Don't Miss!
- Sports
IND vs NZ 2nd T20: ಭಾರತ vs ನ್ಯೂಜಿಲೆಂಡ್ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Aana Vs Indrani: ಭಾರತದ ಮೊದಲ ಸೂಪರ್ ವುಮನ್ ಸಿನಿಮಾ 'ಇಂದ್ರಾಣಿ': ಕನ್ನಡದ 'ಆನ' ಕಥೆಯೇನು?
ಭಾರತದಲ್ಲಿ ಸೂಪರ್ ಹೀರೋ ಸಿನಿಮಾಗಳು ಒಂದರ ಹಿಂದೊಂದು ಸೆಟ್ಟೇರುತ್ತಿದೆ. ಇತ್ತೀಚೆಗೆ ಭಾರತದ ಸೂಪರ್ ಹೀರೊ 'ಶಕ್ತಿಮಾನ್' ಅನ್ನು ಮತ್ತೆ ತೆರೆಮೇಲೆ ತರಲು ಮುಂದಾಗಿದ್ದಾರೆ. ಈ ಮಧ್ಯೆ ಸೂಪರ್ ವುಮನ್ ಸಿನಿಮಾಗಳೂ ಕೂಡ ನಿರ್ಮಾಣ ಆಗುತ್ತಿದೆ. ಇತ್ತೀಚೆಗೆ ಟಾಲಿವುಡ್‌ನಲ್ಲಿ ಹೊಚ್ಚ ಹೊಸ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದು ಸೂಪರ್ ವುಮನ್ ಸಿನಿಮಾ ಅಂತೆ.
ಟ್ವಿಸ್ಟ್ ಏನಪ್ಪಾ ಅಂದರೆ, ಭಾರತದ ಮೊದಲ ಸೂಪರ್ ವುಮನ್ ಸಿನಿಮಾ ಇಂದ್ರಾಣಿ ಎಂದು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಕನ್ನಡದಲ್ಲಿ 'ಆನ' ಸೂಪರ್ ವುಮನ್ ಎಂಟ್ರಿ ಕೊಟ್ಟಾಗಿದೆ. ಅಂದ್ಮೇಲೆ ಭಾರತದ ಮೊದಲ ಸೂಪರ್‌ವುಮನ್ ಸಿನಿಮಾ ಯಾವುದು ಅನ್ನೋ ಗೊಂದಲ ಶುರುವಾಗಿದೆ.
Pawan
Kalyan:
ಕರ್ನಾಟಕದ
ದೇವಾಲಯ
ಸ್ವಚ್ಛತೆಗೆ
ಕೈ
ಜೋಡಲಿದ್ದಾರೆ
ಪವನ್
ಕಲ್ಯಾಣ್
ಹಾಲಿವುಡ್ ಸ್ಟೈಲ್‌ನಲ್ಲಿ 'ಇಂದ್ರಾಣಿ'ಯನ್ನು ಸೂಪರ್‌ವುಮನ್ ಅಂತ ಪರಿಚಯ ಮಾಡಲಾಗುತ್ತಿದೆ. ಟಾಲಿವುಡ್‌ವುನಲ್ಲಿ ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದ್ದು, ಮೊದಲ ಸೂಪರ್‌ವುಮನ್ ಸಿನಿಮಾ ಯಾವುದು ಅನ್ನೋದು ಸದ್ಯ ಕುತೂಹಲ ಕೆರಳಿಸಿದೆ.

ಸೂಪರ್‌ವುಮನ್ 'ಇಂದ್ರಾಣಿ' ಯಾರು?
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಟಾಲಿವುಡ್ ಸಿನಿಮಾ 'ಇಂದ್ರಾಣಿ' ಸೆಟ್ಟೇರಿದೆ. ಇದು ಭಾರತದ ಮೊದಲ ಸೂಪರ್ ವುಮನ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಈ ಸಿನಿಮಾದ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾ ಮೋಷನ್ ಪೋಸ್ಟರ್ ವೈರಲ್ ಆಗುತ್ತಿದೆ. 'ಇಂದ್ರಾಣಿ'ಗೆ ಸೂಪರ್‌ವುಮನ್ ಲುಕ್ ಕೊಟ್ಟಿದ್ದೇನೋ ಚೆನ್ನಾಗಿದೆ. ಆದರೆ, ಇದು ಭಾರತದ ಮೊದಲ ಸೂಪರ್‌ವುಮನ್ ಸಿನಿಮಾನಾ? ಅನ್ನುವ ಅನುಮಾನ ಕಾಣುತ್ತಿದೆ.
Jr
NTR
Letter
to
RRR
Cast
and
Crew
:
ಯಶಸ್ಸು:
ಜೂ
ಎನ್‌ಟಿಆರ್
ಬರೆದರು
ಬಹಿರಂಗ
ಪತ್ರ

'ಆನ' ಭಾರತದ ಸೂಪರ್‌ವುಮನ್ ಅಲ್ವಾ?
ಕನ್ನಡದಲ್ಲಿ ಕೆಲವೇ ದಿನಗಳ ಹಿಂದೆ 'ಆನ' ಎನ್ನುವ ಸಿನಿಮಾ ಬಂದಿದೆ. ಈ ಸಿನಿಮಾ ಅದಿತಿ ಪ್ರಭುದೇವ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುವಾಗಲೇ ಇದು ಭಾರತದ ಮೊದಲ ಸೂಪರ್ ವುಮನ್ ಸಿನಿಮಾ ಎಂದು ಹೇಳಲಾಗಿತ್ತು. ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಸೂಪರ್ ವುಮನ್ ಆಗಿ ಕಾಣಿಸಿಕೊಂಡಿದ್ದರು. ಈಗ ಟಾಲಿವುಡ್‌ನ 'ಇಂದ್ರಾಣಿ' ಚಿತ್ರತಂಡ ಕೂಡ ಇದು ಭಾರತದ ಮೊದಲ ಸೂಪರ್ ವುಮನ್ ಸಿನಿಮಾ ಎನ್ನುತ್ತಿದ್ದರೆ.

'ಇಂದ್ರಾಣಿ' ಟಾಲಿವುಡ್‌ನ VFX ಸಿನಿಮಾ
ಸೂಪರ್ ವುಮನ್ 'ಇಂದ್ರಾಣಿ' ಪಾತ್ರದಲ್ಲಿ ಯಾನಿಯಾ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಎರಡೂವರೆ ವರ್ಷ ಈ ಸಿನಿಮಾಗಾಗಿ ರಿಹರ್ಸಲ್ ಮಾಡಲಾಗಿದೆ. ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೇ ಎರಡನ್ನೂ ಪ್ಲ್ಯಾನ್ ಮಾಡಿ ಮಾಡುತ್ತಿದ್ದಾರೆ. ಸಿನಿಮಾ ಪ್ರತಿಯೊಂದು ಸೀನ್‌ನಲ್ಲೂ VFX ವರ್ಕ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ಅಭ್ಯಾಸ ಮಾಡಲಾಗಿದೆ. ಈ ಕಾರಣಕ್ಕೆ 'ಇಂದ್ರಾಣಿ' ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ನಿನ್ನೆ (ಮಾರ್ಚ್ 28) ಸೆಟ್ಟೇರಿದೆ.
RRR
Day
3
Box
Office
Collection:
ಮೂರೇ
ದಿನದಲ್ಲಿ
500
ಕೋಟಿ
ಲೂಟಿ
ಮಾಡಿದ್ದೇಗೆ
RRR?

ಎಲ್ಲಾ ಭಾಷೆಯಲ್ಲೂ 'ಇಂದ್ರಾಣಿ' ಸಿನಿಮಾ
ಸೂಪರ್‌ವುಮನ್ ಸಿನಿಮಾ 'ಇಂದ್ರಾಣಿ' ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಇದೊಂದು 'ವರ್ಚುವಲ್ ವಂಡರ್' ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ, ಗೊಂದಲ ಏನಪ್ಪಾ ಅಂದರೆ, ಇಂದ್ರಾಣಿ ಸಿನಿಮಾ ಭಾರತದ ಮೊಟ್ಟ ಮೊದಲ ಸೂಪರ್‌ವುಮನ್ ಸಿನಿಮಾ ಹೇಗಾಗುತ್ತೆ? ಕನ್ನಡದ 'ಆನ' ಸಿನಿಮಾದ ಕತೆಯೇನು? ಈ ಸಿನಿಮಾಗೆ 'ಆನ' ತಂಡ ಏನು ಹೇಳುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.