Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಂಗ್ ಟೈಗರ್ ಜೂ.ಎನ್‌ಟಿಆರ್ ಭೇಟಿ ಮಾಡಿದ ಟೀಂ ಇಂಡಿಯಾ ಆಟಗಾರರು: ಹಿನ್ನೆಲೆ ಏನು?
RRR ಸಿನಿಮಾದ "ನಾಟು.. ನಾಟು.." ಹಾಡು ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗೆದ್ದು ಬಂದಿದೆ. ಜೂ. ಎನ್‌ಟಿಆರ್ ಹಾಗೂ ರಾಮ್ ಚರಣ್ ಹೆಜ್ಜೆ ಹಾಕಿದ್ದ ಈ ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದು ಬಂದಿದೆ. ಎಲ್ಲಾ ಕಡೆನೂ ಈ ಬಗ್ಗೆನೇ ಸುದ್ದಿ.
ಈ ಕಾರ್ಯಕ್ರಮಕ್ಕಾಗಿ ರಾಜಮೌಳಿ, ಸಂಗೀತ ನಿರ್ದೇಶಕ ಕೀರವಾಣಿ ಸೇರಿದಂತೆ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ದಂಪತಿಗಳು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಒಂದಿಷ್ಟು ದಿನಗಳ ಕಾಲ ಸಿನಿಮಾ ಬಗ್ಗೆ ಪ್ರಚಾರವನ್ನೂ ಮಾಡಿದ್ದರು.
ಬಾಲಯ್ಯಗೂ
ಮುನ್ನ
Jr.
Ntr
ಜೊತೆ
ನಟಿಸ್ಬೇಕಿತ್ತು:
ಇಷ್ಟು
ದೊಡ್ಡ
ಆಫರ್
ಬಿಟ್ಟಿದ್ದೇಕೆ
ದುನಿಯಾ
ವಿಜಯ್?
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ RRR ತಂಡ ಹಿಂತಿರುಗಿ ಬಂದಿದೆ. ಇದೇ ವೇಳೆ ಟೀಂ ಇಂಡಿಯಾದ ಆಟಗಾರರು ಯಂಗ್ ಟೈಗರ್ ಅವರನ್ನು ಹೈದರಾಬಾದ್‌ನಲ್ಲಿ ಭೇಟಿ ಮಾಡಿದ್ದಾರೆ.

ಜೂ.ಎನ್‌ಟಿಆರ್ ಭೇಟಿಯಾದ ಟೀಂ ಇಂಡಿಯಾ ಕ್ರಿಕೆಟಿಗರು
ಟೀಂ ಇಂಡಿಯಾ ಆಟಗಾರರು ಟಾಲಿವುಡ್‌ನ ಫ್ಯಾನ್ ಇಂಡಿಯಾ ಸ್ಟಾರ್ ಜೂ.ಎನ್‌ಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಇರುವಾಗಲೇ ಯಂಗ್ ಟೈಗರ್ ಅನ್ನು ಭೇಟಿ ಮಾಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಟೀಂ ಇಂಡಿಯಾದ ಪ್ರಮುಖ ಆಟಗಾರರು ಜೂ.ಎನ್‌ಟಿಆರ್ ಜೊತೆ ಕ್ಯಾಮರಾಗೆ ಫೋಸ್ ಕೊಟ್ಟಿರೋದು ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.

ಜೂಎನ್‌ಟಿಆರ್ ಭೇಟಿಯಾಗಿದ್ಯಾರು?
ಜೂ.ಎನ್‌ಟಿಆರ್ ಜೊತೆ ಕಾಣಿಸಿಕೊಂಡ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರರ ಪಟ್ಟಿ ದೊಡ್ಡದಿದೆ. ಯಜ್ವೆಂದ್ರ ಚಹಲ್, ಶುಭ್ಮನ್ ಗಿಲ್,ಸುಕುಮಾರ್ ಯಾದವ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್ ಸೇರಿದಂತೆ ಒಟ್ಟು 5 ಮಂದಿ ಕ್ರಿಕೆಟಿಗರು ಟಾಲಿವುಡ್ ಯಂಗ್ ಟೈಗರ್ ಅನ್ನು ಭೇಟಿ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ಜೊತೆಗಿನ ಮೊದಲ ಏಕದಿನ ಪಂದ್ಯಕ್ಕೆ ಇನ್ನೂ ಎರಡು ದಿನ (ಜನವರಿ 16) ಇರುವಾಗಲೇ RRR ನಟನನ್ನು ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಭೇಟಿ
ಸೋಶಿಯಲ್ ಮೀಡಿಯಾಗಳಲ್ಲಿಈ ಫೋಟೊಗಳು ವೈರಲ್ ಆಗುತ್ತಿದೆ. ಹೈದರಾಬಾದ್‌ನಲ್ಲಿ ಭೇಟಿಯಾಗಿದ್ದರೂ, ಎಲ್ಲಿ? ಯಾವಾಗ ಅನ್ನೋ ಸುಳಿವು ಇಲ್ಲ. ಕೇವಲ ಫೋಟೊಗಷ್ಟೇ ವೈರಲ್ ಆಗುತ್ತಿವೆ. ಜೂ.ಎನ್‌ಟಿಆರ್ ಸಿನಿಮಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ವಿಶ್ವ ಮಟ್ಟದಲ್ಲಿ ಪರಿಚಿತರಾಗಿದ್ದಾರೆ. ಹೈದರಾಬಾದ್‌ನಲ್ಲಿಯೇ ಮ್ಯಾಚ್ ನಡೆಯುತ್ತಿರುವ ಬಿಡುವಿನ ವೇಳೆಯಲ್ಲಿ ಯಂಗ್ ಟೈಗರ್ ಅನ್ನು ಭೇಟಿ ಮಾಡಿದ್ದಾರೆ.

NTR 30 ಯಾವಾಗ?
RRR ಸಿನಿಮಾ ಯಶಸ್ಸಿನ ಬಳಿಕ ಜೂ.ಎನ್‌ಟಿಆರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಇನ್ನೂ ಈ ಸಿನಿಮಾ ಪ್ರಿ ಪ್ರೊಡಕ್ಷನ್ ಹಂತದಲ್ಲೇ ಇದೆ. ಆದರೆ, ಯಾವಾಗ ಶುರುವಾಗುತ್ತೆ? ಸಿನಿಮಾ ಕತೆಯೇನು ಅನ್ನೋದು ಮಾತ್ರ ಇನ್ನೂ ಸುಳಿವು ಸಿಕ್ಕಿಲ್ಲ. ಸಿನಿಮಾ ಯಾವಾಗ ಶುರುವಾಗುತ್ತೆ ಅನ್ನೋದು ಕೂಡ ಗೊತ್ತಿಲ್ಲ. ಹೀಗಾಗಿ ಜೂ.ಎನ್‌ಟಿಆರ್ ಫ್ಯಾನ್ಸ್ ಹೊಸ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ