ರೈಲು ತಡೆದು ನಿಲ್ಲಿಸಿದ್ದ.. ಎದೆ ಮೇಲೆ ಆನೆ ಭಾರ.. 'ಪೆದ್ದಿ'ಯಲ್ಲಿ ಹೇಳಿದ ಶಿವಣ್ಣನ ಗುರು ಯಾರು?
ಟಾಲಿವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ' ಜೂನ್ 4 ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾ ರಾಮ್ ಚರಣ್‌ಗೆ ಅಷ್ಟೇ ಅಲ್ಲ, ಅವರ ಅಭಿಮಾನಿಗಳಿಗೂ ತುಂಬಾನೇ ಮುಖ್ಯ. RRR ಅಂತಹ ಸಿನಿಮಾ ಕೊಟ್ಟು ಗ್ಲೋಬಲ್ ಸ್ಟಾರ್ ಆಗಿದ್ದ ರಾಮ್ ಚರಣ್ 'ಗೇಮ್ ಚೇಂಜರ್' ಸಿನಿಮಾದಲ್ಲಿ ಸೋತಿದ್ದರು. ಇದು ಮೆಗಾ ಪವರ್‌ಸ್ಟಾರ್‌ಗೆ ಅಷ್ಟೇ ಅಲ್ಲ. ಅವರ ಅಭಿಮಾನಿಗಳಿಗೂ ಮುಖಭಂಗ ಆಗಿತ್ತು. ಹೀಗಾಗಿ ಈ ಬಾರಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟು ಕೂತಿದ್ದರು.
ನಿರೀಕ್ಷೆಯಂತೆಯೇ 'ಪೆದ್ದಿ' ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಸಿನಿ ಪ್ರಿಯರು ರಾಮ್ ಚರಣ್ ಕುಸ್ತಿಯ ದೃಶ್ಯಗಳು, ಭಾವನಾತ್ಮಕ ಸನ್ನಿವೇಶಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗೇ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪಾತ್ರಕ್ಕೂ ಥಿಯೇಟರ್‌ಗಳಲ್ಲಿ ಶಿಳ್ಳೆಗಳು ಬೀಳುತ್ತಿವೆ.

'ಪೆದ್ದಿ' ರಿಲೀಸ್ ಆಗಿ ಥಿಯೇಟರ್‌ನಲ್ಲಿ ಒಳ್ಳೆಯ ಕಲೆಕ್ಷನ್ ಏನೋ ಮಾಡುತ್ತಿದೆ. ಆದರೆ, ಇದರೊಂದಿಗೆ ಶಿವಣ್ಣ ಸುತ್ತ ಉಲ್ಲೇಖ ಆಗಿರುವ ಮತ್ತೊಂದು ಪಾತ್ರದ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಪಾತ್ರ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಆದರೆ, ಶಿವಣ್ಣನ ಗುರು ಎಂದು ಹಿನ್ನೆಲೆಯಲ್ಲಿ ಪರಿಚಯವಾಗುತ್ತಿದೆ. ಆ ಹೆಸರೇ ಕೋಡಿ ರಾಮಮೂರ್ತಿ ನಾಯ್ಡು. ಈ ಇವರು ಸಾಮಾನ್ಯ ವ್ಯಕ್ತಿಯೇನು ಅಲ್ಲ. ಇವರ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಹಾಗಿದ್ದರೆ, ಕೋಡಿ ರಾಮಮೂರ್ತಿ ನಾಯ್ಡು ಯಾರು? ಇವರ ಹಿನ್ನೆಲೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಶಿವಣ್ಣ ಗುರು ಯಾರು?
'ಪೆದ್ದಿ' ಸಿನಿಮಾದಲ್ಲಿ ಶಿವಣ್ಣನ ಕುಸ್ತಿಯನ್ನು ಕಲಿಸಿಕೊಡುವ ಗುರು. ಹೀಗಾಗಿ ಸಿನಿಮಾದಲ್ಲಿ ಶಿವಣ್ಣಗೆ ಗಟ್ಟಿ ಪಾತ್ರವನ್ನೇ ಕೊಟ್ಟಿದ್ದರೆ. ರಾಮ್ ಚರಣ್ ಸೇರಿದಂತೆ ಹಲವು ಮಂದಿ ಶಿಷ್ಯಂದಿರನ್ನು ಹೊಂದಿದ್ದಾರೆ. ಆದರೆ, ಇವರೇ ಗುರು ಇದ್ದನೆಂದು ಸಿನಿಮಾದಲ್ಲಿ ತೋರಿಸಲಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕೋಡಿ ರಾಮಮೂರ್ತಿ ನಾಯ್ಡು ಅವರ ಹೆಸರು ತುಂಬಾನೇ ಫೇಮಸ್.
ಕೋಡಿ ರಾಮಮೂರ್ತಿ ಪರಾಕ್ರಮ ಎಂತಹದ್ದು?
ಕೋಡಿ ರಾಮಮೂರ್ತಿ ನಾಯ್ಡು ಭಾರತದ ದೈತ್ಯ. ಅತ್ಯಂತ ಶಕ್ತಿಶಾಲಿ ಕುಸ್ತಿ ಪಟುವಾಗಿದ್ದರು. ಇವರ ಪರಾಕ್ರಮಕ್ಕೆ ಮನಸೋತು 'ಕಲಿಯುಗ ಭೀಮ', 'ಇಂಡಿಯನ್ ಹರ್ಕ್ಯುಲಸ್' ಎಂದು ಕರೆಯಲಾಗುತ್ತಿತ್ತು. ಎರಡು ಕಾರುಗಳನ್ನು ತಡೆದು ನಿಲ್ಲಿಸುವುದು, ಆನೆ ಭಾರವನ್ನು ಹೊರುವುದು, ಸರಪಳಿಗಳನ್ನು ಬಿಡಿಸುವುದು, ರೈಲ್ವೆ ಇಂಜಿನ್‌ಗಳನ್ನು ತನ್ನ ಕೈಗಳಿಂದ ತಡೆದು ನಿಲ್ಲಿಸಿದ್ದಕ್ಕೆ ಜನಪ್ರಿಯರಾಗಿದ್ದರು. ಈ ಕಾರಣಕ್ಕೆ ಅತ್ಯಂತ ಶಕ್ತಿಶಾಲಿ ಕುಸ್ತಿ ಪಟು ಎಂದು ಹೇಳಾಗಿತ್ತು. ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಇವರು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವೀರಘಟ್ಟಂನಲ್ಲಿ ಜನಿಸಿದ್ದರು.

ಸಿನಿಮಾದಲ್ಲಿ ಉಲ್ಲೇಖ ಯಾಕೆ?
'ಪೆದ್ದಿ' ಸಿನಿಮಾದಲ್ಲಿ ಶಿವಣ್ಣ ಗುರುವಾಗಿ ಕೋಡಿ ರಾಮಮೂರ್ತಿ ನಾಯ್ಡು ಅವರ ಉಲ್ಲೇಖ ಮಾಡಲಾಗಿದೆ. ಇದಕ್ಕೊಂದು ಕಾರಣವಿದೆ. ಈ ಸಿನಿಮಾದ ನಿರ್ದೇಶಕ ಬಿಚ್ಚಿ ಬಾಬು ಸನಾ ಕೂಡ ಕೋಡಿ ರಾಮಮೂರ್ತಿ ನಾಯ್ಡು ಜನಸಿದ ಶ್ರೀಕಾಕುಳಂ ಜಿಲ್ಲೆಯವರೇ.. ಹೀಗಾಗಿ ಸಿನಿಮಾದಲ್ಲಿ ಇದರ ಉಲ್ಲೇಖವನ್ನು ಮಾಡಲಾಗಿದೆ ಎಂದು ತೆಲುಗು ಮಂದಿ ಅಂದಾಜು ಮಾಡುತ್ತಿದ್ದಾರೆ.
ಪಠ್ಯ ಪುಸ್ತಕಗಳಲ್ಲೂ ರಾಮಮೂರ್ತಿ ಚರಿತ್ರೆ
ಪೈಲ್ವಾನ್ ಕೋಡಿ ರಾಮಮೂರ್ತಿ ನಾಯ್ಡು ಶಿಷ್ಯ ಗೌರ್ ನಾಯ್ಡು ಎಂದು ಶಿವಣ್ಣ ಪಾತ್ರವನ್ನು ಬಿಂಬಿಸಲಾಗಿದೆ. ಅವರ ಶಿಷ್ಯ ಅನ್ನೋದು ಕೇವಲ ಕಾಲ್ಪನಿಕ ಅಷ್ಟೇ. ಆದರೆ, ತೆಲುಗು ರಾಜ್ಯಗಳಲ್ಲಿ ಕೋಡಿ ರಾಮಮೂರ್ತಿ ನಾಯ್ಡು ಜನಪ್ರಿಯ ವ್ಯಕ್ತಿ. ಅಲ್ಲಿನ ಪಠ್ಯ ಪುಸ್ತಕಗಳಲ್ಲಿ ಇವರ ಬಗ್ಗೆ ಹೇಳಲಾಗಿತ್ತು. ಬಲಶಾಲಿ ಎನಿಸಿಕೊಂಡಿದ್ದರೂ, ರಾಮಮೂರ್ತಿ ತನ್ನ 59ನೇ ವಯಸ್ಸಿಗೆ ಅಪಘಾತದಲ್ಲಿ ಒಡಿಶಾದಲ್ಲಿ ಸಾವನ್ನಪ್ಪಿದ್ದರು.


Click it and Unblock the Notifications
