'ಪುಷ್ಪ 2' ಗಂಗಮ್ಮ ಸೀನ್ ಬಂದಾಗ ವಿಚಿತ್ರವಾಗಿ ವರ್ತಿಸಿದ ಮಹಿಳೆಯರು; ಬೆಚ್ಚಿ ಬಿದ್ದ ಪ್ರೇಕ್ಷಕರು
ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಕಳೆದ ಮೂರು ದಿನಗಳಿಂದ ಸಿನಿ ಪ್ರಿಯರನ್ನು ಸೆಳೆಯುತ್ತಿದೆ. ಅಲ್ಲು ಅರ್ಜುನ್ ಮ್ಯಾನರಿಸಂಗೆ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಆದರೆ, ಸಿನಿಮಾದ ಕೆಲವು ಅಂಶಗಳು ಸಿನಿಪ್ರಿಯರಿಗೆ ಹಿಡಿಸಿಲ್ಲ. ಇದೆಲ್ಲ ಏನೇ ಇದ್ದರೂ 'ಪುಷ್ಪ 2' ರಿಲೀಸ್ ಆದ ದಿನದಿಂದ ಒಂದು ಒಂದು ವಿಷಯಕ್ಕೆ ಸುದ್ದಿಯಲ್ಲಿದೆ.
'ಪುಷ್ಪ 2' ಸಿನಿಮಾ ನೋಡುವುದಕ್ಕೆ ಹೋಗಿ ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಈ ಸುದ್ದಿ ಜೋರಾಗಿ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಘಟನೆ ಚಿತ್ರಮಂದಿರದಲ್ಲಿ ನಡೆದಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಮಹಿಳೆಯರು ವಿಚಿತ್ರವಾಗಿ ವರ್ತಿಸಿದ ಘಟನೆ ನಡೆದಿದೆ. ಇದನ್ನು ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ.

ಅಲ್ಲು ಅರ್ಜುನ್ 'ಪುಷ್ಪ 2' ತೆಲುಗು ಏರಿಯಾಗಳಲ್ಲಿ ಹವಾ ಜೋರಾಗಿದೆ. ಅದರಲ್ಲೂ ಅಲ್ಲು ಅರ್ಜುನ್ ಜಾತ್ರೆ ದೃಶ್ಯಕ್ಕೆ ಮನಸೋತಿದ್ದಾರೆ. ಥಿಯೇಟರ್‌ನಲ್ಲಿ ಈ ಸೀನ್ ಬರುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆಗಳೇ ಸದ್ದು ಮಾಡುತ್ತಿದೆ. ಆ ಪಾತ್ರದೊಳಗೆ ಹೊಕ್ಕು ಅಲ್ಲು ಅರ್ಜುನ್ ನಟಿಸಿದ್ದಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಇದೇ ದೃಶ್ಯವನ್ನು ನೋಡುತ್ತಿದ್ದ ಮಹಿಳೆಯೊಬ್ಬರು ಟ್ರಿಗರ್ ಆಗಿದ್ದು, ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ನಟನೆಯ ಸಿನಿಮಾ 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದ ಕೆಲವು ದೃಶ್ಯಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಆಕ್ಷನ್ ಸೀನ್‌ಗಳು, ಹಾಡು ಹಾಗೂ ಗಂಗಮ್ಮ ಜಾತ್ರೆಯ ದೃಶ್ಯ ತೆರೆಮೇಲೆ ಮೋಡಿ ಮಾಡಿದೆ. ಸಿನಿಮಾ ನೋಡಿ ಹೊರಬಂದವರು ಇವುಗಳ ಬಗ್ಗೆನೇ ಹೆಚ್ಚು ಮಾತಾಡುತ್ತಿದ್ದಾರೆ.
ಅದರಲ್ಲೂ ಅಲ್ಲು ಅರ್ಜುನ್ ಈ ಸಿನಿಮಾದಲ್ಲಿ ಪುಷ್ಪ ರಾಜ್ ಅವತಾರವೆತ್ತಿ ಸೀರೆಯುಟ್ಟು ಜಾತ್ರೆಯಲ್ಲಿ ಪರ್ಫಾಮೆನ್ಸ್ ಮಾಡುವ ದೃಶ್ಯಗಳು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇದು ಆಂಧ್ರ ಪ್ರದೇಶದ ತಿರುಪತಿ ಹಾಗೂ ಚಿತ್ತೂರು ಭಾಗದಲ್ಲಿ ನಡೆಯುವ ಜಾತ್ರೆ. ಈ ವೇಳೆ ಸೀರೆಯುಟ್ಟು ದೇವರ ಮುಂದೆ ನೃತ್ಯವನ್ನು ಮಾಡಲಾಗುತ್ತಿದೆ. ಈ ದೃಶ್ಯವನ್ನು ಸುಕುಮಾರ್ 'ಪುಷ್ಪ 2' ಸಿನಿಮಾದಲ್ಲಿ ತಂದಿದ್ದರು. ಅದೇ ದೃಶ್ಯವೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಗಂಗಮ್ಮ ಜಾತ್ರೆಯಲ್ಲಿ ಪುರುಷರು ಮಹಿಳೆಯಂತೆ ಸೀರೆಯುಟ್ಟು, ಆಭರಣಗಳನ್ನು ಧರಿಸಿ ಗಂಗಮ್ಮ ದೇವಿಯ ಮುಂದೆ ನೃತ್ಯ ಮಾಡುತ್ತಾರೆ. ಈ ಮೂಲಕ ತಮ್ಮ ಬೇಡಿಕೆಗಳು ಈಡೇರುತ್ತವೆ ಅನ್ನೋದು ನಂಬಿಕೆ. ಇದು ತೆಲುಗು ಮಂದಿ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಮಹಿಳೆಯರು ಸಿನಿಮಾದಲ್ಲಿ ಬರುವ ಈ ದೃಶ್ಯವನ್ನು ನೋಡುವಾಗ ಟ್ರಿಗರ್ ಆಗಿ ವಿಚಿತ್ರವಾಗಿ ವರ್ತಿಸಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಂದ್ಹಾಗೆ ಈ ಘಟನೆ ಯಾವ ಚಿತ್ರಮಂದಿರದಲ್ಲಿ ನಡೆದಿದ್ದು, 'ಪುಷ್ಪ 2' ಸಿನಿಮಾ ನೋಡುವಾಗಲೇ ಮಹಿಳೆಯರು ಹೀಗೆ ವರ್ತಿಸಿದರೇ ಅನ್ನುವ ಬಗ್ಗೆ ಕ್ಲಾರಿಟಿ ಇಲ್ಲ. ಹಾಗೇ ಈ ದೃಶ್ಯಕ್ಕೆ ಸೌದಿ ಅರೇಬಿಯಾದಲ್ಲಿ ಕತ್ತರಿ ಹಾಕಲಾಗಿದೆ. ಈ ಮೂಲಕ ಸುಮಾರು 19 ನಿಮಿಷಗಳನ್ನು ಎಡಿಟ್ ಮಾಡಲಾಗಿದೆ. ಅಲ್ಲಿನ ಧಾರ್ಮಿಕ ಗೌರವಗಳಿಗೆ ಬೆಲೆ ಕೊಡುವ ದೃಷ್ಠಿಯಿಂದ ಸೆನ್ಸಾರ ಮಾಡಲಾಗಿದೆ.


Click it and Unblock the Notifications











