ಮಹೇಶ್ ಬಾಬು ಬೇಗ ಗುಣಮುಖರಾಗಿ ಅಂತಿರೋದ್ಯಾಕೆ ಫ್ಯಾನ್ಸ್? ಅಂತಹದ್ದೇನಾಯ್ತು?

ಸೋಶಿಯಲ್ ಮೀಡಿಯಾದಲ್ಲಿ #GetWellSoonMaheshAnna ಅನ್ನುವ ಟ್ಯಾಗ್ ವೈರಲ್ ಆಗುತ್ತಿದೆ. ಎಲ್ಲಿ ನೋಡಿದ್ರೂ ಮಹೇಶ್ ಬಾಬು ಆರೋಗ್ಯದ ಬಗ್ಗೆನೇ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡುತ್ತಲೇ ಇದ್ದಾರೆ. ಹೀಗಾಗಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ತೆಲುಗು ಸೂಪರ್‌ಸ್ಟಾರ್ 'ಸರ್ಕಾರು ವಾರಿ ಪಾಠ' ಸಿನಿಮಾದ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅfನುವ ಸುದ್ದಿ ಹರಿದಾಡುತ್ತಿದ್ದೆ. ಈ ವಿಷಯ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ಗೆಟ್ ವೆಲ್ ಸೂನ್ ಮಹೇಶ್ ಅಣ್ಣ ಅಂತ ಟ್ಯಾಗ್ ಮಾಡಲಾಗುತ್ತಿದ್ದು, ಅಭಿಮಾನಿಗಳು ಮಹೇಶ್ ಬಾಬು ಬೇಗ ಗುಣಮುಖರಾಗಲಿ ಅಂತ ಬಯಸುತ್ತಿದ್ದಾರೆ. ಅಸಲಿಗೆ ಏನಾಗಿದೆ? ಅಭಿಮಾನಿಗಳು ಆತಂಕಕ್ಕೆ ಒಳಗಾಗಿರುವುದು ಏಕೆ? ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಮಹೇಶ್ ಬಾಬುಗೆ ಆರೋಗ್ಯ ಸಮಸ್ಯೆ?

ಮಹೇಶ್ ಬಾಬುಗೆ ಆರೋಗ್ಯ ಸಮಸ್ಯೆ?

ಟ್ವಿಟ್ಟರ್‌ನಲ್ಲಿ #GetWellSoonMaheshAnna ಮಹೇಶ್ ಅಣ್ಣ ಟಾಪ್ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಮಹೇಶ್ ಬಾಬು ಆರೋಗ್ಯದ ಬಗ್ಗೆ ಟಾಲಿವುಡ್ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ. ಅಭಿಮಾನಿಗಳೆಲ್ಲರೂ ಮಹೇಶ್ ಬಾಬು ಬೇಗೆ ಗುಣ ಮುಖರಾಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಅಷ್ಟಕ್ಕೂ ಹೀಗೆ ಪ್ರಿನ್ಸ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡುವುದಕ್ಕೆ ಕಾರಣವಿದೆ. ಮಹೇಶ್ ಬಾಬು ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅನ್ನುವ ಮಾತು ಹೇಳಿಬರುತ್ತಿದೆ. ಹೀಗಾಗಿ ಅಭಿಮಾನಿಗಳು ಮಹೇಶ್ ಬಾಬುಗೆ ಗೆಟ್ ವೆಲ್ ಸೂನ್ ಅಂತಿದ್ದಾರೆ.

ಪ್ರಿನ್ಸ್‌ಗೆ ಮೊಣಕಾಲಿನ ಶಸ್ತ್ರ ಚಿಕಿತ್ಸೆ?

ಪ್ರಿನ್ಸ್‌ಗೆ ಮೊಣಕಾಲಿನ ಶಸ್ತ್ರ ಚಿಕಿತ್ಸೆ?

ಕೋವಿಡ್ ಆರಂಭಕ್ಕೂ ಮುನ್ನ ಮಹೇಶ್ ಹಾಗೂ ಪತ್ನಿ ನಮೃತಾ ಶಿರೋಡ್ಕರ್ ಹಾಗೂ ಇಬ್ಬರು ಮಕ್ಕಳೊಂದಿಗೆ ನ್ಯೂಯಾರ್ಕ್‌ಗೆ ತೆರಳಿದ್ದರು. ಮೊದಲು ಅಮೆರಿಕಗೆ ವಿಶ್ರಾಂತಿ ಪಡೆಯಲು ತೆರೆಳಿದ್ದರು ಎಂದು ಹೇಳಲಾಗಿತ್ತು. ಬಳಿಕ ಅವರು ವಿಶ್ರಾಂತಿಗೆ ಹೋಗಿರಲಿಲ್ಲ. ಬದಲಾಗಿದೆ ಮೊಣಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಹೋಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಅಲ್ಲಿಂದ ಟಾಲಿವುಡ್ ಸೂಪರ್‌ಸ್ಟಾರ್ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಅನ್ನುವ ಮಾತು ಕೇಳಿಬರುತ್ತಲೇ ಇತ್ತು. ಈಗ ಕೂಡ ಇದೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದೆ. ಆದರೆ, ಈ ಬಗ್ಗೆ ಮಹೇಶ್ ಬಾಬು ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

'ಆತಡು' ಚಿತ್ರೀಕರಣದ ವೇಳೆ ಪ್ರಿನ್ಸ್ ಕಾಲಿಗೆ ಪೆಟ್ಟು

'ಆತಡು' ಚಿತ್ರೀಕರಣದ ವೇಳೆ ಪ್ರಿನ್ಸ್ ಕಾಲಿಗೆ ಪೆಟ್ಟು

2005ರಲ್ಲಿ ಬಿಡುಗಡೆಯಾಗಿದ್ದ 'ಅತಡು' ಸಿನಿಮಾದ ಚಿತ್ರೀಕರಣದ ವೇಳೆ ಮಹೇಶ್ ಬಾಬು ಕಾಲಿಗೆ ಪೆಟ್ಟಾಗಿತ್ತು. ಅಂದು ಆಗಿದ್ದ ಪೆಟ್ಟು ಮಹೇಶ್ ಬಾಬುಗೆ ನೋವು ಕೊಡುತ್ತಲೇ ಇತ್ತು. ಆಗಾಗ ಆ ನೋವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ಶಸ್ತ್ರ ಚಿಕಿತ್ಸೆ ಮಾಡಿಸಲು ಮಹೇಶ್ ಬಾಬು ಮುಂದಾಗಿದ್ದರು ಎನ್ನಲಾಗಿದೆ. ಅಮೆರಿಕಗೆ ಮಹೇಶ್ ತೆರೆಳಿದ್ದಾಗ,​ ಇನ್ನೂ ಐದು ತಿಂಗಳು ವಿದೇಶದಲ್ಲೇ ಇರುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು.

ಸಿಎಂ ರಿಲೀಫ್ ಫಂಡ್‌ಗೆ ಪ್ರಿನ್ಸ್ 25 ಲಕ್ಷ ದೇಣಿಗೆ

ಆಂಧ್ರದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಹಲವರು ಮನೆ-ಮಠಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಮಹೇಶ್ ಬಾಬು ಇಂದು (ಡಿಸೆಂಬರ್ 01)ರಂದು ಸಿಎಂ ರಿಲೀಫ್ ಫಂಡ್‌ಗೆ 25 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ್ದಾರೆ.

"ಆಂಧ್ರ ಪ್ರದೇಶದಲ್ಲಿ ಪ್ರವಾಹದಿಂದ ಜನಜೀವನ ತತ್ತರಿಸಿದ್ದು, ಸಿಎಂ ರಿಲೀಫ್ ಫಂಡ್‌ಗೆ 25 ಲಕ್ಷ ರೂಪಾಯಿ ನೀಡಲು ಬಯಸಿದ್ದೇನೆ. ಹೀಗಾಗಿ ಎಲ್ಲರೂ ಮುಂದೆ ಬಂದು ಈ ಕಷ್ಟ ಸನ್ನಿವೇಶದಲ್ಲಿ ನೆರವಾಗಬೇಕು ಎಂದು ಕೇಳಿಕೊಳ್ಳುತ್ತೇನೆ" ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.

More from Filmibeat

English summary
Mahesh Babu fans trending #getwellsoonmaheshanna. News is that Mahesh babu under going knee surgery. Mean while he donated 25 lakhs to CMFR Andra Pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X