₹15 ಕೋಟಿ ಖರ್ಚು ಮಾಡಿ 3ನೇ ಪತ್ನಿ ವಿರುದ್ಧ ಸೇಡು ತೀರಿಸಿಕೊಂಡ್ರಾ ನರೇಶ್? ಮತ್ತೆ ಮದುವೆ ಸೀಕ್ರೆಟ್ ಏನು?

ಬಹಳ ದಿನಗಳಲ್ಲಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಮತ್ತೆ ಮದುವೆ' (ಮಳ್ಳಿ ಪೆಳ್ಳಿ). ಪವಿತ್ರಾ ಲೋಕೇಶ್ ಹಾಗೂ ನರೇಶ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾವಿದು. ಸದ್ಯಕ್ಕೆ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಇದೇ ಸಿನಿಮಾ ಟ್ರೈಲರ್ ಈಗ ರಿಲೀಸ್ ಆಗಿದೆ.

ಇತ್ತೀಚೆಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧ ಬೀದಿಗೆ ಬಂದಿತ್ತು. ತೆಲುಗು ನಟ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಈ ವಿಷಯವನ್ನು ಬಹಿರಂಗ ಪಡಿಸಿದ್ದು ಗೊತ್ತೇ ಇದೆ. ಆ ಬಳಿಕ ಮೈಸೂರಿನ ಹೋಟೆಲ್‌ನಲ್ಲಿ ಒಟ್ಟಿಗೆ ಇದ್ದಿದ್ದನ್ನು ರಮ್ಯಾ ರಘುಪತಿಯೇ ರಿವೀಲ್ ಮಾಡಿದ್ದರು.

Is Naresh and Pavitra Lokesh Taking Revenge on Ramya Raghupathi By Making Malli Pelli

ಇಷ್ಟೆಲ್ಲಾ ಆದ ಬಳಿಕ ಮತ್ತೆ ಈ ಜೋಡಿ ಒಟ್ಟಿಗೆ ಕ್ಯಾಮರಾ ಮುಂದೆ ಬಂದಿರಲಿಲ್ಲ. ಈಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ 'ಮತ್ತೆ ಮದುವೆ'. ಇಲ್ಲಿವರೆಗೂ ತಮ್ಮ ಬದುಕಿನಲ್ಲಿ ನಡೆ ಘಟನೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಮೂಲಕ ಮೂರನೇ ಪತ್ನಿಯ ವಿರುದ್ಧ ಸೇಡು ತೀರಿಸಿಕೊಂಡ್ರಾ ನರೇಶ್? ಪ್ರಶ್ನೆಗೆ ಸ್ಮಾರ್ಟ್ ಉತ್ತರ ಕೊಟ್ಟಿದ್ದಾರೆ.

ನರೇಶ್-ಪವಿತ್ರಾ ರಿಯಲ್ ಲವ್ ಸ್ಟೋರಿನಾ?

'ಮತ್ತೆ ಮದುವೆ' ಪವಿತ್ರಾ ಲೋಕೇಶ್ ಹಾಗೂ ನರೇಶ್ ಇಬ್ಬರ ರಿಯಲ್ ಲೈಫ್ ಅನ್ನು ಆಧರಿಸಿದ ಸಿನಿಮಾವೇ? ಅನ್ನೋ ಪ್ರಶ್ನೆ ಟ್ರೈಲರ್ ನೋಡಿದ ಮೇಲೆ ಕಾಡುತ್ತಿತ್ತು. ಹೀಗಾಗಿ ಪ್ರಶ್ನೆಯನ್ನು ಅವರ ಬಳಿಯೇ ಕೇಳಲಾಗಿತ್ತು. ಅದಕ್ಕೆ ನರೇಶ್ ಜಾಣತನದಿಂದಲೇ ಉತ್ತರಿಸಿದ್ದಾರೆ.

"ರಿಯಲ್ ಲೈಫ್ ಕಥೆಯೇ ಅನ್ನೋದು ನೋಡಿದಾಗಲೇ ಗೊತ್ತಾಗುತ್ತದೆ. ಈಗ ಹೇಳಿದರೆ ಮಜಾ ಇರೋದಿಲ್ಲ. ಹಾಗಾಗಿ ಕಥೆಯನ್ನು ಬಹಿರಂಗಪಡಿಸಲು ಈಗ ಸಾಧ್ಯವಿಲ್ಲ. ಇದೊಂದು ವಿಶಿಷ್ಟ ಸಿನಿಮಾ ಎಂದು ಹೇಳಬಹುದು." ಎಂದು ಹೇಳಿದ್ದಾರೆ. ಹಾಗೇ "ಇದು ಬಯೋಪಿಕ್ ಅಲ್ಲ. ಇದೊಂದು ಪಕ್ಕಾ ಮನರಂಜನೆ ಸಿನಿಮಾ" ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ರಮ್ಯಾ ರಘುಪತಿ ಬಗ್ಗೆ ಸೇಡು ತೀರಿಸಿಕೊಳ್ಳಲು ಮಾಡಿದ ಸಿನಿಮಾನಾ? ಅನ್ನೋದಕ್ಕೂ ಪ್ರತಿಕ್ರಿಯಿಸಿದ್ದಾರೆ.

Is Naresh and Pavitra Lokesh Taking Revenge on Ramya Raghupathi By Making Malli Pelli

ರಮ್ಯಾ ರಘುಪತಿ ಮೇಲೆ ಸೇಡು ತೀರಿಸಿಕೊಂಡ್ರಾ?

ನರೇಶ್ ಹಾಗೂ ಮೂರನೇ ಪತ್ನಿ ರಮ್ಯಾ ರಘುಪತಿ ನಡುವೆ ಕಿತ್ತಾಟ ನಡೆಯುತ್ತಿದೆ. ರಮ್ಯಾ ವಿಚ್ಛೇದನ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ನರೇಶ್ ಹಾಗೂ ರಮ್ಯಾ ನಡುವೆ ಜಟಾಪಟಿ ನಡೆಯುತ್ತಿದೆ. ಇದೇ ಕಾರಣಕ್ಕೆ ಮೂರನೇ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಈ ಸಿನಿಮಾ ನಿರ್ಮಿಸಿದ್ದಾರೆ ಎನ್ನಲಾಗಿತ್ತು. ಆ ಪ್ರಶ್ನೆ ನರೇಶ್ ಉತ್ತರ ಹೀಗಿದೆ.

"ಸೇಡು ತೀರಿಸಿಕೊಳ್ಳಲು ಪೊಲೀಸರ ಬಳಿ ಹೋಗಬಹುದು. ನ್ಯಾಯಾಲಯದ ಮೆಟ್ಟಿಲೇರಬಹುದು. ಸಿನಿಮಾದ ಮೂಲಕ ನಾವು ಸೇಡು ತೀರಿಸಿಕೊಳ್ಳಲು ಸಾಧ್ಯವೇ? ಸಿನಿಮಾ ಎಂದರೆ ಪಕ್ಕಾ ಮನರಂಜನೆ. 15 ಕೋಟಿ ರೂ. ಖರ್ಚು ಮಾಡಿ ಸೇಡು ತೀರಿಸಿಕೊಳ್ಳುವುದಕ್ಕೆ ಆಗುವುದಿಲ್ಲ" ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜೀವನ ಸೆಕೆಂಡ್ ಹಾಫ್ ಉತ್ತಮವಾಗಿರಬೇಕು

ಇದೇ ವೇಳೆ 'ಮತ್ತೆ ಮದುವೆ' ಸಿನಿಮಾದ ನಿರ್ದೇಶಕ ಸಿನಿಮಾ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರಹಾಕಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ರಾಜು ನಿರ್ದೇಶನ ಮಾಡಿದ್ದಾರೆ. " ಸಿನಿಮಾದಲ್ಲಿ ಫಸ್ಟ್ ಹಾಫ್‌ಗಿಂತ ಸೆಕೆಂಡ್ ಹಾಫ್ ಹೇಗೆ ಉತ್ತಮವಾಗಿರಬೇಕು ಎಂದು ಬಯಸುತ್ತೇವೋ..? ಹಾಗೇ ಬದುಕಿನ ಸೆಕೆಂಡ್ ಹಾಫ್ ಕೂಡ ಅಷ್ಟೇ ಉತ್ತಮವಾಗಿರಬೇಕು" ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ಜಯಸುಧಾ ಹಾಗೂ ಶರತ್ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವನಿತಾ ವಿಜಯ್ ಕುಮಾರ್, ಅನನ್ಯ ರೋಷನ್, ರವಿವರ್ಮ, ಅನ್ನಪೂರ್ಣ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.

More from Filmibeat

English summary
Is Naresh and Pavitra Lokesh Taking Revenge on Ramya Raghupathi By Making Malli Pelli, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X