Ram charan Vs Jr.Ntr: ರಾಮ್‌ ಚರಣ್ ಜೂ.ಎನ್‌ಟಿಆರ್‌ ಫ್ಯಾನ್ಸ್ ನಡುವೆ ಕಿತ್ತಾಟ? 'ಗ್ಲೋಬಲ್‌ಸ್ಟಾರ್‌' ಯಾರು?

ಫ್ಯಾನ್ಸ್ ವಾರ್ ಅನ್ನೋದು ಕೇವಲ ಕನ್ನಡ ಚಿತ್ರರಂಗದಲ್ಲಷ್ಟೇ ಇಲ್ಲ. ನಮ್ಮ ಪಕ್ಕದಲ್ಲೇ ಇರೋ ಟಾಲಿವುಡ್‌ನಲ್ಲೂ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಏನಾದರೂ ಒಂದು ವಿಷಯಕ್ಕೆ ಕಿತ್ತಾಡುತ್ತಲೇ ಇರುತ್ತಾರೆ. ಹೀರೊಗಳಲ್ಲಿ ಈ ಮನೋಭಾವ ಇರುತ್ತೋ ಇಲ್ವೋ ಆದರೆ, ಅಭಿಮಾನಿಗಳಂತೂ ತಮ್ಮ ತಮ್ಮ ನಟನಿಗಾಗಿ ಕಿತ್ತಾಡುತ್ತಲೇ ಇರುತ್ತಾರೆ. ಈಗ ಟಾಲಿವುಡ್‌ನಲ್ಲೂ ಇಬ್ಬರು ಸೂಪರ್‌ಸ್ಟಾರ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧ ನಡೆಯುತ್ತಲೇ ಇದೆ. ಸದ್ಯ ರಾಮ್‌ ಚರಣ್ ಹಾಗೂ ಜೂ.ಎನ್‌ಟಿಆರ್ ಫ್ಯಾನ್ಸ್ ಮಧ್ಯೆ ಸೋಶಿಯಲ್‌ ಮೀಡಿಯಾದಲ್ಲಿ ವಾರ್ ಶುರುವಾಗಿದೆ.

ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ಅಲ್ಲಿಂದ ರಾಮ್‌ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳ ಮಧ್ಯೆ ಕಿತ್ತಾಟ ಆಗುತ್ತಲೇ ಇದೆ. ಮೊದಲು ಜೂ.ಎನ್‌ಟಿಆರ್ ಪಾತ್ರವನ್ನು ಡಮ್ಮಿ ಮಾಡಲಾಗಿದೆ ಅಂತ ಫ್ಯಾನ್ಸ್ ಕಿಡಿಕಾರಿದ್ದರು. ಇತ್ತ ರಾಮ್‌ ಚರಣ್ ಅಭಿಮಾನಿಗಳು ಸಿನಿಮಾವನ್ನು ಎಂಜಾಯ್ ಮಾಡಿದ್ದರು. ಅಲ್ಲಿಂದ ಶುರುವಾಗಿದ್ದು, ಇಂದಿಗೂ ನಡೆಯುತ್ತಲೇ ಇದೆ. ಈಗ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ನಡುವೆ 'ಗ್ಲೋಬಲ್‌ಸ್ಟಾರ್' ಟೈಟಲ್‌ಗಾಗಿ ಸಮರ ನಡೆಯುತ್ತಲೇ ಇದೆ.

In Tollywood Ram Charan And Jr.NTR Fans Fighting In Social Media For Global Star

'RRR' ಸಿನಿಮಾ ರಿಲೀಸ್ ಆದಲ್ಲಿಂದ ರಾಮ್ ಚರಣ್ ಹಾಗೂ ಜೂ.ಎನ್‌ಟಿಆರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಮರ ಸಾರುತ್ತಲೇ ಇದ್ದಾರೆ. ಅದು ಫಸ್ಟ್ ಲುಕ್ ರಿಲೀಸ್ ಆದಾಗ ಇರಬಹುದು. ಟ್ರೈಲರ್ ಸಮಯದಲ್ಲಿ ಇರಬಹುದು. ಇಬ್ಬರ ನಟರ ಅಭಿಮಾನಿಗಳು ಒಬ್ಬರಿಗಿಂತ ಒಬ್ಬರು ಮೇಲು ಎನ್ನುವಂತೆ ಕಿತ್ತಾಡುತ್ತಲೇ ಇದ್ದರು. ಇದು ಪ್ರಶಸ್ತಿ ಸಮಾರಂಭದ ಸಮಯದಲ್ಲಂತೂ ತಾರಕ್ಕೇರಿತ್ತು. ಇಬ್ಬರೂ ನಟರೂ ಅಭಿಮಾನಿಗಳು ನಾನಾ ನೀನಾ ಅನ್ನೋ ಮಟ್ಟಿಗೆ ಫೈಟ್ ಮಾಡಲು ಆರಂಭಿಸಿದ್ದರು.

ಇತ್ತೀಚೆಗೆ RRR ಸಿನಿಮಾ ಹಾಲಿವುಡ್‌ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿವೆ. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರ್ದೇಶಕ ರಾಜಮೌಳಿ ಜೊತೆ ರಾಮ್ ಚರಣ್ ಕೂಡ ಹೋಗಿದ್ದರು. ಇವರಿಗೆ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಗೂ ಛಾಯಾಗ್ರಾಹಕ ಸೇಂಥಿಲ್ ಕುಮಾರ್ ಸಾಥ್ ಕೊಟ್ಟಿದ್ದರು. ಆದರೆ, ತಾರಕ ರತ್ನ ನಿಧನದ ಹಿನ್ನೆಲೆಯಲ್ಲಿ ಜೂ.ಎನ್‌ಟಿಆರ್ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

In Tollywood Ram Charan And Jr.NTR Fans Fighting In Social Media For Global Star

ಹಾಲಿವುಡ್‌ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಭಾಗವಹಿಸಿದ್ದ RRR ತಂಡದ ಎಲ್ಲಾ ಸದಸ್ಯರಿಗೂ ಪ್ರಶಸ್ತಿಯನ್ನು ನೀಡಲಾಗಿದೆ. ಅಲ್ಲಿ ಜೂ.ಎನ್‌ಟಿಆರ್ ಇದ್ದಿದ್ದರೆ, ಅವರಿಗೂ ಪ್ರಶಸ್ತಿ ಲಭಿಸುತ್ತಿತ್ತು. ಈ ವೇಳೆ ರಾಮ್‌ ಚರಣ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪ್ರಶಸ್ತಿ ಗೆದ್ದಿದ್ದನ್ನು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದರು. ಹಾಗೇ ರಾಮ್‌ ಚರಣ್ ಅನ್ನು ಗ್ಲೋಬಲ್ ಸ್ಟಾರ್ ಎಂದು ಬರೆದುಕೊಂಡಿದ್ದರು.

ಇದೇ ವೇಳೆ ಮಹಿಂದ್ರಾ ಗ್ರೂಪ್‌ನ ಛೇರ್‌ಮನ್ ಆನಂದ್ ಮಹಿಂದ್ರ ಕೂಡ ರಾಮ್‌ ಚರಣ್ ಅನ್ನು ಗ್ಲೋಬಲ್ ಸ್ಟಾರ್ ಎಂದು ಕರೆದಿದ್ದರು. ಆದರೆ, ಅವರು ರಾಮ್‌ ಚರಣ್ ಮೇಲಿನ ಸ್ನೇಹಕ್ಕೆ ಗ್ಲೋಬಲ್ ಸ್ಟಾರ್ ಕರೆದಿದ್ದಿರಬಹುದು. ಆದರೆ, ಜೂ.ಎನ್‌ಟಿಆರ್ ಮೇಲೆ ಯಾವುದೇ ದ್ವೇಷವಿಲ್ಲ ಅನ್ನೋದು ಸತ್ಯ. ಹೀಗಿರುವಾಗಲೇ ರಾಮ್ ಚರಣ್ ಅಭಿಮಾನಿಗಳು ಆನಂದ್ ಮಹಿಂದ್ರ ಟ್ವೀಟ್ ಅನ್ನು ಬಳಸಿಕೊಂಡು ಪ್ರಮೋಟ್ ಮಾಡಲು ಶುರು ಮಾಡಿದ್ದರು.

ರಾಮ್‌ ಚರಣ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡುತ್ತಿರುವುದನ್ನು ನೋಡಿದ ಜೂ.ಎನ್‌ಟಿಆರ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಒಬ್ಬರಿಗೊಬ್ಬರು ಟಾಂಗ್ ಕೊಡುವುದರಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜೂ.ಎನ್‌ಟಿಆರ್ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕಾಗಿ ಅಮೆರಿಕಗೆ ತೆರಳಲಿದ್ದಾರೆ. ಒಮ್ಮ ಅಲ್ಲಿಗೆ ಹೋದ ಮೇಲೆ ಈ ಫೈಟ್ ಹೇಗಿರುತ್ತೆ? ಅನ್ನೋದನ್ನು ನೋಡಬೇಕಿದೆ.

More from Filmibeat

English summary
In Tollywood Ram Charan And NTR Fans Fighting In Social Media For Global Star, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X