2022ರಲ್ಲಿ ಪೂಜಾ ಹೆಗ್ಡೆ ನಟನೆಯ 5 ಸಿನಿಮಾಗಳು ರಿಲೀಸ್: ಬುಟ್ಟಮೊಮ್ಮ ಫುಲ್ ಬ್ಯುಸಿ
ದಕ್ಷಿಣ ಭಾರತದಲ್ಲಿ ಪೂಜಾ ಹೆಗ್ಡೆ ಬ್ಯುಸಿ ಇರುವ ನಟಿ. ದಕ್ಷಿಣ ಭಾರತದ ಪ್ರಮುಖ ಸೂಪರ್‌ಸ್ಟಾರ್‌ಗಳಿಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸಿದ್ದಾರೆ. 2021ರಲ್ಲಿ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದರೂ ನಟಿಸಿದ ಸಿನಿಮಾಗಳೆಲ್ಲಾ 2022ರಲ್ಲಿ ಬಿಡುಗಡೆಗೆ ಸಜ್ಜಾಗುತ್ತಿವೆ. ಈ ವರ್ಷ ಒಂದಲ್ಲ ಎರಡಲ್ಲ ಬರೋಬ್ಬರಿ 5 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿವೆ.
ಕರ್ನಾಟಕದ ಕರಾವಳಿ ಸುಂದರಿ ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರೂ, ಸಿನಿಮಾದಲ್ಲಿ ನೆಲೆ ಕಂಡುಕೊಂಡಿರುವುದು ದಕ್ಷಿಣ ಭಾರತದಲ್ಲಿ. ಕನ್ನಡದ ಒಂದೇ ಒಂದು ಸಿನಿಮಾದಲ್ಲಿ ನಟಿಸದೇ ಹೋದರೂ, ತೆಲುಗು ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪೂಜಾ ಹೆಗ್ಡೆ ನಟಿಸಿದ 5 ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿದ್ದು, 2022 ಪೂಜಾ ಹೆಗ್ಡೆ ವರ್ಷ ಎಂದು ಸೌತ್ ಇಂಡಿಯಾ ಮಾತಾಡಿಕೊಳ್ಳುತ್ತಿದೆ. ಆ ಸಿನಿಮಾಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

ವಿಜಯ್ ಜೊತೆ ಪೂಜಾ ಹೆಗ್ಡೆ ನಟನೆ
ತಮಿಳಿನ ಬಹು ನಿರೀಕ್ಷಿತ ಸಿನಿಮಾ 'ಬೀಸ್ಟ್'. ದಳಪತಿ ವಿಜಯ್ ನಟನೆಯ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆ ಸಜ್ಜಾಗಿದೆ. ವಿಜಯ್ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷವೇ ಸೆಟ್ಟೇರಿದ್ದ ಸಿನಿಮಾ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸಿನಿಮಾ ಕೆಜಿಎಫ್‌ಗೆ ಟಕ್ಕರ್ ಕೊಡಲು ಸಜ್ಜಾಗಿದೆ. ಹೀಗಾಗಿ 2022ರಲ್ಲಿ ಬಿಡುಗಡೆಯಾಗುವ ಪೂಜಾ ಹೆಗ್ಡೆಯ ಮೊದಲ ಸಿನಿಮಾ 'ಬೀಸ್ಟ್' ಆಗುವ ಸಾಧ್ಯತೆಯಿದೆ.

ಪ್ಯಾನ್ ಇಂಡಿಯಾ ರಾಧೆ ಶ್ಯಾಮ್‌ಗೆ ನಾಯಕಿ
2022ರಲ್ಲಿ ಪೂಜಾ ಹೆಗ್ಡೆ ನಟಿಸಿದ ಮೊದಲ ಸಿನಿಮಾವಾಗಿ 'ರಾಧೆ ಶ್ಯಾಮ್' ರಿಲೀಸ್ ಆಗಬೇಕಿತ್ತು. ಜನವರಿ 14 ರಂದು ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಪ್ರಭಾಸ್ ನಟನೆಯ ಈ ಪ್ಯಾನ್ ಇಂಡಿಯಾ ಸಿನಿಮಾ ಪೋಸ್ಟ್ ಪೋನ್ ಆಗಿದೆ. ಲವ್ ಕಮ್ ಸೆಂಟಿಮೆಂಟ್ ಸಿನಿಮಾದ ಬಗ್ಗೆ ಪೂಜಾ ಹೆಗ್ಡೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಮೆಗಾಸ್ಟಾರ್ ಸಿನಿಮಾದಲ್ಲಿ ಪೂಜಾ
ಪೂಜಾ ಹೆಗ್ಡೆಯ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ ಆಚಾರ್ಯ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಚಿರಂಜೀವಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿದೆ ಚಿರಂಜೀವಿಪುತ್ರ ರಾಮ್ ಚರಣ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಜೋಡಿಯ ಕೆಮಿಸ್ಟ್ರಿಯನ್ನು ತೆರೆಮೇಲೆ ನೋಡಲು ಟಾಲಿವುಡ್ ಕಾದು ಕೂತಿದೆ.

ರಣ್‌ವೀರ್ ಜೊತೆ ಪೂಜಾ ಹೆಗ್ಡೆ ಸರ್ಕಸ್
ಪೂಜಾ ಹೆಗ್ಡೆ ಮತ್ತೆ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿದ್ದು, ಬಾಲಿವುಡ್ ಸ್ಟೈಲ್ ಐಕಾನ್ ರಣ್‌ವೀರ್ ಸಿಂಗ್ ಜೊತೆ ಪೂಜಾ ಹೆಗ್ಡೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಸಿನಿಮಾ 2022ರಲ್ಲಿ ಬಿಡುಗಡೆಯಾಗಲಿದೆ. ಜುಲೈ 15ರಂದು ರಿಲೀಸ್ ಡೇಟ್ ಲಾಕ್ ಮಾಡಿದ್ದು, ಕೊರೊನಾ ಮೂರನೇ ಅಲೆ ಮುಗಿದ ಬಳಿಕ ಸಿನಿಮಾ ಕೆಲಸಗಳು ಮತ್ತೆ ಆರಂಭ ಆಗಲಿವೆ. ಇನ್ನೊಂದು ಕಡೆ ಸಲ್ಮಾನ್ ಖಾನ್ ಜೊತೆ ಪೂಜಾ ಹೆಗ್ಡೆ ನಟಿಸಬೇಕಿತ್ತು. 'ಕಭೀ ಈದ್ ಕಭೀ ದಿವಾಲಿ' ಸಿನಿಮಾ ಕೈ ಬಿಡಲಾಗಿದೆ ಎಂಬ ಮಾತು ಕೇಳಿಬಂದಿದ್ದರೂ, ಸಿನಿಮಾ ಶುರುವಾಗುವ ಸಾಧ್ಯತೆಯಿದೆ ಎನ್ನು ಸುದ್ದಿ ಕೂಡ ಹರಿದಾಡಿತ್ತು. ಒಂದು ವೇಳೆ ಈ ಸಿನಿಮಾ ಆರಂಭ ಆದರೆ, ಈ ವರ್ಷದ ಅಂತ್ಯದಲ್ಲಿ 5ನೇ ಸಿನಿಮಾ ಬಿಡುಗಡೆಯಾಗಬಹುದು.


Click it and Unblock the Notifications











