'ಪುಷ್ಪ 2' ₹1000 ಕೋಟಿ ಗಳಿಸಿದ್ರೆ, ಅಲ್ಲು ಅರ್ಜುನ್‌ಗೆ ಸಿಗೋದು ಎಷ್ಟು ಕೋಟಿ? ರಜನಿ, ಶಾರುಖ್, ಪ್ರಭಾಸ್ ಕೂಡ ಲೆಕ್ಕಕ್ಕಿಲ್ಲ!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡಬಹುದು ಎಂಬ ನಿರೀಕ್ಷೆನೇ ಇರಲಿಲ್ಲ. ಕೇವಲ ಹಿಂದಿ ಬೆಲ್ಟ್‌ನಲ್ಲೇ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಯಶಸ್ಸಿನ ಬೆನ್ನತ್ತಿರೋ ಅಲ್ಲು ಅರ್ಜುನ್ 'ಪುಷ್ಪ 2'ನಲ್ಲಿ ತೊಡಗಿಸಿಕೊಂಡಿದ್ದಾರೆ.
'ಪುಷ್ಪ' ಸಕ್ಸಸ್ ಬಳಿಕ ನಿರ್ದೇಶಕ ಸುಕುಮಾರ್ ಕೂಡ ಸ್ಕ್ರಿಪ್ಟ್ ಅನ್ನೇ ಬದಲಾಯಿಸಿದ್ದಾರೆ. ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾ ದಾಖಲೆಯನ್ನು ಮೀರಿಸಬೇಕು ಅಂತಲೇ ಪಣ ತೊಟ್ಟು ನಿಂತಿದ್ದಾರೆ. ಬಾಕ್ಸಾಫೀಸ್‌ನಲ್ಲಿ 'ಪುಷ್ಪ' ಹಣೆಬರಹ ಅದೇನಾಗುತ್ತೋ ಬೇರೆ ಅದು ಮಾತು. ಆದರೆ, ಟಾಲಿವುಡ್‌ನಲ್ಲಿ ಲೆಕ್ಕ ಹಾಕುತ್ತಿರೋದು ನೋಡಿ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ.

ಅದು ಅಲ್ಲು ಅರ್ಜುನ್‌ಗೆ 'ಪುಷ್ಪ 2' ಸಿನಿಮಾದಿಂದ ಸಿಗುವ ಸಂಭಾವನೆ. 'ಪುಷ್ಪ' ಕ್ರೇಜ್ ಏನು ಕಮ್ಮಿ ಇರಲಿಲ್ಲ. ಅಲ್ಲು ಅರ್ಜುನ್ ಮ್ಯಾನರೀಸಂಗೆ ಭಾರತ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದರು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ 'ಪುಷ್ಪ 2' 1000 ಕೋಟಿ ರೂಪಾಯಿಯನ್ನು ನಿರಾಸವಾಗಿ ಬಾಚಿಕೊಳ್ಳುತ್ತೆ ಅನ್ನೋದು ಟಾಲಿವುಡ್ ಮಂದಿಯ ಲೆಕ್ಕಚಾರ.
ಒಂದು ವೇಳೆ 'ಪುಷ್ಪ 2' ಸಾವಿರ ಕೋಟಿ ರೂಪಾಯಿ ಬಾಚಿಕೊಂಡರೆ, ಅಲ್ಲು ಅರ್ಜುನ್‌ಗೆ ಸಿಗುವ ಸಂಭಾವನೆ ಎಷ್ಟು? ಟಾಲಿವುಡ್ ಮಂದಿ ಹಾಕಿರೋ ಲೆಕ್ಕಾಚಾರ ಕೇಳಿದ್ರೆ ತಲೆ ತಿರುಗಿತ್ತೆ. ಟಾಲಿವುಡ್ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಈ ಸಿನಿಮಾಗೆ ಸಂಭಾವನೆ ಪಡೆದಿಲ್ಲ. ಬದಲಾಗಿ, ಸಿನಿಮಾದಿಂದ ಆದ ಕಲೆಕ್ಷನ್‌ನಲ್ಲಿ ಶೇ.33 ಪರ್ಸೆಂಟ್ ಹಣವನ್ನು ಸಂಭಾವನೆ ರೂಪದಲ್ಲಿ ನೀಡುವಂತೆ ಒಡಂಬಡಿಕೆ ಆಗಿದೆ. ಒಂದ್ವೇಳೆ ಇದು ನಿಜವೇ ಆಗಿದ್ದರೆ, ಅರ್ಜುನ್ ಅರ್ಜುನ್‌ಗೆ 333 ಕೋಟಿ ರೂಪಾಯಿ ಸಂಭಾವನೆ ರೂಪದಲ್ಲಿ ಬರುತ್ತೆ.

ಈಗೆಲ್ಲ ಸೂಪರ್‌ಸ್ಟಾರ್‌ಗಳ ಸಂಭಾವನೆ ನೂರು ಕೋಟಿ ರೂಪಾಯಿ ದಾಟಿದೆ. ಹಾಗೇ ಇದು ದೊಡ್ಡ ವಿಷಯ ಆಗೇನು ಉಳಿದಿಲ್ಲ. ಆದರೆ, ಒಬ್ಬ ನಟನಿಗೆ 333 ಕೋಟಿ ರೂಪಾಯಿ ಕೊಡುವುದು ಅಂದರೆ, ಅದೇನು ಚಿಕ್ಕ ಬೆಲೆ ಅಲ್ಲ. ಅಸಲಿಗೆ ಟಾಲಿವುಡ್‌ನಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿರುವುದು ನಿಜ. ಹಾಗಿದ್ದರೆ, ಅಲ್ಲು ಅರ್ಜುನ್‌ಗೆ 333 ಕೋಟಿ ರೂಪಾಯಿ ಸಂಭಾವನೇ ಸಿಗಬಹುದೇ..?
ಇನ್ನೊಂದು ಮೂಲದ ಪ್ರಕಾರ, 'ಪುಷ್ಪ 2' ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದೇ ಆದರೆ, ಅಲ್ಲು ಅರ್ಜುನ್ ದೊಡ್ಡ ಮೊತ್ತ ಸಿಗೋದು ಗ್ಯಾರಂಟಿ. ಹಾಗಂತ 333 ಕೋಟಿ ರೂಪಾಯಿ ಸಿಗೋದಿಲ್ಲ ಎನ್ನುತ್ತಿದೆ. ಕೊಯ್‌ಮೊಯ್ ವರದಿ ಮಾಡಿರುವ ಪ್ರಕಾರ, ಅಲ್ಲು ಅರ್ಜುನ್‌ಗೆ ಥಿಯೇಟರ್‌ನಿಂದ ಆದ ಕಲೆಕ್ಷನ್‌ನಲ್ಲಿ 33% ಸಂಭಾವನೆ ಸಿಗುತ್ತೆ. ಆದರೆ, ಒಟ್ಟು ಗಳಿಕೆಯಲ್ಲಿ ಅಲ್ಲ. ಬದಲಾಗಿ ಲಾಭದಲ್ಲಿ 33% ಸಿಗುತ್ತೆ.
'ಪುಷ್ಪ 2' 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ವಿತರಕರ ಕಡೆಯಿಂದ ಶೇರ್ ಅಂತ 500 ರಿಂದ 550 ಕೋಟಿ ರೂಪಾಯಿ ಬರುತ್ತೆ. ಅದರಲ್ಲಿ ಟ್ಯಾಕ್ ಅಂತ 100 ಕೋಟಿ ರೂಪಾಯಿ ಹೋದರೆ, ಉಳಿದ 450 ಕೋಟಿ ರೂಪಾಯಿಯಲ್ಲಿ 33% ಅಂದರೆ, 150 ಕೋಟಿ ರೂಪಾಯಿ ಬರುತ್ತೆ ಎಂದು ಅಂದಾಜು ಮಾಡಲಾಗಿದೆ. ಆದರೂ, ಇದು ಅಲ್ಲು ಅರ್ಜುನ್ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಸಂಭಾವನೆ ಎಂದು ಹೇಳಲಾಗುತ್ತಿದೆ.
ಏನಕ್ಕೂ 'ಪುಷ್ಪ 2' 1000 ಕೋಟಿ ಕಲೆಕ್ಷನ್ ಮಾಡಿದ ಮೇಲೆ ಅಲ್ಲು ಅರ್ಜುನ್‌ಗೆ ಎಷ್ಟು ಸಂಭಾವನೆ ಬಂದಿದೆ ಅನ್ನೋದು ಗೊತ್ತಾಗಬಹುದು. ಅಲ್ಲಿವರೆಗೂ ಇದು ಬರೀ ಲೆಕ್ಕಾಚಾರ ಅಷ್ಟೇ. ಸದ್ಯ 'ಪುಷ್ಪ 2' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ.


Click it and Unblock the Notifications











