'ನನ್ನ ದೇಹದ ಎಲ್ಲಾ ಅಂಗಗಳನ್ನು ದಾನ ಮಾಡುತ್ತೇನೆ': ವಿಜಯ್ ದೇವರಕೊಂಡ ಈ ನಿರ್ಧಾರಕ್ಕೆ ಬಂದಿದ್ದೇಕೆ?

ಟಾಲಿವುಡ್‌ ರೌಡಿ ವಿಜಯ್ ದೇವರಕೊಂಡ ವೇದಿಕೆ ಮೇಲೆ ರಫ್ ಅಂಡ್ ಟಪ್ ಆಗಿಯೇ ಮಾತಾಡುತ್ತಾರೆ. ಎದುರಿಗೆ ಯಾರೇ ಇದ್ದರೂ, ವಿಜಯ್ ಮಾತಿನ ಶೈಲಿ ಮಾತ್ರ ಬದಲಾಗುವುದೇ ಇಲ್ಲ. ಸಿನಿಮಾದಲ್ಲೂ ಇವರ ಪಾತ್ರಗಳು ಅಷ್ಟೇ ರಗಡ್ ಆಗಿಯೇ ಇರುತ್ತವೆ.

ರೀಲ್ ಹಾಗೂ ರಿಯಲ್ ಲೈಫ್‌ ಎರಡರಲ್ಲೂ ವಿಜಯ್ ದೇವರಕೊಂಡ ವಿಭಿನ್ನ ಅಂತ ಅನಿಸೋದಿಲ್ಲ. ಫಿಲ್ಟರ್‌ ಇಲ್ಲದೆ ಬಡ ಬಡ ಅಂತ ಮಾತಿಗೆ ಇಳಿದು ಬಿಡುಗಡುವ ಪಕ್ಕಾ ಇಂದಿನ ಜನರೇಷನ್ ಹೀರೊ. ಆದ್ರೀಗ ಭಾವನಾತ್ಮಕವಾಗಿ ಅಂಗಾಂಗ ದಾನ ಮಾಡುವ ಬಗ್ಗೆ ಮಾತಾಡಿದ್ದಾರೆ. ಅಸಲಿಗೆ ವಿಜಯ್ ದೇವರಕೊಂಡ ತೆಗೆದುಕೊಂಡ ಈ ನಿರ್ಧಾರದ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ.

ನನ್ನ ಅಂಗಾಂಗಗಳನ್ನು ದಾನ ಮಾಡುತ್ತೇನೆ

ನನ್ನ ಅಂಗಾಂಗಗಳನ್ನು ದಾನ ಮಾಡುತ್ತೇನೆ

ವಿಜಯ್ ದೇವರಕೊಂಡು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನೆರೆದಿದ್ದವರು ಹಾಗೂ ಮಾಧ್ಯಮದವರ ಮುಂದೆ ತಾವು ತೆಗೆದುಕೊಂಡಿರುವ ಒಂದೊಳ್ಳೆ ನಿರ್ಧಾರದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. " ವೈದ್ಯ ಗುಂಪಿನಿಂದ ನಾನು ಇತ್ತೀಚೆಗೆ ಅಂಗಾಂಗ ದಾನ ಮಾಡುವುದರಿಂದ ಜೀವಗಳನ್ನು ಉಳಿಸಬಹುದು ಎಂದು ಕೇಳಿದ್ದೇನೆ. ಹೀಗಾಗಿ ನಾನು ನನ್ನ ಅಂಗಾಗಗಳನ್ನು ದಾನ ಮಾಡಲು ನಿರ್ಧಾರ ಮಾಡಿದ್ದೇನೆ." ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

ತಾಯಿಯೊಂದು ಅಂಗ ದಾನಕ್ಕೆ ವಿಜಯ್ ಸಹಿ

ತಾಯಿಯೊಂದು ಅಂಗ ದಾನಕ್ಕೆ ವಿಜಯ್ ಸಹಿ

ವಿಜಯ್ ದೇವರಕೊಂಡ ಹೇಳಿದಂತೆ ಮಾಡುವ ನಟ. ಒಮ್ಮೆ ಹೇಳಿದ್ದನ್ನು ಮತ್ತೊಂದು ಯೋಚಿಸುವ ಗೋಜಿಗೆ ಹೋಗಿಲ್ಲ. ಈಗಾಗಲೇ ಅಂಗಾಂಗ ದಾನ ಸಹಿ ಹಾಕಿದ್ದು, ಆ ಬಳಿಕಷ್ಟೇ ಮಾಹಿತಿಯನ್ನು ತಿಳಿಸಿದ್ದಾರೆ. " ನಾನು ಹಾಗೂ ನನ್ನ ಅಮ್ಮ ಇಬ್ಬರೂ ಈಗಾಗಲೇ ಅಂಗಾಂಗ ದಾನ ಮಾಡುವುಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದೇವೆ. ಇದು ಸರಿಯಾದ ಕಡೆ ತಲುಪುತ್ತೆ ಎಂದು ನಾನು ಭರವಸೆಯನ್ನು ನೀಡುತ್ತೇನೆ." ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

ನನ್ನ ಅಂಗಗಳು ಶೇಪ್‌ನಲ್ಲಿವೆ

ನನ್ನ ಅಂಗಗಳು ಶೇಪ್‌ನಲ್ಲಿವೆ

ಇಷ್ಟೇ ಅಲ್ಲದೆ ವಿಜಯ್ ದೇವರಕೊಂಡ ತಮ್ಮ ಅಂಗಾಗಳು ಸರಿಯಾದ ಶೇಪ್‌ನಲ್ಲಿವೆ ಎಂದು ಭರವಸೆಯನ್ನೂ ನೀಡಿದ್ದಾರೆ. " ನನ್ನ ಅಂಗಾಂಗಗಳು ಸರಿಯಾದ ಶೇಪ್‌ನಲ್ಲಿ ಇವೆ ಎಂದು ನಾನು ಭರವಸೆಯನ್ನು ನೀಡುತ್ತೇನೆ. ಅವುಗಳನ್ನು ಹಾಗೇ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ನಮ್ಮ ಅಂಗಗಳನ್ನು ದಾನ ಮಾಡುವ ಮೂಲಕ ಬೇರೊಂದು ಜೀವವನ್ನು ಉಳಿಸುವುದು ತುಂಬಾನೇ ಸುಂದರ. ನನಗೆ ಇದು ಅದ್ಭುತ ಅಂತ ಅನಿಸಿದೆ. ನಾನೂ ಕೂಡ ಇದರ ಭಾಗವಾಗಿ ಇರುವುದಕ್ಕೆ ಯತ್ನಿಸುತ್ತೇನೆ. ಇನ್ನೂ ಹಲವು ಜನರು ಈ ನಿರ್ಧಾರ ಕೈಗೊಳ್ಳಬೇಕು" ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

'ಖುಷಿ' ಖುಷಿಯಾಗಿರೋ ವಿಜಯ್ ದೇವರಕೊಂಡ

'ಖುಷಿ' ಖುಷಿಯಾಗಿರೋ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಹೊಸ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ. 'ಲೈಗರ್' ಸೋಲಿನ ಬಳಿಕ ಕಂಗೆಡದೆ ಹೊಸ ಸಿನಿಮಾಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಅಭಿನಯದ 'ಖುಷಿ' ಸಿನಿಮಾದ ಚಿತ್ರೀಕರಣ ಬಾಕಿ ಉಳಿದಿದೆ. ಸಮಂತಾ ಆರೋಗ್ಯ ಚೇತರಿಸಿಕೊಂಡು ಶೂಟಿಂಗ್‌ಗೆ ಮರಳಿದ ಬಳಿಕ ಮತ್ತೆ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆನೇ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆನೂ ಆರಂಭ ಆಗಿದೆ.

More from Filmibeat

English summary
I Have Decided To Donate All My Organs Says Vijay Devarakonda, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X