'ಕೆಜಿಎಫ್' ಆಯ್ತು.. ಈಗ ಮತ್ತೆ ಯಶ್ ಫಾಲೋ ಮಾಡ್ತಿದ್ದಾರಾ ಅಲ್ಲು ಅರ್ಜುನ್? ಟ್ರೆಂಡ್ ಆಗ್ತಿರೋದೇನು?
ಕನ್ನಡದ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆದರೆ, 'ಕೆಜಿಎಫ್'ಗೆ ಕೈ ಹಾಕಿದಾಗ ಈ ಅಭಿಪ್ರಾಯ ಇರಲಿಲ್ಲ. ಕನ್ನಡ ಚಿತ್ರರಂಗವನ್ನು ಮತ್ತೆ ನ್ಯಾಷನಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದು ಯಶ್ ನಟಿಸಿದ 'ಕೆಜಿಎಫ್' ಸಿನಿಮಾ. ಇಲ್ಲಿಂದ ಒಂದೆರಡು ವರ್ಷ ಕನ್ನಡ ಚಿತ್ರರಂಗ ಗತಿಯೇ ಬದಲಾಗಿ ಹೋಯ್ತು. ಆದರೆ, ಯಶಸ್ಸನ್ನು ಉಳಿಸಿಕೊಳ್ಳುವುದಕ್ಕೆ ಸ್ಯಾಂಡಲ್‌ವುಡ್ ಮಂದಿ ಪರದಾಡುತ್ತಿರೋದು ಮಾತ್ರ ವಿಪರ್ಯಾಸ.
'ಕೆಜಿಎಫ್' ದಕ್ಷಿಣ ಭಾರತದಲ್ಲಿ ಹೊಸ ಟ್ರೆಂಡ್ ಅನ್ನು ಸೆಟ್ ಮಾಡಿತ್ತು. ಕನ್ನಡ ಸಿನಿಮಾವೊಂದು ಫ್ಯಾನ್ ಇಂಡಿಯಾ ಮಟ್ಟಿದಲ್ಲಿ ಸದ್ದು ಮಾಡುತ್ತೆ ಅನ್ನೋದನ್ನು ಬೇರೆ ಚಿತ್ರರಂಗ ಊಹೆ ಕೂಡ ಮಾಡಿರಲಿಲ್ಲ. ಆದರೆ, ರಾಕಿ ಬಾಯ್ ಹೊಸ ಟ್ರೆಂಡ್ ಅನ್ನು ಹುಟ್ಟಾಕಿದ್ದರು. 'ಕೆಜಿಎಫ್ ಚಾಪ್ಟರ್ 1' ಹಾಗೂ 'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೇ ಬರೆದಿದ್ದು ಈಗ ಇತಿಹಾಸ. ಇದರ ಹಿಂದೆನೇ ಅಲ್ಲು ಅರ್ಜುನ್ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳ ಮುಖ ಮಾಡಿದ್ದರು.

'ಪುಷ್ಪ 2' ಬಿಡುಗಡೆ ವೇಳೆ 'ಕೆಜಿಎಫ್ 2' ಗಿಂತ ದೊಡ್ಡ ಸಿನಿಮಾ ಆಗಿತ್ತೆ ಎಂದು ಕೆಲವು ತೆಲುಗು ಮಂದಿ ಹೇಳಿಕೆ ಕೊಟ್ಟಿದ್ದರು. ಇದು ಕನ್ನಡ ಸಿನಿ ಪ್ರಿಯರ ನಿದ್ದೆಗೆಡಿಸಿತ್ತು. ಅಲ್ಲಿಂದ ಇವರು ಕೂಡ ಒಂದೊಂದೇ ಟೀಕೆಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ಪ್ಯಾನ್ ಇಂಡಿಯಾ ರೀಚ್ ಮಾಡುವುದಕ್ಕೆ ಯಶ್ ಏನೆಲ್ಲ ತಂತ್ರಗಳನ್ನು ಬಳಸಿದ್ದರೋ ಅದೇ ತಂತ್ರವನ್ನು ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಕೂಡ ಬಳಸಿದ್ದಾರೆ ಎಂದರು. ಇಂತಹದ್ದೊಂದು ಚರ್ಚೆ 'ಪುಷ್ಪ 2' ಬಿಡುಗಡೆ ಜೋರಾಗಿಯೇ ನಡೆದಿತ್ತು. ಈಗ ಮತ್ತೆ ಯಶ್ ಹಾಗೂ ಅಲ್ಲು ಅರ್ಜುನ್ ಮಧ್ಯೆ ಹೋಲಿಕೆ ಶುರುವಾಗಿದೆ.
ಮುಂದೆ ಓದಿ
ಯಶ್ ಫಾಲೋ ಮಾಡುತ್ತಿದ್ದಾರಾ ಅಲ್ಲು ಅರ್ಜುನ್
ಯಶ್‌ರಂತೆ ಮಲಯಾಳಂ ನಿರ್ದೇಶಕ ಜೊತೆ ಸಿನಿಮಾ?
ಬೇಸಿಲ್ ಜೋಸೆಫ್ ಜೊತೆ ಪುಷ್ಪರಾಜ್ ಸಿನಿಮಾ?
ಸೋಶಿಯಲ್ ಮೀಡಿಯದಲ್ಲಿ ಏನಿದು ಚರ್ಚೆ?
'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ನೀಡುತ್ತಿದ್ದಂತೆ ಯಶ್‌ಗೆ ಮುಂದೇನು ಎನ್ನುವ ಪ್ರಶ್ನೆ ಕಾಡಿತ್ತು. 'ಟಾಕ್ಸಿಕ್' ಸಿನಿಮಾ ಒಪ್ಪುಕೊಳ್ಳುವುದಕ್ಕೆ ಯಶ್ ಬರೋಬ್ಬರು ಮೂರು ವರ್ಷ ತೆಗೆದುಕೊಂಡಿದ್ದರು. ಕಥೆಗಳನ್ನು ತೂಗಿ, ಅಳೆದು ಆಯ್ಕೆ ಮಾಡಿದ್ದರು. ಯಶ್‌ಗೆ ಆಕ್ಷನ್ ಕಟ್ ಹೇಳುವುದಕ್ಕೆ ಸಾಲು ಸಾಲು ನಿರ್ದೇಶಕರಿದ್ದರು. ಆದರೆ, ರಾಕಿ ಭಾಯ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ಸಿನಿಮಾ ಮಂದಿಗೆ ಅಚ್ಚರಿಯನ್ನು ಮೂಡಿಸಿತ್ತು.
'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಹೆಜ್ಜೆ ಹೇಗಿಡುತ್ತಾರೆ ಅನ್ನೋದನ್ನು ಸಿನಿಮಾ ಮಂದಿ ಎದುರು ನೋಡುತ್ತಿದ್ದರು. ಆದರೆ, ಅಲ್ಲು ಅರ್ಜುನ್ ತೆಲುಗು ನಿರ್ದೇಶಕ ತ್ರಿವಿಕ್ರಮ್ ಪ್ರಾಜೆಕ್ಟ್ ಅನ್ನು ರಿಜೆಕ್ಟ್ ಮಾಡಿ ಅಟ್ಲೀ ಕಡೆ ಮುಖ ಮಾಡಿದ್ದರು. ಹೀಗಾಗಿ ಅಲ್ಲು ಅರ್ಜುನ್ ಬೇರೆಯದ್ದೇ ಹಾದಿ ಹಿಡಿದಿದ್ದಾರೆಂದು ಭಾವಿಸಲಾಗಿತ್ತು. ಆದ್ರೀಗ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಮಲಯಾಳಂ ನಿರ್ದೇಶಕ ಬೇಸಿಲ್ ಜೋಸೆಫ್ ಜೊತೆ ಹೊಸ ಪ್ರಾಜೆಕ್ಟ್‌ಗೆ ಮಾತುಕತೆ ನಡೆಸುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಇದೊಂದು ಸೂಪರ್‌ಮ್ಯಾನ್ ಕಥೆಯಾಗಿದ್ದು, ಈ ಹಿಂದೆ ಇದೇ ನಿರ್ದೇಶಕರು 'ಮಿನ್ನರ್ ಮುರಳಿ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು.

ಅದ್ಯಾವಾಗ ಈ ಸುದ್ದಿ ಹೊರಬಿತ್ತೋ ಮತ್ತೆ ರಾಕಿ ಭಾಯ್ ಸಿನಿಮಾ ಪ್ರೇಮಿಗಳು ಅಲರ್ಟ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಯಶ್ ಇಟ್ಟಂತೆ ಅಲ್ಲು ಅರ್ಜುನ್ ಕೂಡ ಹೆಜ್ಜೆ ಇಡುತ್ತಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ರಾಕಿ ಭಾಯ್ ರೀತಿನೇ ಮಲಯಾಳಂ ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆಂದು ಕಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಅಲ್ಲು ಅರ್ಜುನ್ ಶೀಘ್ರದಲ್ಲಿಯೇ ಅಟ್ಲೀ ನಿರ್ದೇಶಿಸುತ್ತಿರುವ ಸಿನಿಮಾದ ಸೆಟ್ಟಿಗೆ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಜಾಹ್ನವಿ ಕಪೂರ್ ಹಾಗೂ ಮೃಣಾಲ್ ಠಾಕೂರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.


Click it and Unblock the Notifications











