ಐಪಿಎಲ್ ಹರಾಜು ಪ್ರತಿಕ್ರಿಯೆ ಮುನ್ನ RCB ಮಾಜಿ ಆಟಗಾರನ ಪತ್ನಿಯಿಂದ ಗುಡ್ ನ್ಯೂಸ್; ಹೀರೋ ಯಶ್

ಐಪಿಎಲ್ ಹರಾಜು ಪ್ರಕ್ರಿಯೆ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭ ಆಗುತ್ತಿದೆ. ಈ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾದು ಕೂತಿದ್ದಾರೆ. ಅದರಲ್ಲೂ ಆರ್‌ಸಿಬಿ (RCB)ತಂಡ ಯಾವ ಆಟಗಾರರನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತೆ ಅನ್ನುವ ಲೆಕ್ಕಾಚಾರವನ್ನು ಈಗಾಗಲೇ ಆರ್‌ಸಿಬಿ ಫ್ಯಾನ್ಸ್ ಈಗಾಗಲೇ ಶುರು ಮಾಡಿದ್ದಾರೆ. ಈ ಮಧ್ಯೆ ಆರ್‌ಸಿಬಿ ಮಾಜಿ ಆಟಗಾರನ ಪತ್ನಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿರುವ ಬಗ್ಗೆ ಸುದ್ದಿ ಹಬ್ಬಿದೆ.

ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳಿಂದ ಆಡಿದ್ದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ. ಅದೇ ಇನ್ನೊಂದು ಕಡೆ ಆರ್‌ಸಿಬಿ ಯಜುವೇಂದ್ರ ಚಹಾಲ್ ಅವರನ್ನು ಹರಾಜಿನಲ್ಲಿ ಖರೀದಿ ಮಾಡುವುದಕ್ಕೆ ಮುಂದಾಗಿದೆ ಅನ್ನುವ ಚರ್ಚೆ ನಡೆಯುತ್ತಿದೆ. ಹಲವು ಸೀಸನ್ ಆರ್‌ಸಿಬಿ ಟೀಮ್ ಪರ ಆಡಿದ್ದ ಯಜುವೇಂದ್ರ ಚಹಾಲ್ ಉತ್ತಮ ಪ್ರದರ್ಶನ ನೀಡಿದ್ದರು.

Former RCB player Yuzvendra Chahal wife Dhanashree Verma debut telugu movie here is report

ಮೊದಲು ಮುಂಬೈ ಇಂಡಿಯನ್ಸ್ ಪರ ಆಡಿದ್ದ ಯಜುವೇಂದ್ರ ಚಹಾಲ್ 2014 ರಿಂದ 2021ರವರೆಗೆ ಆರ್‌ಸಿಬಿ ಪರ ಬೌಲಿಂಗ್ ಮಾಡಿದ್ದರು. 2022ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರು. ನಾಳೆಯಿಂದ(ನವೆಂಬರ್ 24) ಐಪಿಎಲ್ ಹರಾಜು ಪ್ರಕ್ರಿಯೆ ಇದೆ. ಈ ಬೆನ್ನಲ್ಲೇ ಯಜುವೇಂದ್ರ ಚಹಾಲ್ ಯಾವ ತಂಡ ಸೇರಿಕೊಳ್ಳುತ್ತಾರೆ ಅನ್ನೋ ಕುತೂಹಲದ ನಡುವೆಯೇ ಚಹಾಲ್ ಪತ್ನಿ ಧನಶ್ರೀ ವರ್ಮಾ ತೆಲುಗು ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅಷ್ಟಕ್ಕೂ ಯಾವ ಸಿನಿಮಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕ್ರಿಕೆಟ್ ಆಟಗಾರ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಹಿಂಬಾಲಿಸುವ ಸಂಖ್ಯೆ ಏನೂ ಕಮ್ಮಿಯಿಲ್ಲ. ಪತಿಯಂತೆಯೇ ಧನಶ್ರೀ ವರ್ಮಾ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

Former RCB player Yuzvendra Chahal wife Dhanashree Verma debut telugu movie here is report

ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಹೆಜ್ಜೆ ಹಾಕಿ ಮನಗೆದ್ದಿರುವ ಧನಶ್ರೀ ವರ್ಮಾ ಈಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 'ಆಕಾಶಂ ಧಾಟಿ ವಸ್ತಾವ' ಅನ್ನುವ ಸಿನಿಮಾದಲ್ಲಿ ಧನಶ್ರೀ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾ ಡ್ಯಾನ್ಸ್ ಮಾಸ್ಟರ್ ಯಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಹಾಗೂ ಧನಶ್ರೀ ಜೋಡಿ ಒಟ್ಟಿಗೆ ತೆರೆ ತರಬೇಕು ಅಂತ ಕನಸು ಕಂಡಿದ್ದು ನಿರ್ಮಾಪಕ ದಿಲ್ ರಾಜು. ಇವರ ಪ್ರೊಡಕ್ಷನ್ ಹೌಸ್‌ನಿಂದ 'ಆಕಾಶಂ ಧಾಟಿ ವಸ್ತಾವ' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.

'ಆಕಾಶಂ ಧಾಟಿ ವಸ್ತಾವ' ಸಿನಿಮಾವನ್ನು ಶಶಿ ಕುಮಾರ್ ಮುತ್ತುಲೂರಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸಿನಿಮಾ ಶುರುವಾಗಿದ್ದು ಕೆಲವು ಭಾಗದ ಚಿತ್ರೀಕರಣ ಕೂಡ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಭಾಗ ಚಿತ್ರೀಕರಣದಲ್ಲಿ ಧನಶ್ರೀ ವರ್ಮಾ ಕೂಡ ಭಾಗವಹಿಸಿರುವ ಬಗ್ಗೆ ವರದಿಯಾಗಿದೆ. ಈ ಸಿನಿಮಾಗೆ ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಧನಶ್ರೀಗೆ ಆಡಿಷನ್ ನೀಡಲಾಗಿತ್ತು. ಅಲ್ಲಿ ಓಕೆ ಆದ ಬಳಿಕ ಚಿತ್ರತಂಡ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಈ ಸಿನಿಮಾ ಮತ್ತೊಬ್ಬ ನಾಯಕ ನಟಿ ಕೂಡ ಇರಲಿದ್ದು, ಜೊತೆಗೆ ಮಲಯಾಳಂ ನಟಿ ಕಾರ್ತಿಕಾ ಮುರಳೀಧರನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏನೇ ಇದ್ದರೂ ಯಜುವೇಂದ್ರ ಚಹಾಲ್ ಐಪಿಎಲ್ ಹರಾಜು ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದರೆ, ಅತ್ತ ಪತ್ನಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಸದ್ಯ ವೃತ್ತಿ ಬದುಕಿನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.

More from Filmibeat

English summary
Former RCB player Yuzvendra Chahal wife Dhanashree Verma debut telugu movie here is report;
Read more about: rcb wife filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X