ರಾಮೋಜಿ ಫಿಲ್ಮ್ ಸಿಟಿಯ ಮಾಲೀಕನ ಬಳಿಯಿದ್ದ ಆಸ್ತಿ ಎಷ್ಟು? ಈಗ ಯಾರಿಗೆ ಸೇರುತ್ತೆ?

ರಾಮೋಜಿ ರಾವ್ ದಕ್ಷಿಣ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು. ದಕ್ಷಿಣ ಭಾರತದಲ್ಲಿ ವಿಶ್ವದ ಅತೀ ದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಿಸಿದ್ದ ಹೆಗ್ಗಳಿಕೆ ಇವರದ್ದು. ರಾಮೋಜಿ ಫಿಲ್ಮ್ ಸಿಟಿ ಕೇವಲ ದಕ್ಷಿಣ ಭಾರತದ ಸಿನಿಮಾ ಮಂದಿಯಷ್ಟೇ ಅಲ್ಲ, ಬಾಲಿವುಡ್ ಫಿಲ್ಮ್ ಮೇಕರ್ಸ್ ಇಂದಿಗೂ ಬಳಸಿಕೊಳ್ಳುತ್ತಾರೆ.

ಒಬ್ಬ ಸಾಮಾನ್ಯ ಉದ್ಯಮಿಯಾಗಿ ತನ್ನ ಜರ್ನಿಯನ್ನು ಶುರು ಮಾಡಿದ್ದ ರಾಮೋಜಿ ರಾವ್ ಪತ್ರಿಕೋದ್ಯಮ ಕ್ಷೇತ್ರದ ದಿಗ್ಗಜನಾಗಿ ಬೆಳೆದಿದ್ದರು. ಈ ನಾಡು ಸಂಸ್ಥೆಯನ್ನು ಕಟ್ಟಿ, ಅದರ ಮೂಲಕ ಈಟಿವಿ ಬ್ರ್ಯಾಂಡ್ ಅನ್ನು ಬೇರೆ ಬೇರೆಯಲ್ಲಿ ವಿಸ್ತರಿಸಿ ಗೆದ್ದಿದ್ದರು. ಬಳಿಕ ತೆಲುಗು ಭಾಷೆಯನ್ನಷ್ಟೇ ಉಳಿಸಿಕೊಂಡು ಬೇರೆ ಭಾಷೆಯಲ್ಲೂ ಯಶಸ್ಸು ಕಂಡಿದ್ದ ಈ ಟಿವಿಯನ್ನು ವಯಕಾಮ್ 18 ಸಂಸ್ಥೆಗೆ ಮಾರಾಟ ಮಾಡಿದ್ದರು.

Eenadu group chairman and businessman Ramoji Rao Net Worth and other details

ರಾಮೋಜಿ ರಾವ್ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರೋ ಈ ದಿಗ್ಗಜ ಅನಾರೋಗ್ಯದಿಂದ ನಿನ್ನೆ (ಜೂನ್ 8) ನಿಧನರಾಗಿದ್ದಾರೆ. ಇದೇ ವೇಳೆ ರಾಮೋಜಿ ರಾವ್ ಆಸ್ತಿ ವಿವರಗಳು ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗಿವೆ.

ರಾಮೋಜಿ ರಾವ್ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಹೀಗಾಗಿ ರಾಜಕೀಯ ಹಾಗೂ ಸಿನಿಮಾರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಜನರು ರಾಮೋಜಿ ರಾವ್ ಮುಖ್ಯವಾಗಿ ರಾಮೋಜಿ ಫಿಲ್ಮಿ ಸಿಟಿಯಿಂದ ಗುರುತಿಸುತ್ತಾರೆ. ಆದರೆ, ಉದ್ಯಮಿಯಾಗಿ, ಪತ್ರಿಕೋದ್ಯಮಿಯಾಗಿ, ನಿರ್ಮಾಪಕರಾಗಿ ಇನ್ನೂ ಹಲವು ಕ್ಷೇತ್ರದಲ್ಲಿ ಯಶಸ್ಸು ಕಂಡವರು.

ರಾಮೋಜಿ ರಾವ್ ಸುಮಾರು 46 ಸಾವಿರ ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿದ್ದರು ಎಂದು ವರದಿಯಾಗಿದೆ. ಇದರಲ್ಲಿ ರಾಮೋಜಿ ಫಿಲ್ಮ್ ಸಿಟಿಯೇ ಸುಮಾರು 1666 ಎಕರೆ ಪ್ರದೇಶದಲ್ಲಿದೆ. ಇದರ ಮೌಲ್ಯವೇ ಸಾವಿರಾರು ಕೋಟಿ ಎಂದು ಹೇಳಲಾಗಿದೆ. ಇದರೊಂದಿಗೆ ಈನಾಡು ಸಂಸ್ಥೆಯ ಮುಖ್ಯಸ್ಥರೂ ಆಗಿದ್ದರು. ಇದರೊಂದಿಗೆ ಪ್ರಿಯಾ ಉಪ್ಪಿನ ಕಾಯಿ ಕಂಪನಿಯ ಮಾಲೀಕರು ಆಗಿದ್ದರು. ಹಾಗೇ ಡಾಲ್ಫಿನ್ ಗ್ರೂಪ್ ಹೊಟೇಲ್‌, ಕಲಂಜಲಿ ಶಾಪಿಂಗ್ ಮಾಲ್, ಮಯೂರಿ ಸಿನಿಮಾ ವಿತರಣೆ ಕಂಪನಿ ಕೂಡ ಇವರದ್ದೇ.

Eenadu group chairman and businessman Ramoji Rao Net Worth and other details

ಹಾಗೇ 1962ರಲ್ಲಿ ಸ್ಥಾಪಿಸಿದ್ದ ಮಾರ್ಗದರ್ಶಿ ಚಿಟ್ ಫಂಡ್ ಕೂಡ ಇವರದ್ದೇ, ಆದರೆ, ಇತ್ತೀಚೆಗೆ ಇದೇ ಚಿಟ್ ಫಂಡ್ ವ್ಯವಹಾರದಲ್ಲಿ ಅಕ್ರಮ ಆಗಿದೆ ಎಂದು ಜಗನ್ ಸರ್ಕಾರ ಟಾರ್ಗೆಟ್ ಮಾಡಿದೆ ಎಂದೂ ಹೇಳಲಾಗುತ್ತಿತ್ತು. ಹೀಗಾಗಿ ಸುಮಾರು 46 ಸಾವಿರ ಕೋಟಿಯ ಉದ್ಯಮವನ್ನು ಹೊಂದಿದ್ದ ರಾಮೋಜಿ ರಾವ್ ಆಸ್ತಿ ಮುಂದೆ ಯಾರಿಗೆ ಸೇರುತ್ತೆ ಅನ್ನೋ ಚರ್ಚೆ ಶುರುವಾಗಿದೆ.

ರಾಮೋಜಿ ರಾವ್ ಒಟ್ಟು ಆಸ್ತಿಯಲ್ಲಿ ಒಂದು ಭಾಗವನ್ನು ಇಬ್ಬರು ಗಂಡು ಮಕ್ಕಳ ಕುಟುಂಬಕ್ಕೆ ಸಮನಾಗಿ ಹಂಚಲಾಗಿದೆ. ಉಳಿದ ಆಸ್ತಿಯನ್ನು ಪತ್ನಿ ಹೆಸರಿನಲ್ಲಿ ಇಡಲಾಗಿದೆ ಎನ್ನಲಾಗಿದೆ. ಈಗ ಅವರ ಆಸ್ತಿಗೆ ಸಂಬಂಧಿಸಿದ್ದು ಪತ್ನಿಯ ಹೆಸರಲ್ಲಿದೆ. ಅದು ಮುಂದಿನ ದಿನಗಳಲ್ಲಿ ತನ್ನ ಮಕ್ಕಳ ಪಾಲಾಗುವಂತೆ ವಿಲ್ ಮಾಡಿದ್ದಾರೆ ಎನ್ನಲಾಗಿದೆ.

More from Filmibeat

English summary
Ramoji Rao Net Worth and assets details:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X