ಪ್ರಭಾಸ್ ಲಾಟರಿ ಸ್ಟಾರ್- ಅಲ್ಲು ಅರ್ಜುನ್ ರಿಯಲ್ ಸ್ಟಾರ್: ಯಾಕೀ ಫ್ಯಾನ್ಸ್ ವಾರ್?

ಅಲ್ಲು ಅರ್ಜುನ್ 'ಪುಷ್ಪ: ದಿ ರೈಸ್' ಬಾಕ್ಸಾಫೀಸ್‌ನಲ್ಲಿ ಗೆದ್ದ ಖುಷಿಯಲ್ಲಿದ್ದಾರೆ. ಅತ್ತ 'ರಾಧೆ ಶ್ಯಾಮ್' ಸಿನಿಮಾ ಬಿಡುಗಡೆ ಮಾಡುವುದಕ್ಕೆ ಪ್ರಭಾಸ್ ಓಡಾಡುತ್ತಿದ್ದಾರೆ. ಟಾಲಿವುಡ್‌ನ ಈ ಇಬ್ಬರೂ ನಟರೂ ತಮ್ಮದೇ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಮಧ್ಯೆ ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುತ್ತಿದ್ದಾರೆ.

Recommended Video

ಅಲ್ಲು ಅರ್ಜುನ್ ಆಕ್ಟಿಂಗ್‌ಗೆ ಫಿದಾ ಆದಾ ಬಾಲಿವುಡ್ ನಿರ್ಮಾಪಕರು !

'ಪುಷ್ಪ' ಸಿನಿಮಾದ ಸೂಪರ್‌ ಸಕ್ಸಸ್ ಅಲ್ಲು ಅರ್ಜುನ್ ಅಭಿಮಾನಿಗಳನ್ನು ಖುಷಿಯ ಅಲೆಯಲ್ಲಿ ತೇಲಿಸುತ್ತಿದೆ. ಮೊದಲ ಪ್ಯಾನ್ ಇಂಡಿಯಾ ಸಿನಿಮಾವೇ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಕನ್ನಡ ಒಂದನ್ನು ಬಿಟ್ಟು ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ 'ಪುಷ್ಪ' ಬಾಕ್ಸಾಫೀಸ್ ಬೇಜಾನ್ ಸದ್ದು ಮಾಡಿದೆ. ಅದರಲ್ಲೂ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 80 ಕೋಟಿ ರೂ. ಅಧಿಕ ಲೂಟಿ ಮಾಡಿದ್ದು, ಅಲ್ಲು ಫ್ಯಾನ್ಸ್‌ಗೆ ಗರಿ ಬಂದಂತಾಗಿದ್ದು, ಪ್ರಭಾಸ್ ಫ್ಯಾನ್ಸ್ ಟಕ್ಕರ್ ಕೊಡುತ್ತಿದ್ದಾರೆ.

 ಲಾಟರಿ ಸ್ಟಾರ್ Vs ರಿಯಲ್ ಸ್ಟಾರ್

ಲಾಟರಿ ಸ್ಟಾರ್ Vs ರಿಯಲ್ ಸ್ಟಾರ್

ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾ 'ಬಾಹುಬಲಿ' ಬಾಕ್ಸಾಫೀಸ್‌ನಲ್ಲಿ ಬರೆದ ದಾಖಲೆಯನ್ನು ಉಡೀಸ್ ಮಾಡುವುದು ಸದ್ಯಕ್ಕೆ ಅಸಾಧ್ಯ. ಬಾಕ್ಸಾಫೀಸ್‌ ಗಳಿಕೆಯಲ್ಲಿ ಹಾಲಿವುಡ್ ಸಿನಿಮಾಗಳಿಗೇ ಪೈಪೋಟಿ ಕೊಟ್ಟಿತ್ತು. ಈ ಸಿನಿಮಾದಿಂದ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇದನ್ನೇ ಇಟ್ಟುಕೊಂಡು ಅಲ್ಲು ಅರ್ಜುನ್ ಫ್ಯಾನ್ಸ್ ಪ್ರಭಾಸ್‌ಗೆ ಲಾಟರಿ ಸ್ಟಾರ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಕರೆದಿದ್ದಾರೆ. ರಾಜಮೌಳಿಯಿಂದಲೇ ಪ್ರಭಾಸ್‌ಗೆ ಸ್ಟಾರ್‌ಡಮ್ ಸಿಕ್ಕಿದ್ದು ಅಂತ ಹೇಳುತ್ತಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳ ನಿದ್ದೆ ಕೆಡುವಂತೆ ಮಾಡಿದೆ.

ಅಲ್ಲು ಅರ್ಜುನ್ ಅಭಿಮಾನಿಗಳ ವಾದವೇನು?

ಬಾಹುಬಲಿ ಬಿಡುಗಡೆಗೂ ಮುನ್ನ ಉತ್ತರ ಭಾರತದಲ್ಲಿ ಪ್ರಭಾಸ್ ಯಾರು ಅಂತಾನೇ ಗೊತ್ತಿರಲಿಲ್ಲ. ಆದರೆ ಅಲ್ಲು ಅರ್ಜುನ್ 'ಪುಷ್ಪ'ಗಿಂತಲೂ ಮುನ್ನವೇ ಉತ್ತರ ಭಾರತದ ಜನರಿಗೆ ಪರಿಚಯವಿತ್ತು. ಪ್ರಭಾಸ್‌ಗಿಂತ ಅಲ್ಲು ಅರ್ಜುನ್ ಉತ್ತಮ ಡ್ಯಾನ್ಸರ್, ಉತ್ತಮ ನಟ. ಅಲ್ಲು ಅರ್ಜುನ್ ಕಂಪ್ಲೀಟ್ ಆಲ್‌ರೌಂಡರ್. ಅಲ್ಲು ಅರ್ಜುನ್ ರಿಯಲ್ ಸ್ಟಾರ್ ಅಂತ ವಾದ ಮಂಡಿಸುತ್ತಿದ್ದಾರೆ. ಇಲ್ಲಿಂದ ಶುರುವಾದ ಅಭಿಮಾನಿಗಳ ವಾದ-ವಿವಾದ ಈಗ ತಾಕಕ್ಕೇರುತ್ತಿದೆ. ಪ್ರಭಾಸ್ ಅನ್ನು ಲಕ್ಕಿ ಎನ್ನುತ್ತಿದ್ದೀರಿ? ಏನಿದು ನಾವು ನಿಮಗೆ ಗೌರವ ಕೊಟ್ಟಿದ್ದೇವೆ. ನೀವು ಗೌರವ ನೀಡಿ ಎಂದು ಕಿಡಿ ಕಾರುತ್ತಿದ್ದಾರೆ.

 ಅಲ್ಲು ಅರ್ಜುನ್ ಸಿನಿಮಾ ನೋಡಲ್ಲ

ಅಲ್ಲು ಅರ್ಜುನ್ ಸಿನಿಮಾ ನೋಡಲ್ಲ

ಕೆಲ ಪ್ರಭಾಸ್ ಅಭಿಮಾನಿಗಳು ನೇರವಾಗಿ ಅಲ್ಲು ಅರ್ಜುನ್ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. " ಪ್ರಭಾಸ್‌ ಟಾರ್ಗೆಟ್ ಮಾಡುವುದರಿಂದ ನಿಮಗೆ ಏನು ಸಿಗುತ್ತೆ? ನೀವು ಬೇರೆ ಎಲ್ಲಾ ಸ್ಟಾರ್‌ಗಳಿಗಿಂತ ಕುತಂತ್ರಿ ಎಂದು ಅನಿಸುತ್ತಿದೆ. ನಿಮ್ಮ ಪಿಆರ್ ತಂಡ ಹಾಗೂ ಪೇಯ್ಡ್ ಅಭಿಮಾನಿಗಳನ್ನು ಕಂಟ್ರೋಲ್ ಮಾಡಿ. ಪ್ರಭಾಸ್ ಅಭಿಮಾನಿಗಳಾದ ನಾವು ನಿಮ್ಮ ಮುಂದಿನ ಸಿನಿಮಾಗಳಿಗೆ ಬೆಂಬಲ ನೀಡುವುದಿಲ್ಲ. ಕ್ಯಾರೆಕ್ಟರ್ ಮುಖ್ಯ, ಆದರೆ, ಅದು ಇಲ್ಲ ಎನ್ನುವುದನ್ನು ನೀವು ಸಾಬೀತು ಮಾಡುತ್ತಿದ್ದೀರಿ." ಎಂದು ಪ್ರಭಾಸ್ ಅಭಿಮಾನಿಯೊಬ್ಬ ಕಿಡಿಕಾರಿದ್ದಾನೆ.

 'ಸಾಹೋ' Vs 'ಪುಷ್ಪ'

'ಸಾಹೋ' Vs 'ಪುಷ್ಪ'

ಪ್ರಭಾಸ್ ಅಭಿಮಾನಿಗಳು ಬಾಹುಬಲಿ ಬಳಿಕ ತೆರೆಕಂಡ 'ಸಾಹೋ' ಕಲೆಕ್ಷನ್‌ಗೂ ಅಲ್ಲು ಅರ್ಜುನ್ 'ಪುಷ್ಪ'ಗೂ ಹೋಲಿಕೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ, ಅಲ್ಲು ಅರ್ಜುನ್ ಅಭಿಮಾನಿಗಳು ಅಮೆಜಾನ್ ಪ್ರೈನ್‌ನಲ್ಲಿ ಎರಡೂ ಸಿನಿಮಾಗಳಿಗೂ ಸಿಕ್ಕಿರುವ ರೇಟಿಂಗ್ ಅನ್ನು ಹೋಲಿಕೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅಲ್ಲು ಅರ್ಜುನ್ ಹಾಗೂ ಪ್ರಭಾಸ್ ಅಭಿಮಾನಿಗಳ ಕಾದಾಟ ಜೋರಾಗಿ ನಡೆಯುತ್ತಲೇ ಇದೆ.

More from Filmibeat

English summary
Icon star fans calling Prabhas is lottery star Allu Arjun is real star. After Pusha emerged as blockbuster in bollywood, Allu Arjun fans started calling Prabhs as lottery star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X