Varanasi: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಟೈಟಲ್ ರಿವೀಲ್;ಟೈಟಲ್‌ಗೂ ಸಿನಿಮಾಗೂ ಏನು ಸಂಬಂಧ?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ಸಿನಿಮಾ ಅಂತ ಕೇಳಿದಾಗಲೇ ಫ್ಯಾನ್ಸ್‌ಗೆ ಕಿಕ್ ಕೊಟ್ಟಿತ್ತು. ಇನ್ನು ಸಿನಿಮಾ ಟೈಟಲ್ ರಿವೀಲ್ ಆಗುತ್ತೆ ಅಂದರೆ, ಹೇಗಿರುತ್ತೆ? ಅದರಲ್ಲೂ ಸಿನಿಮಾ ಗ್ಲಿಂಪ್ಸ್, ಸಾಂಗ್ ರಿವೀಲ್ ಆಗುತ್ತೆ ಅಂದರಂತೂ ಅಭಿಮಾನಿಗಳ ಪರಿಸ್ಥಿತಿ ಹೇಗಿರಬೇಡ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ದುಬಾರಿ ಕಾಂಬಿನೇಷನ್ ಸಿನಿಮಾದ 'ಗ್ಲೋಬ್ ಟ್ರಾಟರ್' ಕಾರ್ಯಕ್ರಮ ನಡೆದಿದೆ.
'ಗ್ಲೋಬ್ ಟ್ರಾಟರ್' ಇವೆಂಟ್‌ನಲ್ಲಿ ಮಹೇಶ್ ಬಾಬು, ರಾಜಮೌಳಿ, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರ್ ಸಿನಿಮಾದ ಶೀರ್ಷಿಕೆಯ ಕುತೂಹಲಕ್ಕೆ ತೆರೆಬಿದ್ದಿದೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಅಷ್ಟೇ ಅಲ್ಲದೆ, ಸಿನಿಮಾ ಟೈಟಲ್ ಕೂಡ ರಿವೀಲ್ ಆಗಿದೆ. ಹಾಗಿದ್ದರೆ, ಸಾವಿರ ಕೋಟಿ ಬಜೆಟ್ ಸಿನಿಮಾದ ಟೈಟಲ್ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಎಸ್‌ಎಸ್ ರಾಜಮೌಳಿ, ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರ ದುಬಾರಿ ಸಿನಿಮಾ ಟಾಲಿವುಡ್ ಅಷ್ಟೇ ಅಲ್ಲ. ಇಡಿ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ. ಈಗಾಗಲೇ ರಾಜಮೌಳಿಯವರೇ ಈ ವಿಷಯವನ್ನು ರಿವೀಲ್ ಮಾಡಿದ್ದು, ಇದು ಪ್ಯಾನ್-ವರ್ಲ್ಡ್ ಸಿನಿಮಾ ಅನ್ನೋದು ಕನ್ಫರ್ಮ್ ಆಗಿದೆ. ಇಷ್ಟೇ ಅಲ್ಲದೇ ವೇದಿಕೆ ಮೇಲೆ ನಿರ್ಮಾಪಕ ಕೆ.ಎಲ್. ನಾರಾಯಣ ಶೀಘ್ರದಲ್ಲಿಯೇ ಸಿನಿಮಾ ಬರುತ್ತೆ ಎಂದು ಹೇಳುವ ಮೂಲಕ ಅಭಿಮಾನಿಗಳ ಹುಮ್ಮಸ್ಸನ್ನು ದುಪ್ಪಟ್ಟು ಮಾಡಿದ್ದಾರೆ.
ನಿರೀಕ್ಷೆ ಮಾಡಿದಂತೆ ರಾಜಮೌಳಿ ಹಾಗೂ ಮಹೇಶ್ ಬಾಬು ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಸಿನಿಮಾ ರಾಜಮೌಳಿ 'ವಾರಣಾಸಿ' ಎಂದು ಇಟ್ಟಿದ್ದಾರೆ. ಇದರೊಂದಿಗೆ ಮಹೇಶ್ ಬಾಬು ಲುಕ್ ಕೂಡ ರಿವೀಲ್ ಮಾಡಿದ್ದಾರೆ. ರಾಜಮೌಳಿ ಬತ್ತಳಿಕೆಯಿಂದ ಮತ್ತೊಂದು ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಬರುವ ಎಲ್ಲಾ ಸೂಚನೆಗಳನ್ನೂ ನೀಡುತ್ತಿದೆ. ಸದ್ಯ 'ವಾರಣಾಸಿ' ಎನ್ನುವ ಟೈಟಲ್ ಸಿನಿಮಾ ಪ್ರಿಯರಿಗೆ ಸಖತ್ ಕಿಕ್ ಕೊಡುತ್ತಿದೆ.
ಗ್ಲೋಬಲ್ ಟ್ರಾಟರ್ ಇವೆಂಟ್ ಸಿಕ್ಕಾಪಟ್ಟೆ ದುಬಾರಿಯಾಗಿತ್ತು. 'ವಾರಾಣಾಸಿ' ಸಿನಿಮಾದ ಗ್ಲಿಂಪ್ಸ್ ಕೂಡ ಅಷ್ಟೇ ರಿಚ್ ಆಗಿದೆ. ಸಿನಿಮಾ ಬಗ್ಗೆ ರಾಜಮೌಳಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಪೌರಾಣಿಕ ಟಚ್ ಇದೆ. ಅವರ ಫೇವರಿಟ್ 'ರಾಮಾಯಣ' ಹಾಗೂ 'ಮಹಾಭಾರತ' ಆ ಸಿನಿಮಾಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನವೇ ಪೌರಾಣಿಕ ಸಿನಿಮಾದ ಮೊದಲ ಹೆಜ್ಜೆ ಇಟ್ಟಿರುವುದಾಗಿ ರಾಜಮೌಳಿ ಹೇಳಿಕೊಂಡಿದ್ದಾರೆ.

ಹಾಗೇ ಮೊದಲ ದಿನ ಸೆಟ್ಟಿನಲ್ಲಿ ಮಹೇಶ್ ಬಾಬುಗೆ ಶ್ರೀರಾಮ ಗೆಟಪ್ ಹಾಕಿಸಿದ್ದರು. ಅದನ್ನು ರಾಜಮೌಳಿಯೇ ಥ್ರಿಲ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು 'ರುಧ್ರ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಹಾಗೇ ರಾಜಮೌಳಿ ಫೇವರಿಟ್ ಎಂ.ಎಂ. ಕೀರವಾಣಿ ಟ್ಯೂನ್ ಹಾಕಿದ್ದಾರೆ. ಇಂದಿನಿಂದ ಈ ಸಿನಿಮಾ ಖದರ್ ಬೇರೆ ಇರುತ್ತೆ.
'ವಾರಾಣಾಸಿ' ಸಿನಿಮಾ ಮೂರು ಪ್ರಮುಖ ಪಾತ್ರಗಳಲ್ಲಿ ಪೃಥ್ವಿರಾಜ್ ಸುಕುಮಾರನ್ 'ಕುಂಬ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ' ಪಾತ್ರದಲ್ಲಿ ದೇಸಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಮಹೇಶ್ ಬಾಬು-ರಾಜಮೌಳಿ ಸಿನಿಮಾ ಪ್ಯಾನ್-ಗ್ಲೋಬಲ್ ಸಿನಿಮಾ ಆಗಿದ್ದು, ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಗ್ಯಾರಂಟಿ. ಸಿಕ್ಕಾಪಟ್ಟೆ ವಿಎಫ್‌ಎಕ್ಸ್ ಎಲ್ಲಾ ಬಳಸಿ ಸಿನಿಮಾ ಮಾಡುತ್ತಿರುವುದರಿಂದ ಯಾವಾಗ ರಿಲೀಸ್ ಆಗುತ್ತೆ? ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.


Click it and Unblock the Notifications











