ವಿಚ್ಛೇದನದ ಬಳಿಕ ನಾಗಚೈತನ್ಯಗೆ ಮತ್ತೆ ಸಮಂತಾ ಮೇಲೆ ಲವ್? ಸುಳಿವು ಕೊಟ್ಟ ಆ ಫೋಟೊ ಯಾವುದು?

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿದ ದಿನದಿಂದಲೂ ಇಬ್ಬರು ಪರೋಕ್ಷವಾಗಿ ಕಿತ್ತಾಡಿದ್ದೇ ಹೆಚ್ಚು. ಇಬ್ಬರ ಅಭಿಮಾನಿಗಳು ಕೂಡ ಅಖಾಡಕ್ಕಿಳಿದು ಒಬ್ಬರಿಗೊಬ್ಬರು ಟಾಂಕ್ ಕೊಟ್ಟುಕೊಂಡಿದ್ದರು. ಇಷ್ಟು ದಿನಗಳ ಬಳಿಕ ಇಬ್ಬರ ಫ್ಯಾನ್ಸ್‌ನಲ್ಲೂ ಹೊಸದೊಂದು ಆಶಾಕಿರಣ ಮೂಡಿದೆ.

ನಾಗಚೈತನ್ಯ ಸದ್ಯ ಈಗ ತಮ್ಮದೇ 'ಥ್ಯಾಂಕ್ ಯೂ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ, ವೇದಿಕೆಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಿನಿಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರೇ ಹಂಚಿಕೊಂಡ ಒಂದು ಫೋಟೊ ಸಮಂತಾ ಮೇಲೇ ಇನ್ನೂ ಪ್ರೀತಿ ಉಳಿದಿದೆ ಎಂಬ ಸುಳಿವು ನೀಡಿದೆ. ಇದು ನೆಟ್ಟಿಗರೇ ಮಾಡುತ್ತಿರುವ ಕಮೆಂಟ್.

ನಾಗಚೈತನ್ಯ ಮೂರು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳಲ್ಲಿ ಒಂದು ಫೋಟೊ ಸಮಂತಾ ಮೇಲೆ ಇನ್ನೂ ಒಲವು ಉಳಿದಿದೆ ಎಂದು ಸಾರಿ ಹೇಳುತ್ತಿದೆ. ಅಷ್ಟಕ್ಕೂ ನಾಗಚೈತನ್ಯ ಹಂಚಿಕೊಂಡ ಆ ಫೋಟೊ ಯಾವುದು? ಅದರಲ್ಲಿ ಸಿಕ್ಕ ಸುಳಿವು ಏನು? ಎಂದು ತಿಳಿಯಲು ಮುಂದೆ ಓದಿ.

ಮೂವರಿಗೆ ನಾಗಚೈತನ್ಯ 'ಥ್ಯಾಂಕ್ ಯೂ'

ಮೂವರಿಗೆ ನಾಗಚೈತನ್ಯ 'ಥ್ಯಾಂಕ್ ಯೂ'

ರಿಲೀಸ್‌ಗೆ ರೆಡಿಯಾಗಿರುವ ನಾಗಚೈತನ್ಯ ಹೊಸ ಸಿನಿಮಾದ ಹೆಸರು 'ಥ್ಯಾಂಕ್ ಯೂ' ಹೀಗಾಗಿ ತಮ್ಮ ಜೀವನದಲ್ಲಿ 'ಥ್ಯಾಂಕ್ ಯೂ' ಎಂದು ಹೇಳಲು ಬಯಸುವ ಮೂವರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೂರು ಫೋಟೊಗಳಲ್ಲಿ ಒಂದು ಪರೋಕ್ಷವಾಗಿ ಸಮಂತಾ ಕಡೆಗೆ ಬೊಟ್ಟು ಮಾಡುತ್ತಿದೆ. ಆ ಫೋಟೊ ನೋಡಿ ನಾಗಚೈತನ್ಯ ಇನ್ನೂ ಸಮಂತಾರನ್ನು ಮರೆತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸಮಂತಾಗೆ ಥ್ಯಾಂಕ್‌ ಯೂ ಹೇಳಿದ್ರಾ ನಾಗ್?

ಸಮಂತಾಗೆ ಥ್ಯಾಂಕ್‌ ಯೂ ಹೇಳಿದ್ರಾ ನಾಗ್?

ನಾಗಚೈತನ್ಯ ಶೇರ್ ಮಾಡಿದ ಮೂರು ಫೋಟೊಗಳಲ್ಲಿ ಒಂದು ಮಾಜಿ ಪತ್ನಿ ಸಮಂತಾಗೆ ಸಂಬಂಧಿಸಿದ್ದು. ಇಬ್ಬರೂ ತಮ್ಮ ಪ್ರೀತಿಯ ಪ್ರತೀಕವಾಗಿ ಇಟ್ಟುಕೊಂಡಿದ್ದ ಹ್ಯಾಶ್ ಫೋಟೊವನ್ನು ಶೇರ್ ಮಾಡಿದ್ದಾರೆ. ಹ್ಯಾಶ್, ಇದು ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಯ ಸಂಕೇತಕ್ಕೆಂದು ಇದ್ದ ಅವರ ಪ್ರೀತಿಯ ಶ್ವಾನ. ಇದೇ ಫೋಟೊವನ್ನು ನಾಗಚೈತನ್ಯ ಹಂಚಿಕೊಂಡಿದ್ದು, ಪರೋಕ್ಷವಾಗಿ ನಾಗಚೈತನ್ಯಗ್ಗೆ ಧನ್ಯವಾದಗಳನ್ನು ಹೇಳಿದ್ದಾರೆ. " ಹ್ಯಾಶ್ ಹೇಗೆ ಪ್ರೀತಿ ಮಾಡಬೇಕು ಅನ್ನುವ ಭಾವ ಮೂಡಿಸಿದ್ದು, ಮನುಷ್ಯನಾಗಿಯೇ ಇರುವಂತೆ ಮಾಡಿದೆ." ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು?

ನೆಟ್ಟಿಗರು ಏನಂದ್ರು?

ಹ್ಯಾಶ್ ಜೊತೆ ನಾಗಚೈತನ್ಯ ಇರುವ ಫೋಟೊವನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೊ ನೋಡಿ, " ಮತ್ತೆ ಇಬ್ಬರೂ ಒಂದಾಗಿ" ಎಂದು ಒಬ್ಬರ ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು " ಸಮಂತಾ ಬದಲು ಹ್ಯಾಶ್ ಮುಂದಿಟ್ಟುಕೊಂಡು ಪರೋಕ್ಷವಾಗಿ ಅವರ ಪ್ರೀತಿಗೆ ಥ್ಯಾಂಕ್ ಯೂ ಹೇಳಿದ್ದೀರಿ ತಾನೇ?" ಎಂದು ಮತ್ತೊಬ್ಬರು ಹೇಳಿದ್ದಾರೆ.

'ಥ್ಯಾಂಕ್ ಯೂ' ಹೇಳಿದ ಇನ್ನಿಬರು ಯಾರು?

ಹ್ಯಾಶ್ ಬಿಟ್ಟು ನಾಗಚೈತನ್ನು ಅವರ ಅಮ್ಮನಿಗೆ ಮೊದಲು 'ಥ್ಯಾಂಕ್ ಯೂ' ಹೇಳಿದ್ದಾರೆ. " ಅಮ್ಮಾ- ನನ್ನ ಮೂಲ ಆಗಿದ್ದಕ್ಕಾಗಿ, ಕಾಲ ಕಾಲಕ್ಕೆ ತಕ್ಕಂತೆ ಬೇರೂರುವಂತೆ ಮಾಡಿದ್ದಕ್ಕಾಗಿ ಮತ್ತು ಸಾಧ್ಯವಿರುವ ಎಲ್ಲಾ ಕಡೆ ಜೊತೆಯಾಗಿದ್ದಕ್ಕಾಗಿ ಥ್ಯಾಂಕ್ ಯೂ" ಎಂದಿದ್ದಾರೆ. ಎರಡನೆಯದಾಗಿ ಅಪ್ಪ " ನನಗೆ ದಾರಿ ತೋರಿಸಿದ್ದಕ್ಕಾಗಿ ಹಾಗೂ ಬೇರೆ ಎಲ್ಲಾ ಸ್ನೇಹಿತರಿಗಿಂತ ಉತ್ತಮ ಸ್ನೇಹಿತರಾಗಿದ್ದಕ್ಕೆ ಥ್ಯಾಂಕ್ ಯೂ" ಎಂದಿದ್ದಾರೆ.

More from Filmibeat

English summary
Is Naga Chaitanya Again Fell In Love With Samantha Indirectly Showers His Interest ?, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X