ವಿಜಯ್ ದೇವರಕೊಂಡ ಜೊತೆ ಸುಪ್ರಿತಾ ಮದುವೆ; ಟಾಲಿವುಡ್‌ನಲ್ಲಿ ಏನಿದು ಚರ್ಚೆ?

ವಿಜಯ್ ದೇವರಕೊಂಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿರಬಹುದು. ಆದರೆ, ಈ ನಟನಿಗಿರುವ ಫೀಮೇಲ್ ಫ್ಯಾನ್ಸ್ ಮಾತ್ರ ಕಮ್ಮಿಯಾಗಿಲ್ಲ. ಸಾಮಾನ್ಯರಷ್ಟೇ ಅಲ್ಲ, ಸ್ಟಾರ್‌ ಕಿಡ್‌ಗಳಿಗೂ ವಿಜಯ್ ದೇವರಕೊಂಡ ಅಂದರೆ ಬಲು ಪ್ರೀತಿ. ಸದ್ಯಕ್ಕೀಗ ವಿಜಯ್ ದೇವರಕೊಂಡ ಜೊತೆ ತೆಲುಗಿನ ನಟಿಯೊಬ್ಬರ ಮಗಳ ಹೆಸರು ತಳಕು ಹಾಕಿಕೊಳ್ಳುತ್ತಿದೆ.

ತೆಲುಗಿನ ಹಿರಿಯ ನಟಿ ಸುರೇಖಾ ವಾಣಿ ಅವರ ಪುತ್ರಿ ಸುಪ್ರಿತಾ ತೆಲುಗು ಮಂದಿಗೆ ಚಿರಪರಿಚಿತ. ಅದರಲ್ಲೂ ಸೋಶಿಯಲ್ ಮೀಡಿಯಾ ಕ್ರೇಜ್ ಇರುವವರಿಗೆ ಸುಪ್ರಿತಾ ವಾಣಿ ಬಗ್ಗೆ ಚೆನ್ನಾಗಿಯೇ ಪರಿಚಯವಿದೆ. ತನ್ನ ಹದಿಹರೆಯದಲ್ಲಿಯೇ ಸುಪ್ರಿತಾ ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಿದ್ದರು.

Famous youtuber and actress Surekha Vani Daughter Supritha wants to marry vijay deverakonda

ಯೂಟ್ಯೂಬರ್ ಆಗಿ ಸುಪ್ರಿತಾಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. 2019 ರಲ್ಲಿ, ಸುಪ್ರಿತಾ 'ಮನಿ ಮೈಂಡೆಡ್ ಗರ್ಲ್‌ಫ್ರೆಂಡ್' ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಈ ಕಿರುಚಿತ್ರ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅದರಲ್ಲಿ ಕೆಲವು ಕವರ್ ಸಾಂಗ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಹೆಸರು ಬರುತ್ತಿದ್ದಂತೆ ಯೂಟ್ಯೂಬರ್ ಆಗಿ ಸಂಚಲನ ಸೃಷ್ಟಿಸಿದ್ದಾರೆ.

ಸುಪ್ರಿತಾ ಈ ಮಟ್ಟಿಗೆ ತೆಲುಗು ರಾಜ್ಯಗಳಲ್ಲಿ ಫೇಮಸ್ ಆಗುವುದಕ್ಕೆ ಕಾರಣ ಸೋಶಿಯಲ್ ಮೀಡಿಯಾ. ಚಿಕ್ಕ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಸುಪ್ರಿತಾಳನ್ನು ಆಕೆಯ ತಾಯಿ ಸುರೇಖಾ ವಾಣಿ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅಮರ್ ದೀಪ್ ಚೌಧರಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಮೂಲಕ ಸುಪ್ರಿತಾ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Famous youtuber and actress Surekha Vani Daughter Supritha wants to marry vijay deverakonda

ಸುಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಲೈವ್‌ಗೆ ಬಂದಿದ್ದರು. ತಮ್ಮನ್ನು ಫಾಲೋ ಮಾಡುವವರಿಗೆ ನಿಮ್ಮಲ್ಲಿ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದಿದ್ದರು. ಈ ವೇಳೆ ನೆಟ್ಟಿಗರು ಭಿನ್ನ ವಿಭಿನ್ನವಾದ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ನೀವು ಯಾವ ಅವಿವಾಹಿತ ಹೀರೊನಾ ಮದುವೆ ಆಗಲು ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು.

ಈ ಪ್ರಶ್ನೆಗೆ ಸುಪ್ರಿತಾ ಹಿಂದೆ ಮುಂದೆ ನೋಡದೆ ವಿಜಯ್ ದೇವರಕೊಂಡ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ವಿಜಯ್ ದೇವರಕೊಂಡ ಅವರ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಪ್ರಶ್ನೆಗೆ ನೇರವಾದ ಉತ್ತರ ಕೊಡದೇ ಹೋದರೂ, ವಿಜಯ್ ದೇವರಕೊಂಡ ಫೋಟೊ ಹಾಕುವ ಮೂಲಕ ಉತ್ತರ ಕೊಟ್ಟಿದ್ದರು. ಅದೇ ಸ್ಕ್ರೀನ್ ಶಾಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ನೆಟ್ಟಿಗರು ವಿಜಯ್ ದೇವರಕೊಂಡ ಜೊತೆ ಸುಪ್ರಿತಾರನ್ನು ಮದುವೆ ಮಾಡಿಸುವುದಕ್ಕೆ ನಿಂತಿದ್ದಾರೆ.

ಸುಪ್ರಿತಾ ತನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಬಗೆಗಿನ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ಸುಪ್ರಿತಾ ಮ್ಯಾಟರ್ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

More from Filmibeat

English summary
Actress Surekha Vani Daughter Supritha wants to marry Vijay Deverakonda:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X