ರಾಜ್ ಜೊತೆ ಸಮಂತಾ ಮದುವೆಯಾಗುತ್ತಿದ್ದಂತೆ ಹೊಸ ಪೋಸ್ಟ್ ಶೇರ್ ಮಾಡಿದ ನಾಗಚೈತನ್ಯ; ಅದರಲ್ಲೇನಿದೆ?
ನಟಿ ಸಮಂತಾ ರುಥ್ ಪ್ರಭು 2ನೇ ಮದುವೆಯಾಗು ಮತ್ತೆ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜ್ ನಿಡಿಮೊರು ಅವರನ್ನು ಕೊಯಮತ್ತೂರಿನ ಇಶಾ ಫೌಂಡೇಷನ್‌ನಲ್ಲಿ ವಿವಾಹವಾಗಿದ್ದಾರೆ. ಯಾವುದೇ ಸುಳಿವನ್ನು ಬಿಟ್ಟುಕೊಡದೆ, ಆಡಂಬರವಿಲ್ಲದೆ ನಟಿ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಮಂತಾ ಮದುವೆ ಆಗುತ್ತಿದ್ದಂತೆ ಅವರ ಮಾಜಿ ಪತಿ ನಾಗಚೈತನ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಕೆಲವರು ನಾಗ ಚೈತನ್ಯ ಪೋಸ್ಟ್ ಅನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ತೆಲುಗಿನ ಅಕ್ಕಿನೇನಿ ಕುಟುಂಬದ ಕುಡಿ ನಾಗ ಚೈತನ್ಯ ವಿಚ್ಚೇದನಕ್ಕೆ ಮುಂದಾದಾಗ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಇತ್ತ ಸಮಂತಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ವಿಚ್ಚೇದನಕ್ಕೆ ಕಾರಣವೇನು ಅನ್ನೋದು ಇಂದಿಗೂ ಸರಿಯಾಗಿ ಗೊತ್ತಿಲ್ಲ. ಇಬ್ಬರೂ ತಮ್ಮ ಫ್ಯಾನ್ಸ್‌ಗೆ ಬೆಂಬಲಿಗರಿಗೆ ಸೂಕ್ತ ಕಾರಣಗಳನ್ನು ಕೊಟ್ಟಿಲ್ಲ. ಹೀಗಾಗಿ ಇವರ ವಿಚ್ಚೇದನ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತ್ತು. ವಿಚ್ಚೇದನದ ಬಳಿಕ ನಾಗ ಚೈತನ್ಯ 2ನೇ ಮದುವೆ ಆದರು. ಆದರೆ, ಸಮಂತಾ ಮದುವೆ ಆಗದೇ ಹಾಗೆ ಉಳಿದಿದ್ದರು. ಈಗ ಸಮಂತಾ ಕೂಡ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿಚ್ಚೇದನ, ಅವಮಾನ, ಅನಾರೋಗ್ಯದ ನಡುವೆ ಸಮಂತಾ ಬದುಕೀಗ ಒಂದು ಮಹತ್ವದ ತಿರುವು ಪಡೆದುಕೊಂಡಿದೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮಾಡುವಾಗ ನಿರ್ದೇಶಕ ರಾಜ್ ನಿಡಿಮೋರು ಅವರ ಪರಿಚಯವಾಗಿತ್ತು. ಅದು ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಕೊನೆಗೆ ಎಲ್ಲಾ ಅಡೆತಡೆಗಳನ್ನು ಸರಿ ಮಾಡಿಕೊಂಡು ಡಿಸೆಂಬರ್ 1, 2025 ರಂದು ಸಮಂತಾ ಹಾಗೂ ರಾಜ್ ಇಬ್ಬರೂ ಕೊಯಮತ್ತೂರಿನ ಇಶಾ ಯೋಗಾ ಸೆಂಟರ್‌ನಲ್ಲಿ ಕೆಲವು ಆಪ್ತರ ಸಮ್ಮುಖದಲ್ಲಿ 2ನೇ ಮದುವೆಯಾಗಿದ್ದಾರೆ.
ಇತ್ತ ಸಮಂತಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ನಾಗಚೈತನ್ಯ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಹಾಗಂತ ಅದು ಸಮಂತಾಗೆ ಸಂಬಂಧ ಪಟ್ಟಿದ್ದಲ್ಲ. ಇಲ್ಲ ಸಮಂತಾ ಕುರಿತು ಪರೋಕ್ಷವಾಗಿ ಪೋಸ್ಟ್ ಮಾಡಿದ್ದಲ್ಲ. ಅದು ಅವರ ಮುಂದಿನ ವೆಬ್ ಸೀರಿಸ್ 'ಧೂತ'ದ ಫಸ್ಟ್ ಲುಕ್. ಆದರೆ, ಇದೇ ದಿನ ಯಾಕೆ ಹೊರ ಬಿಟ್ಟರು ಅನ್ನೋದು ಮಾತ್ರ ಅಚ್ಚರಿ ಮೂಡಿಸಿದೆ.
ಇತ್ತ ನೆಟ್ಟಿಗರು ಮಾಡಿದ ಕೆಲವು ಕಮೆಂಟ್‌ಗಳು ಟಾಂಗ್ ಕೊಟ್ಟಂತೆ ಇವೆ. "ಅಭಿನಂದನೆಗಳು.. ಸಮಂತಾಗೆ ಮದುವೆ ಆಯ್ತು" ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ನಾಗಚೈತನ್ಯ ಅವರೇ ನೀವು ಡೈಮಂಡ್ ಅನ್ನು ಕಳೆದುಕೊಂಡಿದ್ದೀರ" ಎಂದು ಹೇಳಿದ್ದಾರೆ. " ಬ್ರೋ ಎಲ್ಲರೂ ನಿಮ್ಮನ್ನು ಇವರು ನೆನಪಿಸಿಕೊಂಡಿದ್ದಾರೆ" ಎಂದು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು " ನೀವೇ ಸರಿ ಇದ್ದೀರ ಎಂದು ಈಗ ಅನಿಸುತ್ತಿದೆ" ಎಂದು ನಾಗ ಚೈತನ್ಯಗೆ ಸಪೋರ್ಟ್ ಮಾಡಿದ್ದಾರೆ.
ಇನ್ನು ನಾಗಚೈತನ್ಯ ಈ ಹಿಂದೆ ನೀಡಿದ ಸಂದರ್ಶನದಲ್ಲಿ ತಮ್ಮ ವಿಚ್ಚೇದನದ ಬಗ್ಗೆ ಮಾತಾಡಿದ್ದರು. ಸಮಂತಾ ಜೊತೆಗೆ ಕಳೆದ ದಿನಗಳ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು. "ನಮ್ಮಿಬ್ಬರ ಸಂಬಂಧ ಮುರಿದುಬಿದ್ದಿರೋದು ದುರದೃಷ್ಟಕರ. ಆದರೂ, ವಿಚ್ಚೇದನದ ನಂತರ ನಮ್ಮಿಬ್ಬರ ಜೀವನ ಸುಗಮವಾಗಿ ನಡೆಯುತ್ತಿದೆ. ನಮ್ಮ ವಿಚ್ಛೇದನದ ಬಗ್ಗೆ ಬರೆದು, ನಮ್ಮ ಜೀವನದ ಘಟನೆಗಳನ್ನು ಇನ್ನಷ್ಟು ಕೆದಕದಿರುವುದು ಒಳ್ಳೆಯದು" ಎಂದಿದ್ದರು.


Click it and Unblock the Notifications











