ಅಲ್ಲು ಅರ್ಜುನ್ ಬಂಧನದ ಬಳಿಕ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಏರಿಕೆ ಆಯ್ತಾ? 9ನೇ ದಿನ ಗಳಿಸಿದ್ದೆಷ್ಟು?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ ನಿನ್ನೆ (ಡಿಸೆಂಬರ್ 13) ದೇಶಾದ್ಯಂತ ಹಲ್‌ಚಲ್ ಎಬ್ಬಿಸಿತ್ತು. ತಮ್ಮ ನೆಚ್ಚಿನ ನಟನನ್ನು ಅರೆಸ್ಟ್ ಮಾಡಿದ್ದಕ್ಕೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. 'ಪುಷ್ಪ 2' ದಾಖಲೆ ಕಲೆಕ್ಷನ್ ಮಾಡುತ್ತಿರುವ ಬೆನ್ನಲ್ಲೇ ಅಲ್ಲು ಅರ್ಜುನ್ ಬಂಧಿಸಿದ್ದು, ಸಿನಿಮಾ ಮಂದಿಯನ್ನೂ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು.

ಅಲ್ಲು ಅರ್ಜುನ್ ಅರೆಸ್ಟ್ ಮಾಡಿದ್ದು ರಾಜಕೀಯ ಪ್ರೇರಿತವೋ? ಇಲ್ಲ ಇದರ ಹಿಂದೆ ಏನಾದರೂ ವೈಯಕ್ತಿಕ ದ್ವೇಷವಿದೆಯಾ? ಎನ್ನುವ ಪ್ರಶ್ನೆಯಂತೂ ಟಾಲಿವುಡ್ ಮಂದಿಯನ್ನು ಕಾಡಿದ್ದು ಸುಳ್ಳಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಪರವಾಗಿ ಬಹುತೇಕ ಮಂದಿ ಬ್ಯಾಟ್ ಬೀಸಿದ್ದರು. ಹಾಗೇ ತೆಲುಗು ಚಿತ್ರರಂಗ ಕೂಡ ಅಲ್ಲು ಅರ್ಜುನ್ ಬೆಂಬಲಕ್ಕೆ ನಿಂತಿತ್ತು.

How is Pushpa 2 box office collection on day 9 after Allu Arjun s arrest in Telangana

ಆದರೆ, ಅಲ್ಲು ಅರ್ಜುನ್ ಬೆಂಬಲಕ್ಕೆ ಅದೆಷ್ಟೇ ಮಂದಿ ಬಂದಿದ್ದರೂ ಕೆಲವರು ಮಾತ್ರ ಇದು ಪಬ್ಲಿಸಿಟಿ ಸ್ಟಂಟ್ ಎಂದೇ ಹೇಳಿದ್ದರು. 7 ದಿನಗಳ ಬಳಿಕ 'ಪುಷ್ಪ 2' ಬಾಕ್ಸಾಫೀಸ್‌ ಕಲೆಕ್ಷನ್ ಡೌನ್ ಆಗುತ್ತಿತ್ತು. ಈ ಕಾರಣಕ್ಕೆ ಅಲ್ಲು ಅರ್ಜುನ್ ಬಂಧನ ಅನ್ನೋದು ಪ್ರಚಾರಕ್ಕೆ ಮಾಡಿದ್ದು ಅನ್ನೋ ಕಾಮೆಂಟ್‌ಗಳು ಹರಿದಾಡಿದ್ದವು. ಹಾಗಿದ್ದರೆ, ಅಲ್ಲು ಅರ್ಜುನ್ ಅರೆಸ್ಟ್ ಬಳಿಕ 'ಪುಷ್ಪ 2' ಕಲೆಕ್ಷನ್‌ನಲ್ಲಿ ಏರಿಕೆ ಆಯ್ತಾ? ಇಳಿಕೆ ಆಯ್ತಾ? ತಿಳಿಯಲು ಮುಂದೆ ಓದಿ.

ಅಲ್ಲು ಅರ್ಜುನ್ ಅರೆಸ್ಟ್ ಎಫೆಕ್ಸ್ ಏನು?

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 'ಪುಷ್ಪ 2' ಪ್ರೀಮಿಯರ್ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಆಕೆಯ ಪುತ್ರನ ಸ್ಥಿತಿ ಗಂಭೀರವಾಗಿದೆ. ಈ ಬೆನ್ನಲ್ಲೇ ಅಲ್ಲು ಅರ್ಜುನ್, ಸಂಧ್ಯಾ ಚಿತ್ರಮಂದಿರದ ಮ್ಯಾನೇಜ್ಮೆಂಟ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಅಲ್ಲು ಅರ್ಜುನ್‌ ಅವರನ್ನು ಬಂಧಿಸಲಾಗಿತ್ತು. ಅಲ್ಲಿಂದ ಇಡೀ ದಿನ ಅಲ್ಲು ಅರ್ಜುನ್ ಬಗ್ಗೆನೇ ಚರ್ಚೆಯಾಗಿತ್ತು. ಹಾಗೇ ಪರೋಕ್ಷವಾಗಿ 'ಪುಷ್ಪ 2' ಸಿನಿಮಾನೂ ಗಮನ ಸೆಳೆದಿತ್ತು.

How is Pushpa 2 box office collection on day 9 after Allu Arjun s arrest in Telangana

9ನೇ ದಿನ 'ಪುಷ್ಪ 2' ಕಲೆಕ್ಷನ್ ಎಷ್ಟು?

'ಪುಷ್ಪ 2'ಗೆ ಅಲ್ಲು ಅರ್ಜುನ್ ಬಂಧನವಾದ ದಿನ (ಡಿಸೆಂಬರ್ 13) ಎರಡನೇ ಶುಕ್ರವಾರವಾಗಿತ್ತು. ಸಿನಿಮಾ ಬಿಡುಗಡೆಯಾಗಿ 9ನೇ ದಿನಕ್ಕೆ ಕಾಲಿಟ್ಟಿತ್ತು. ಸೋಮವಾರದ ಬಳಿಕ ಸಹಜವಾಗಿ ಕಲೆಕ್ಷನ್‌ ಡ್ರಾಪ್ ಆಗುತ್ತಿತ್ತು. ಆದರೆ, ಅದೇನು ಚಿತ್ರತಂಡಕ್ಕೆ ದೊಡ್ಡ ಸಮಸ್ಯೆ ಆಗಿರಲಿಲ್ಲ. ಕಾಕತಾಳೀಯವೇನೋ ಎಂಬಂತೆ ಅಲ್ಲು ಅರ್ಜುನ್ ಬಂಧನದ ಬಳಿಕ ಬಾಕ್ಸಾಫೀಸ್‌ನಲ್ಲಿ ಏರಿಕೆ ಆಗಿದೆ. ನಿನ್ನೆ ಒಂದೇ ದಿನ ಭಾರತದಾದ್ಯಂತ 36.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲಿ ಗಳಿಕೆ ಎಷ್ಟು?

ಅಲ್ಲು ಅರ್ಜುನ್ ಬಂಧನ ಕರ್ನಾಟಕದಲ್ಲಿ ಅಂತಹ ಎಫೆಕ್ಟ್ ಏನೂ ಆಗಿಲ್ಲ. ಕರ್ನಾಟಕ ಡಿಸ್ಟ್ರಿಬ್ಯೂಟರ್‌ ಸೆಕ್ಟರ್‌ನಲ್ಲಿ ಹರಿದಾಡುತ್ತಿರುವ ಲೆಕ್ಕಚಾರದ ಪ್ರಕಾರ, 'ಪುಷ್ಪ 2' ನಿನ್ನೆ (ಡಿಸೆಂಬರ್ 13) ಕೇವಲ 1.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು 9 ದಿನಕ್ಕೆ ಭಾರತದಾದ್ಯಂತ ಈ ಸಿನಿಮಾ 762.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 1067 ಕೋಟಿ ರೂಪಾಯಿ ಎನ್ನಲಾಗಿದೆ.

ಹಿಂದಿ ಬೆಲ್ಟ್‌ನಲ್ಲಿ 'ಪುಷ್ಪ 2' ಖದರ್

ಅಲ್ಲು ಅರ್ಜುನ್ ಬಂಧನದ ಬಳಿಕ ಆಂಧ್ರ, ತಮಿಳುನಾಡಿನಲ್ಲೂ 'ಪುಷ್ಪ 2' ಸದ್ದು ಮಾಡಿಲ್ಲ. ಆಂಧ್ರ, ತೆಲಂಗಾಣದಿಂದ 7.5 ಕೋಟಿ ರೂ. ಕಲೆಕ್ಷನ್ ಮಾಡಿದರೆ, ತಮಿಳುನಾಡಿನಲ್ಲಿ 1.35 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದೇ ಹಿಂದಿ ಬೆಲ್ಟ್‌ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಆಗಿದೆ. ನಿನ್ನೆ ಕಲೆ ಹಾಕಿದ 36.25 ಕೋಟಿ ರೂಪಾಯಿಯಲ್ಲಿ ಹಿಂದಿಯಿಂದಲೇ 27 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇಲ್ಲಿವರೆಗೂ ಹಿಂದಿ ಏರಿಯಾದಿಂದ 406.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

More from Filmibeat

English summary
How is Pushpa 2's box office collection on day 9 after Allu Arjun's arrest in Telangana?;
Read more about: allu arjun box office arrest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X