ಲಿಂದ ದುನಿಯಾ ವಿಜಯ್ ಲಕ್ ಬದಲಾಗಿದೆ. ಟಾಲಿವುಡ್‌ನಲ್ಲಿ ಖಳನಾಯಕನಾಗಿ ಎಂಟ್ರಿಕೊಟ್ಟಿದ್ದೂ ಆಗಿದೆ. ಈಗಾಗಲೇ ದುನಿಯಾ ವಿಜಯ್ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.

ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಕೂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಯಶಸ್ಸು ಸಿಕ್ಕಿದೆ. 'ಲೆಜೆಂಡ್' ಸಿನಿಮಾ ಟಾಲಿವುಡ್ ಅಷ್ಟೇ ಅಲ್ಲ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲೂ ಬೇಜಾನ್ ಸದ್ದು ಮಾಡಿತ್ತು. ಹೀಗಾಗಿ ಕನ್ನಡದ ನಟನ ದುನಿಯಾ ವಿಜಯ್‌ರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈಗ #NBK107 ಚಿತ್ರತಂಡ ದುನಿಯಾ ಪಾತ್ರವನ್ನು ರಿವೀಲ್ ಮಾಡಿದೆ.

ವಿಜಯ್ ತೆಲುಗು ಚಿತ್ರದ ಫಸ್ಟ್ ಲುಕ್ ರಿವೀಲ್

ವಿಜಯ್ ತೆಲುಗು ಚಿತ್ರದ ಫಸ್ಟ್ ಲುಕ್ ರಿವೀಲ್

'ದುನಿಯಾ' ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿಕೊಟ್ಟಿದ್ದ ದುನಿಯಾ ವಿಜಯ್, 15 ವರ್ಷಗಳ ಬಳಿಕ ಟಾಲಿವುಡ್‌ನ ಮೊದಲ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್ ಮಂದಿಯ ಗಮನ ಸೆಳೆಯುವಲ್ಲಿ ದುನಿಯಾ ವಿಜಯ್ ಗೆದ್ದಿದ್ದಾರೆ. ಈಗಾಗಲೇ ಬಾಲಯ್ಯ ಅಭಿನಯದ 107ನೇ ಸಿನಿಮಾ ಸೆಟ್ಟಿಗೆ ಕಾಲಿಟ್ಟಿದ್ದು, ಚಿತ್ರತಂಡ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿತ್ತು. ಈಗ ದುನಿಯಾ ವಿಜಯ್ ಫಸ್ಟ್ ಲುಕ್ ರಿವೀಲ್ ಮಾಡಿದೆ.

ದುನಿಯಾ ವಿಜಯ್ ಈಗ ಮುಸಲಿ ಮಡುಗು

ದುನಿಯಾ ವಿಜಯ್ ಈಗ ಮುಸಲಿ ಮಡುಗು

ದುನಿಯಾ ವಿಜಯ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಸಖತ್ತಾಗಿದೆ. ಸಿಗರೇಟ್ ಸೇದುತ್ತಾ ರಗಡ್ ಲುಕ್ ಕೊಟ್ಟಿರುವ ದುನಿಯಾ ವಿಜಯ್ ಫಸ್ಟ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಇನ್ನೊಂದು ಕಡೆ ತೆಲುಗು ಚಿತ್ರದಲ್ಲಿ ವಿಜಯ್ ಪಾತ್ರದ ಹೆಸರು ಕೂಡ ಗಮನ ಸೆಳೆಯುತ್ತಿದೆ. ಖಡಕ್ ವಿಲನ್ ಆಗಿದ್ದರೂ, ಪಾತ್ರದ ಹೆಸರು ಟಾಲಿವುಡ್ ಮಂದಿಯನ್ನು ಗಮನ ಸೆಳೆಯುತ್ತಿದೆ. ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಹೆಸರು ಈಗ ಟಾಲಿವುಡ್‌ನಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ.

ಪ್ರತಾಪ್ ರೆಡ್ಡಿ ರಿಯಲ್ ಕ್ಯಾರೆಕ್ಟರ್?

ಟಾಲಿವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ ಗೋಪಿಚಂದ್ ಮಲಿನೇನಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೊದಲಿನಿಂದಲೂ ದುನಿಯಾ ವಿಜಯ್ ಪಾತ್ರದ ಬಗ್ಗೆ ನಿರ್ದೇಶಕರು ಕುತೂಹಲವನ್ನು ದುಪ್ಪಟ್ಟು ಮಾಡುತ್ತಲೇ ಇದ್ದಾರೆ. ಈಗ ವಿಜಯ್ ಪಾತ್ರಕ್ಕೆ ಮುಸಲಿ ಮಡುಗು ಅಂತ ಹೆಸರಿಟ್ಟು ಮತ್ತಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ. ಈ ಮೂಲಕ ದುನಿಯಾ ವಿಜಯ್ ಪಾತ್ರ ರಿಯಲ್ ಇಲ್ಲಾ ಸಿನಿಮಾಗಾಗಿಯೇ ಸೃಷ್ಟಿಸಿದ್ದಾ ಎನ್ನುವ ಅನುಮಾನ ಕೂಡ ಮೂಡಿದೆ. ಸದ್ಯ ದುನಿಯಾ ವಿಜಯ್ ಆಗಲಿ, ಚಿತ್ರತಂಡ ಆಗಲಿ ಪಾತ್ರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಇದು ರಿಯಲ್ ಕ್ಯಾರೆಕ್ಟರ್ ಹೌದಾ ಅಲ್ಲವಾ ಅನ್ನೋದನ್ನು ತಿಳಿಯಲು ಇನ್ನೂ ಕೆಲವು ದಿನ ಕಾಯಲೇ ಬೇಕು.

ಮತ್ತೆ ನಿರ್ದೇಶನಕ್ಕಿಳಿದ ಭೀಮಾ

ಮತ್ತೆ ನಿರ್ದೇಶನಕ್ಕಿಳಿದ ಭೀಮಾ

ಸದ್ಯ #NBK107 ಸಿನಿಮಾದಲ್ಲಿ ದುನಿಯಾ ವಿಜಯ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಅಪ್ಪು ಸಿನಿಮಾ 'ಜೇಮ್ಸ್' ಮುಗಿದ ಬಳಿಕ ತೆಲುಗು ಸಿನಿಮಾ ಕೆಲವು ತುಣುಕುಗಳನ್ನು ಹಂಚಿಕೊಳ್ಳುವುದಾಗಿ ದುನಿಯಾ ವಿಜಯ್ ತಿಳಿಸಿದ್ದಾರೆ. ಇದೇ ವೇಳೆ ಮೊದಲ ತೆಲುಗು ಸಿನಿಮಾ ಅನುಭವವನ್ನೂ ಹಂಚಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಜಯ್ ನಿರ್ದೇಶನದ ಎರಡನೇ ಸಿನಿಮಾ 'ಭೀಮಾ' ಬಗ್ಗೆನೂ ಕುತೂಹಲ ಹೆಚ್ಚಾಗಿದೆ. ತೆಲುಗು ಸಿನಿಮಾ ಮುಗಿದ ಬಳಿಕ 'ಭೀಮಾ' ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಅಲ್ಲಿವರೆಗೂ ಸ್ಟೋರಿ, ಸ್ಕ್ರೀನ್ ಪ್ಲೇ ಬಗ್ಗೆ ಗಮನ ಹರಿಸಲಿದ್ದಾರೆ.

More from Filmibeat

English summary
Duniya Vijay telugu movie NBK107 first look as Musali Madugu Pratap Reddy from Balakrishna movie released. This movie is Duniya Vijay's debut movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X