'ಪುಷ್ಪ' ಪಾತ್ರಕ್ಕೆ ಅಲ್ಲು ಅರ್ಜುನ್ ಸಿದ್ಧತೆ ಹೇಗಿತ್ತು? 50 ಸೆಕೆಂಡುಗಳ ವಿಡಿಯೋದಲ್ಲೇನಿದೆ ನೋಡಿ

ಅಲ್ಲು ಅರ್ಜುನ್ 'ಪುಷ್ಪ' ಭಾರತದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ನಾಲ್ಕು ಭಾಷೆಗಳಲ್ಲೂ ಅಲ್ಲು ಅರ್ಜುನ್ ಸಿನಿಮಾ ಚಿಂದಿ ಉಡಾಯಿಸಿದೆ. ಅಲ್ಲು ಅರ್ಜುನ್ ನಟಿಸಿದ ಸಿನಿಮಾಗಳ ದಾಖಲೆಗಳನ್ನೆಲ್ಲಾ ಈ ಸಿನಿಮಾ ಮುರಿದು ಹಾಕಿದೆ. ಹೀಗಾಗಿ ಪುಷ್ಪ ಸಿನಿಮಾ ನಿರ್ಮಿಸಿದ ನಿರ್ಮಾಣ ಸಂಸ್ಥೆ ಕೂಡ ಫುಲ್ ಖುಷಿಯಾಗಿದ್ದು, ಅಲ್ಲು ಅರ್ಜುನ್ ಈ ಪಾತ್ರಕ್ಕಾಗಿ ಹೇಗೆಲ್ಲಾ ತಯಾರಿ ನಡೆಸುತ್ತಿದ್ದರು ಎನ್ನುವ ಚಿಕ್ಕ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ.

ಮೈತ್ರಿ ಮೂವಿ ಮೇಕರ್ಸ್ ಅಂತಹ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ. ಸುಕುಮಾರ್ ಅಂತಹ ಖ್ಯಾತ ನಿರ್ದೇಶಕ. ಡಿಗ್ಲಾಮರ್ ರಶ್ಮಿಕಾ ಮಂದಣ್ಣ, ವಿಲನ್ ಅವತಾರದಲ್ಲಿ ಸುನೀಲ್. ಹೀಗೆ ಪಾತ್ರಗಳಿಗೆ ವಿಭಿನ್ನ ಟಚ್ ಕೊಟ್ಟಿರುವ 'ಪುಷ್ಪ' 2021ರ ಅತೀ ಹೆಚ್ಚು ಗಳಿಕೆ ಕಂಡಿರುವ ಸಿನಿಮಾಗಳ ಲಿಸ್ಟ್ ಸೇರಿದೆ.

ಅಲ್ಲು ಅರ್ಜುನ್ 'ಪುಷ್ಪ' ಪಾತ್ರಕ್ಕೆ ಸಜ್ಜಾಗಿದ್ದು ಹೇಗೆ?

ಅಲ್ಲು ಅರ್ಜುನ್ 'ಪುಷ್ಪ' ಬಾಕ್ಸಾಫೀಸ್‌ಗೆ ದೊಡ್ಡ ಚಾಲೆಂಜ್. ಅಲ್ಲು ಅರ್ಜುನ್ ರಗಡ್ ಪಾತ್ರ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ದಾಖಲಿಸಿದೆ. ಬಾಹುಬಲಿ ಬಳಿಕ ಬಾಲಿವುಡ್‌ನಲ್ಲಿ ಡಬ್ಬಿಂಗ್ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡಿದೆ. ಹೀಗಾಗಿ ಅಲ್ಲು ಅರ್ಜುನ್ ಫುಲ್ ಖುಷಿಯಾಗಿದ್ದಾರೆ. 'ಪುಷ್ಪ' ಪಾತ್ರಕ್ಕಾಗಿ ಐಕಾನ್ ಸ್ಟಾರ್ ಸಂಪೂರ್ಣವಾಗಿ ಬದಲಾಗಿದ್ದರು. ಗಂಟೆ ಗಟ್ಟಲೆ ಮೇಕಪ್ಮ ಕಾಸ್ಟ್ಯುಮ್ ಅಂತಲೇ ಸಮಯ ಕಳೆದಿದ್ದಾರೆ.

Icon Star Allu Arjun Preparation for Pushpa Character Video Going Viral
ಹೀಗಾಗಿ 'ಪುಷ್ಪ' ಚಿತ್ರತಂಡ ತೆರೆಯ ಹಿಂದೆ ಅಲ್ಲು ಅರ್ಜುನ್ ಪಾತ್ರಕ್ಕಾಗಿ ಬದಲಾದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅಲ್ಲು ಅರ್ಜುನ್ 'ಪುಷ್ಪ' ಅವತಾರವೆತ್ತಲು ಹೇಗೆಲ್ಲಾ ಮೇಕಪ್ ಮಾಡಿದ್ದರು. ಈ ಪಾತ್ರಕ್ಕೆ ತಯಾರಿ ನಡೆಸುತ್ತಿದ್ದ ಪರಿಯನ್ನು 50 ಸೆಕೆಂಡ್​ಗಳ ವಿಡಿಯೋದಲ್ಲಿ ತೋರಿಸಿದ್ದಾರೆ. ಅಲ್ಲು ಅರ್ಜುನ್ ಕಾರಿನಿಂದ ಇಳಿದು​ ಮೇಕಪ್ ಹಚ್ಚಿಕೊಂಡು ಶೂಟಿಂಗ್ ತೆರಳುವ ವರೆಗಿನ ಜರ್ನಿಯನ್ನು 50 ಸೆಕೆಂಡುಗಳಲ್ಲಿ ತೋರಿಸಲಾಗಿದೆ.
Icon Star Allu Arjun Preparation for Pushpa Character Video Going Viral

ವೈರಲ್ ಆಗುತ್ತಿದೆ ಅಲ್ಲು 'ಪುಷ್ಪ' ವಿಡಿಯೋ

ಅಲ್ಲು ಅರ್ಜುನ್ 'ಪುಷ್ಪ' ಅವತಾರವೆತ್ತಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಈ ವಿಡಿಯೋ ನೋಡಿ ಥ್ರಿಲ್ ಆಗಿದ್ದಾರೆ. ಹೀಗಾಗಿ 'ಪುಷ್ಪ; ದಿ ರೈಸ್' ಬಳಿಕ 'ಪುಷ್ಪ: ದಿ ರೂಲ್' ಗಾಗಿ ಕಾತುರದಿಂದ ಕಾದು ಕೂತಿದ್ದಾರೆ.

'ಪುಷ್ಪ: ದಿ ರೈಸ್' ಅಲ್ಲುಅರ್ಜುನ್‌ಗೆ ಸಿಕ್ಕಿರುವ ಅತೀ ದೊಡ್ಡ ಯಶಸ್ಸು. ಈ ಸಿನಿಮಾ ಬಾಕ್ಸಾಫೀಸ್​ನಲ್ಲಿ ಬರೋಬ್ಬರಿ 300 ಕೋಟಿ ಲೂಟಿ ಮಾಡಿದೆ. ಬಾಲಿವುಡ್‌ನಲ್ಲಿಯೇ 100 ಕೋಟಿ ಬಾಚಿಕೊಂಡಿದೆ. ಹೀಗಾಗಿ ಐಕಾನ್ ಸ್ಟಾರ್ 'ಪುಷ್ಪ 2'ಗೆ ಯಾವಾಗ ಮರಳುತ್ತಾರೆ? ಮತ್ತೆ ಯಾವಾಗ ಸಿನಿಮಾ ನೋಡುತ್ತೇವೋ ಅನ್ನುವ ಕಾತುರದಲ್ಲಿದ್ದಾರೆ. ಏಪ್ರಿಲ್ ತಿಂಗಳಿಂದ 'ಪುಷ್ಪ 2' ಚಿತ್ರೀಕರಣ ಆರಂಭ ಆಗಲಿದ್ದು, ಅದಕ್ಕಾಗಿ ಅಲ್ಲು ಅರ್ಜುನ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

'ಪುಷ್ಪ: ದಿ ರೂಲ್' ಚಿತ್ರದಲ್ಲಿ ಸ್ಯಾಂಡಲ್​ವುಡ್‌ನ ನಟ ರಾಕ್ಷಸ ಧನಂಜಯ್, ಮಲಯಾಳಂ ನಟ ಫಹಾದ್ ಫಾಸಿಲ್ ಪಾತ್ರಕ್ಕೆ ಮತ್ತಷ್ಟು ಪ್ರಾಮುಖ್ಯತೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ 'ಪುಷ್ಪ' ಒಟಿಟಿಯಲ್ಲೂ ಸದ್ದು ಮಾಡುತ್ತಿದ್ದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

More from Filmibeat

English summary
Icon star Allu Arjun preparation for Pushpa character video going viral. Pushpa team released 50 seconds video of how Allu Arjun prepared for his character.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X