ಈ ಏರಿಯಾದಲ್ಲಿ ಹನುಮಾನ್ ಮುಂದೆ ಮಹೇಶ್ ಬಾಬು ಆಟ ನಡೆಯಲಿಲ್ಲ; ಗುಂಟೂರು ಖಾರಂ ಒಪ್ಪಿಲ್ಲ ಪ್ರೇಕ್ಷಕರು!

ತೆಲುಗು ಚಿತ್ರರಂಗದಲ್ಲಿ ಸಂಕ್ರಾಂತಿ ಫೈಟ್ ಆದಂಗೆ ಬೇರೆ ಚಿತ್ರರಂಗದಲ್ಲಿ ಆಗೋದು ತೀರಾ ವಿರಳ. ಪ್ರತಿ ವರ್ಷ ದಿಗ್ಗಜರ ಸಿನಿಮಾಗಳು ಅಖಾಡಕ್ಕೆ ಇಳಿಯುತ್ತವೆ. ಕಳೆದ ವರ್ಷ ಕೂಡ ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಖಾಮುಖಿ ಆಗಿದ್ದವು.

ಈ ಬಾರಿ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್ ಹಾಗೂ ಟಾಲಿವುಡ್ ಮನ್ಮಥ ನಾಗಾರ್ಜುನಾ ಬಾಕ್ಸಾಫೀಸ್ ಅಖಾಡಕ್ಕೆ ಇಳಿದಿದ್ದಾರೆ. ಮಹೇಶ್ ಸಿನಿಮಾ 'ಗುಂಟೂರು ಖಾರಂ', ವೆಂಕಟೇಶ್ ಸಿನಿಮಾ 'ಸೈಂಧವ್' ಹಾಗೂ ನಾಗಾರ್ಜುನ ಸಿನಿಮಾ 'ನಾ ಸಾಮಿ ರಂಗ' ಮೂರು ಪ್ರಮುಖ ಸಿನಿಮಾಗಳ ಮೇಲೆ ಎಲ್ಲರ ಕಣ್ಣಿಟ್ಟಿತ್ತು.

Hanuman overtakes Mahesh Babu Movie Guntur Kaaram in USA

ಆದರೆ, ಬಾಕ್ಸಾಫೀಸ್‌ನಲ್ಲಿ ಲೆಕ್ಕಕ್ಕೇ ಇಡದ ಸಿನಿಮಾವೊಂದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 'ಗುಂಟೂರು ಖಾರಂ' ಎಲ್ಲಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದ್ರೀಗ ಟ್ರೇಡ್ ಎಕ್ಸ್‌ಪರ್ಟ್‌ಗಳ ಆ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಬಿಡುಗಡೆಯಾದ ಎರಡನೇ ದಿನಕ್ಕೆ ಒಂದು ಏರಿಯಾದಲ್ಲಿ 'ಗುಂಟೂರು ಖಾರಂ' ಸಿನಿಮಾವನ್ನು 'ಹನುಮಾನ್' ಹಿಂದಿಕ್ಕಿದೆ.

'ಹನುಮಾನ್' ಸೂಪರ್ ಹೀರೊ ಸಿನಿಮಾ. ಪೌರಾಣಿಕ ಹಿನ್ನೆಲೆ ಕೂಡ ಇರುವುದರಿಂದ ಈ ಸಿನಿಮಾ ಕಡೆಗೆ ಪ್ರೇಕ್ಷಕರು ವಾಲುತ್ತಿದ್ದಾರೆ. 'ಗುಂಟೂರು ಖಾರಂ' ಸಿನಿಮಾಗೆ ಮೊದಲ ದಿನವೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಬೆನ್ನಲ್ಲೇ 'ಹನುಮಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿದೆ. ಅದರಲ್ಲೂ ಯುಎಸ್‌ಎ ಬಾಕ್ಸಾಫೀಸ್‌ನಲ್ಲಿ ಮಹೇಶ್ ಬಾಬು ಸಿನಿಮಾವನ್ನು ಹಿಂದಿಕ್ಕಿದೆ.

Hanuman overtakes Mahesh Babu Movie Guntur Kaaram in USA

ಅಮೆರಿಕದಲ್ಲಿ ಮಹೇಶ್ ಬಾಬುಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಟಾಲಿವುಡ್ ಸೂಪರ್‌ಸ್ಟಾರ್ ಸಿನಿಮಾಗಳು ಯುಎಸ್‌ಎನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತವೆ. ಹಾಗೇ 'ಗುಂಟೂರು ಖಾರಂ' ಸಿನಿಮಾ ಯುಎಸ್ಎ ಬಾಕ್ಸಾಫೀಸ್‌ನಲ್ಲಿ 2.2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಆದರೆ, 'ಹನುಮಾನ್' ಸಿನಿಮಾ 2.4 ಮಿಲಿಯನ್ ಡಾಲರ್‌ನಷ್ಟು ಕಲೆಕ್ಷನ್ ಮಾಡಿ ಮಹೇಶ್ ಬಾಬು ಸಿನಿಮಾಗಿಂತ ಮುಂದಿದೆ.

ಈ ಬೆಳವಣಿಗೆಗಳನ್ನು ಗಮನಿಸಿದ ಬಳಿಕ 'ಹನುಮಾನ್' ತೆಲುಗಿನ ಬ್ಲಾಕ್‌ಬಸ್ಟರ್ ಸಿನಿಮಾಗಳ ದಾಖಲೆಯನ್ನು ಮುರಿದು ಹಾಕುತ್ತೆ ಎಂದು ಹೇಳಲಾಗಿದೆ. ಯುಎಸ್‌ಎನಲ್ಲಿ ಮಹೇಶ್ ಬಾಬು ನಟಿಸಿದ್ದ 'ಭರತ್ ಅನೆ ನೇನು' 3.42 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿತ್ತು. ಹಾಗೇ ರಾಮ್ ಚರಣ್ ಸಿನಿಮಾ 'ರಂಗಸ್ಥಳಂ' ಸಿನಿಮಾ 3.51 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ್ರೆ, ಅಲ್ಲು ಅರ್ಜುನ್ ಸಿನಿಮಾ 'ಅಲಾ ವೈಕುಂಠಪುರಮುಲೋ' 3.61 ಮಿಲಿಯನ್ ಡಾಲರ್ ಕಲೆ ಹಾಕಿತ್ತು. ಮುಂದಿನ ದಿನಗಳಲ್ಲಿ 'ಹನುಮಾನ್' ಸಿನಿಮಾ ಈ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಭವಿಷ್ಯ ನುಡಿದಿದ್ದಾರೆ.

ಹಾಗೇ ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯದಲ್ಲಿ 'ಹನುಮಾನ್' ಸಿನಿಮಾ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಅಂದ್ಹಾಗೆ 'ಹನುಮಾನ್' ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ತೇಜಾ ಸಜ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರೊಂದಿಗೆ ವಿನಯ್ ರೈ, ವರಲಕ್ಷ್ಮಿ ಶರತ್ ಕುಮಾರ್, ಅಮೃತಾ ಐಯ್ಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Hanuman Vs Guntur Kaaram in USA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X