ಬೀಚ್‌ನಲ್ಲಿ ಕೆಂಪು ಮಿನಿ ಡ್ರೆಸ್ ತೊಟ್ಟು ಮಿಂಚಿದ ಶ್ರೀಲೀಲಾ; ಬಲು ಮಜವಾಗಿದೆ ನೆಟ್ಟಿಗರ ಕಾಮೆಂಟ್!

ಮತ್ತೊಬ್ಬ ಕನ್ನಡದ ನಟಿ ತೆಲುಗು ಅಂಗಳಕ್ಕೆ ಕಾಲಿಟ್ಟು ಬಹಳ ದಿನಗಳಾಗಿವೆ. ಸ್ಯಾಂಡಲ್‌ವುಡ್‌ನಿಂದ ಪಲಾಯನ ಮಾಡಿದ ಮೇಲೆ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದಿದ್ದವು. ಚಿಕ್ಕ ವಯಸ್ಸಿನಲ್ಲೇ ತೆಲುಗಿನ ಸೂಪರ್‌ಸ್ಟಾರ್‌ಗಳ ಜೊತೆ ನಟಿಸುವ ಅವಕಾಶನೂ ಸಿಕ್ಕಿತ್ತು.

ತೆಲುಗು ಸಿನಿಮಾಗಳಲ್ಲಿ ನಾಯಕಿಯರನ್ನು ಮುದ್ದು ಮುದ್ದಾಗಿ ತೋರಿಸುತ್ತಾರೆ. ಇಂತಹ ಹೊಸ ನಾಯಕಿಯನ್ನು ಹುಡುಕಾಡುತ್ತಿದ್ದಾಗ ಶ್ರೀಲೀಲಾ ಕಣ್ಣಿಗೆ ಬಿದ್ದಿದ್ದರು. ಹೀಗಾಗಿ ಟಾಲಿವುಡ್‌ನಲ್ಲಿ ಸಾಕಷ್ಟು ಆಫರ್ ಸಿಕ್ಕಿದ್ದವು. ಆದರೆ, ಯಾಕೋ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಇವರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

Gunturu Kaaram actress sreeleela with a red dress in beachside photos goes viral

ಸದ್ಯ ಶ್ರೀಲೀಲಾ ಒಂದಿಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಸದ್ದು ಮಾಡುತ್ತಿಲ್ಲ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದರಿಂದ ಶಿಕ್ಷಣವನ್ನು ಮುಗಿಸಿ, ಬಳಿಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಹೀಗಾಗಿ ಈ ನಟಿಯ ಅಭಿಮಾನಿಗಳು ಮಂಕಾಗಿದ್ದು ಇದೆ.

ಹೊಸ ಸಿನಿಮಾ ಒಪ್ಪಿಕೊಳ್ಳದೇ ಇದ್ದರೆ ಏನಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಕೆಂಪು ಡ್ರೆಸ್ ತೊಟ್ಟು, ಬೀಚ್‌ನಲ್ಲಿ ಗುಂಟೂರು ಖಾರದಂತೆ ಕಂಗೊಳಿಸುತ್ತಿರುವ ಶ್ರೀಲೀಲಾ ಫೋಟೊಗಳು ನೆಟ್ಟಿಗರ ಮನಸ್ಸು ಗೆದ್ದಿವೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

ಶ್ರೀಲೀಲಾ ತಮ್ಮ ಇನ್‌ಸ್ಟಾಗ್ರಾಂ ಹಂಚಿಕೊಂಡ ಫೋಟೊಗಳು ವೈರಲ್ ಆಗಿವೆ. ಕೆಂಪು ಬಣ್ಣದ ಚಿಕ್ಕ ಉಡುಪನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ರೆಡ್ ಹಾಟ್ ಡ್ರೆಸ್‌ನಲ್ಲಿ ಬೀಚ್ ಸುತ್ತಲೂ ನಡೆದಾಡಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದಾರೆ.

Gunturu Kaaram actress sreeleela with a red dress in beachside photos goes viral

ಸದ್ಯ ಶ್ರೀಲೀಲಾ ಶೇರ್ ಮಾಡಿರುವ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ನೋಡಿದವ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಕೆಲವರಂತೂ ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. "ನೀನು ಅದೆಷ್ಟು ಸುಂದರಿ"," ನೀನು ಸಿಕ್ಕಾಪಟ್ಟೆ ಹಾಟ್" ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ಮತ್ತೆ ಕೆಲವರು ಶ್ರೀಲೀಲಾಗೆ ವಯಸ್ಸು ಎಷ್ಟೇ ಇರಲಿ ಇಷ್ಟು ಚಿಕ್ಕ ಡ್ರೆಸ್ ಯಾಕಮ್ಮ ಅಂತ ಸಲಹೆಯನ್ನೂ ನೀಡಿದ್ದಾರೆ. ಏನೇ ಇದ್ದರೂ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡು, ನೆಟ್ಟಿಗರ ಹೃದಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿರುವುದಂತೂ ಅಷ್ಟೇ ಸತ್ಯ.

More from Filmibeat

English summary
Gunturu Kaaram actress Sreeleela new photos went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X