"ಮಹೇಶ್ ಬಾಬುಗೆ ತಾಯಿ ಆಗೋದು ಅಂದ್ರೇನು? ನಮ್ಮಿಬ್ಬರದ್ದೂ ಒಂದೇ ವಯಸ್ಸು"; 'ಜಾಣ' ಸಿನಿಮಾ ನಟಿ ಕಸ್ತೂರಿ

ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ 'ಜಾಣ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ನಟಿ ಕಸ್ತೂರಿ ಶಂಕರ್. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜನಪ್ರಿಯ ನಟಿ ವಿವಾಹದ ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರು. ಆದ್ರೀಗ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

ಕಸ್ತೂರಿ ಶಂಕರ್ ಕಿರುತೆರೆಯಲ್ಲೂ ಫೇಮಸ್ ಆಗಿದ್ದಾರೆ. ಆದರೆ, ತಮ್ಮ ಪಾತ್ರಕ್ಕಿಂತ ಹೆಚ್ಚಾಗಿ ತಮ್ಮ ಹೇಳಿಕೆಗಳಿಂದ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಸ್ತೂರಿ ಶಂಕರ್ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ವಯಸ್ಸಿನ ಬಗ್ಗೆ ಮಾತಾಡಿ ಚರ್ಚೆಯಲ್ಲಿದ್ದಾರೆ. ಸದ್ಯ ಸಂದರ್ಶನದಲ್ಲಿ ತನಗೆ ವಯಸ್ಸಾಗದೇ ಇರುವುದರಿಂದ ಆಫರ್‌ಗಳನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

I can t play Mahesh babu mother since we are same age says Kasturi Shankar

ಹೌದು, ಕಸ್ತೂರಿ ಶಂಕರ್‌ಗೆ ವಯಸ್ಸು ಆಗುತ್ತಿಲ್ಲ ಅನ್ನೋ ಆಂತಕ. ಯಾಕಂದ್ರೆ, ಅವರು ಇನ್ನೂ ಚಿಕ್ಕವರು ಅನ್ನುವ ಕಾರಣಕ್ಕೆ ಸಿನಿಮಾದಲ್ಲಿ ತಾಯಿಯ ಪಾತ್ರಕ್ಕೆ ಆಫರ್ ಕೊಡುತ್ತಿಲ್ಲವಂತೆ. ಈಗಾಗಲೇ ಕೆಲವು ಆಫರ್‌ಗಳು ಹೀಗೆ ಕೈ ತಪ್ಪಿ ಹೋಗಿವೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಸಲಿಗೆ ಮಹೇಶ್ ಬಾಬು ಅಂತ ಸ್ಟಾರ್ ಹೀರೊಗಳ ಜೊತೆ ಅಮ್ಮನಾಗಿ ನಟಿಸುವುದಿಲ್ಲ ಎಂದು ಕಸ್ತೂರಿ ಶಂಕರ್ ಪರೋಕ್ಷವಾಗಿ ಹೇಳಿಕೊಂಡಂತೆ ಇದೆ.

ಇತ್ತೀಚೆಗೆ ಕಲ್ಯಾಣ್ ರಾವ್ ನಟಿಸಿದ 'ಡೆವಿಲ್' ಅನ್ನುವ ತೆಲುಗು ಸಿನಿಮಾದಲ್ಲಿ ಕಸ್ತೂರಿ ಶಂಕರ್‌ಗೆ ಅಮ್ಮನಾಗಿ ನಟಿಸುವ ಆಫರ್ ಸಿಕ್ಕಿತ್ತಂತೆ. ಈ ಪಾತ್ರದಲ್ಲಿ ನೀವು ನಟಿಸಬೇಕು ಎಂದು ಹೇಳಿದ್ದರಂತೆ. ಬಳಿಕ ಹೀರೋಗೆ ಇನ್ನೂ ಯಂಗ್ ಆಗಿ ಕಾಣಿಸುತ್ತೀರ ಅಂತ ಆ ಸಿನಿಮಾ ರಿಜೆಕ್ಟ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ.

I can t play Mahesh babu mother since we are same age says Kasturi Shankar

ಹಾಗಂತ 'ಡೆವಿಲ್' ಸಿನಿಮಾ ಒಂದೇ ಅಲ್ಲ. ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಕಾಲ' ಸಿನಿಮಾದಲ್ಲೂ ನಟಿಸಬೇಕಿತ್ತಂತೆ. ಈಶ್ವರಿ ರಾವ್ ಮಾಡಿದ ಪಾತ್ರಕ್ಕೆ ಮೊದಲ ಕಸ್ತೂರಿ ಶಂಕರ್‌ಗೆ ಆಫರ್ ಬಂದಿತ್ತಂತೆ. ಬಳಿಕ ಎರಡು ಮಕ್ಕಳ ತಾಯಿಯಾಗಿ ಕಾಣಿಸುವುದು ಸೂಟ್ ಆಗುವುದಿಲ್ಲ ಎಂದು ರಿಜೆಕ್ಟ್ ಆಗಿದ್ದರಂತೆ. ಏನು ಮಾಡುವುದು ನನ್ನ ಮುಖ ಚಿಕ್ಕವರ ಹಾಗೆ ಕಾಣುತ್ತೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

"ನಾನು ಇನ್ನೂ ನನ್ನ ಕೂದಲಿಗೆ ಬಣ್ಣ ಹಚ್ಚುವುದಿಲ್ಲ. ಏಕೆಂದರೆ ನನ್ನ ಕೂದಲು ಇನ್ನೂ ಬೆಳ್ಳಗಾಗಿಲ್ಲ. ಇನ್ನೂ ನನ್ನ ಕೂದಲು ಕಪ್ಪಾಗಿಯೇ ಇದೆ. ಈಗ ಕೂದಲಿಗೆ ಬಿಳಿ ಬಣ್ಣ ಹಚ್ಚಿ ತಾಯಿಯಾಗಿ ನಾನು ನಟಿಸಬೇಕು. ಇದು ನನ್ನ ಜೀವನದ ಅಂತ್ಯ ಅಲ್ಲವೇ.. ಯಾವುದೇ ಸಿನಿಮಾ ಬಂದರೂ ಬಿಳಿ ಬಣ್ಣವನ್ನು ಹಚ್ಚಿ ನಟಿಸಬೇಕು. ನನಗೆ ವಯಸ್ಸಾಗುತ್ತಿಲ್ಲ, ನಾನೇನು ​​ಮಾಡಬೇಕು?" ಎಂದು ಹೇಳಿಕೊಂಡಿದ್ದಾರೆ.

ಕಸ್ತೂರಿ ಶಂಕರ್ ಅವರಿಗೆ ತಾಯಿ ಪಾತ್ರಗಳಿವೆ ಆಫರ್ ಬರುತ್ತಿವೆಯಂತೆ. ಇನ್ನು 30 ವರ್ಷಗಳ ಕಾಲ ತಾಯಿ ಪಾತ್ರಗಳು ಬರುತ್ತಲೇ ಇರುತ್ತವೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಇನ್ಮುಂದೆ ತಾಯಿ ಪಾತ್ರಗಳನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ತನ್ನ ಹಾಗೂ ಮಹೇಶ್ ಬಾಬು ವಯಸ್ಸು ಒಂದೇ. ಆ ಹೀರೋ ಪಕ್ಕ ಅಮ್ಮನಾದರೆ ನಾನೇ ಹೀರೋಯಿನ್ ತರ ಕಾಣುತ್ತೇನೆ ಎಂದಿದ್ದಾರೆ. ಈ ಮಾತು ಕೇಳಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

More from Filmibeat

English summary
Kasturi Shankar about playing mother role in Mahesh Babu movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X