ಮತ್ತೆ ಸೂಪರ್ ಹೀರೋ ಅವತಾರವೆತ್ತಿದ 'ಹನುಮಾನ್' ನಟ: 'ಮಿರಾಯ್' ಅವತಾರದಲ್ಲಿ ತೇಜ್ ಸಜ್ಜಾ ಎಂಟ್ರಿ

ಟಾಲಿವುಡ್‌ನಲ್ಲಿ 'ಹನುಮಾನ್' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದ ತೇಜ್ ಸಜ್ಜಾ ಈಗ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. 'ಹನುಮಾನ್'ನಲ್ಲಿ ಸೂಪರ್ ಹೀರೋ ಕಾಣಿಸಿಕೊಂಡಿದ್ದ ನಟ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು. ಈಗ ಮುಂದಿನ ಸಿನಿಮಾದಲ್ಲಿಯೂ ಸೂಪರ್‌ ಹೀರೋ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಫಸ್ಟ್ ಲುಕ್‌ ರಿಲೀಸ್ ಮಾಡುವುದಕ್ಕೆ ಚಿತ್ರರಂಗ ರೆಡಿಯಾಗಿದೆ.

ತೆಲುಗಿನ ಯುವ ನಟ ತೇಜ್ ಸಜ್ಜಾಗೆ 'ಹನುಮಾನ್' ಹೆಸರು ತಂದುಕೊಟ್ಟಿತ್ತು. ಆರಂಭದಲ್ಲಿ ತೆಲುಗು ಬಿಟ್ಟರೆ, ಬೇರೆ ಭಾಷೆಗಳಲ್ಲಿ ಸಿನಿಮಾ ಸದ್ದು ಮಾಡುವುದು ಅನುಮಾನ ಎಂದೇ ಪರಿಗಣಿಸಲಾಗಿತ್ತು. ಆದರೆ, ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಯುವ ನಟನ ಮುಂದಿನ ಸಿನಿಮಾ ಹೇಗಿರುತ್ತೋ ಎಂದು ಕುತೂಹಲದಿಂದ ನೋಡುತ್ತಿದ್ದವರಿಗೆ ಹೊಚ್ಚ ಹೊಸ ಸಿನಿಮಾದ ಮಾಹಿತಿ ಸಿಕ್ಕಿದೆ.

Hanuman movie actor Tej Sajja upcoming film Mirai first look will be releasing on May 28th

ಅಂದ್ಹಾಗೆ, ತೇಜ್ ಸಜ್ಜಾ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು 'ಮಿರಾಯ್'. ಈ ಸಿನಿಮಾದ ಟೀಸರ್ ರಿಲೀಸ್‌ಗೆ ಈಗಾಗಲೇ ಡೇಟ್ ಕೂಡ ಫಿಕ್ಸ್ ಆಗಿದೆ. ಆದರಕ್ಕೂ ಮುನ್ನ ಚಿಕ್ಕದೊಂದು ಪೋಸ್ಟರ್ ರಿಲೀಸ್ ಆಗಿದೆ. ಹಾಗಿದ್ದರೆ, 'ಮಿರಾಯ್' ಸಿನಿಮಾದ ಹೈಲೈಟ್ ಏನು? ಯಾವಾಗ ಟೀಸರ್ ರಿಲೀಸ್ ಆಗುತ್ತೆ? 'ಹನುಮಾನ್' ಹೀರೋ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ತೇಜ್ ಸಜ್ಜಾ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಸೀನ್‌ಗಳು ಇರುತ್ತವೆ ಎನ್ನಲಾಗಿದೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಮಿರಾಯ್' ಈಗಾಗಲೇ ರೆಡಿಯಾಗಿದ್ದು, ಪ್ರಚಾರವನ್ನು ಆರಂಭಿಸಿದೆ. ಈ ಸಿನಿಮಾ ಸುಮಾರು ಎಂಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಾರ್ತಿಕ್ ಘಟ್ಟಮನೇನಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

'ಮಿರಾಯ್' ಸಿನಿಮಾದ ಇನ್ನೊಂದು ವಿಶೇಷವಿದೆ. ಈ ಸಿನಿಮಾ ಸಿನಿಪ್ರಿಯರು 2D ಮತ್ತು 3D ಭಾಷೆಯಲ್ಲಿ ನೋಡಬಹುದು. ಆಕ್ಷನ್ ಕಮ್ ಸೂಪರ್ ಹೀರೋ ಸಿನಿಮಾ ಆಗಿದ್ದರಿಂದ ಎರಡು ಫಾರ್ಮೆಟ್‌ಗಳಲ್ಲಿ ನಿರ್ಮಾಣ ಆಗಿದೆ. ಈ ಮೂಲಕ ತೇಜ್ ಸಜ್ಜಾ ಅಭಿಮಾನಿಗಳಿಗೆ ಹೊಸ ಅನುಭವಗಳನ್ನು ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಮೇ 28ರಂದು ಟೀಸರ್ ಬಿಡುಗಡೆಯಾಗಲಿದೆ.

ಅಂದ್ಹಾಗೆ 'ಮಿರಾಯ್ 'ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಈ ಸಿನಿಮಾ ಹೇಳುವುದಕ್ಕೆ ಹೊರಟಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಟಿ.ಜಿ.ವಿಶ್ವಪ್ರಸಾದ್ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ರಾಕಿಂಗ್ ಸ್ಟಾರ್ ಮನೋಜ್ ಮಂಚು ಖಳನಾಯಕನಾಗಿ ನಟಿಸಿದ್ದಾರೆ. ಹಾಗೇ ರಿತಿಕಾ ನಾಯಕ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಸೂಪರ್ ಯೋಧಾ ಪಾತ್ರದಲ್ಲಿ ತೇಜ್ ಸಜ್ಜಾ ನಟಿಸುತ್ತಿದ್ದಾರೆ. ಕಾರ್ತಿಕ್ ಗಟ್ಟಮ್ನೇನಿ 'ಮಿರಾಯ್‌'ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. 'ಹನುಮಾನ್' ಅಂತಯೇ ಈ ಸಿನಿಮಾದ ಟೀಸರ್ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ? ಎನ್ನುವುದು ನೋಡಬೇಕಿದೆ.

More from Filmibeat

English summary
Hanuman movie actor Tej Sajja upcoming film Mirai first look will be releasing on May 28th.
Read more about: tollywood movie telugu actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X