"ಬಾಹುಬಲಿ ಬಳಿಕ ಜೀವನ ಕಷ್ಟ ಎನಿಸುತ್ತಿದೆ.. ನನಗಾದ ನಷ್ಟಕ್ಕೆ ರಾಜಮೌಳಿನೇ ಕಾರಣ"; ಪ್ರಭಾಸ್
'ಬಾಹುಬಲಿ' ಬಳಿಕ ಪ್ರಭಾಸ್ ಬದುಕು ತುಂಬಾನೇ ಬದಲಾಗಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಪ್ರಭಾಸ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಪ್ರಭಾಸ್ ಹೋದ ಕಡೆಯಲ್ಲೆಲ್ಲ ಅವನ್ನು ಗುರುತಿಸಿ ಮಾತಾಡಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳೇ ಇವರನ್ನು ಹುಡುಕಿಕೊಂಡು ಬರುತ್ತಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋತರೂ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.
ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ಆದರೆ, 'ಬಾಹುಬಲಿ' ಸೀರಿಸ್ ಬಳಿಕ ನಟಿಸಿದ ಒಂದೇ ಒಂದು ಸಿನಿಮಾ ಕೂಡ ಗೆದ್ದಿಲ್ಲ ಅನ್ನೋದು ಅಷ್ಟೇ ಸತ್ಯ. 'ಸಾಹೋ', 'ರಾಧೆ ಶ್ಯಾಮ್', 'ಆದಿಪುರುಷ್' ಅಂತಹ ಸಿನಿಮಾಗಳು ತೆರೆಕಂಡಾಗ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದರು. ಪ್ರಭಾಸ್ ಮುಂದಿನ ಸಿನಿಮಾ ಜರ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ನೂರೆಂಟು ಟೀಕೆಗಳು ಬಂದರೂ, ಪ್ರಭಾಸ್ ಅದ್ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದ್ರೀಗ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಸಲಾರ್' ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಮೇಲೆ ನಂಬಿಕೆ ಡಾರ್ಲಿಂಗ್ ಫ್ಯಾನ್ಸ್ ನಂಬಿಕೆ ಇಟ್ಟು ಕೂತಿದ್ದಾರೆ. ಈ ನಡುವೆ ರಾಜಮೌಳಿ ಜೊತೆಗಿನ 'ಸಲಾರ್' ಸಂದರ್ಶನದಲ್ಲಿ ಪ್ರಭಾಸ್ 'ಬಾಹುಬಲಿ' ಬಳಿಕ ಎದುರಾಗಿರೋ ಸಂಕಷ್ಟಕ್ಕೆ ಗುರು ರಾಜಮೌಳಿಯನ್ನೇ ದೂರಿದ್ದಾರೆ.
'ಸಲಾರ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ವೇಳೆ ಸ್ವತ: ರಾಜಮೌಳಿ 'ಸಲಾರ್' ತಂಡದೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ರಾಜಮೌಳಿ ಎದುರಿಗೆ ಪ್ರಭಾಸ್ 'ಬಾಹುಬಲಿ' ಬಳಿಕ ಜೀವನ ಕಷ್ಟ ಅಂತ ಅನಿಸುವುದಕ್ಕೆ ಶುರುವಾಗಿತ್ತು ಎಂದು ಹೇಳಿದ್ದಾರೆ. ಪ್ರಭಾಸ್ ಅದ್ಯಾಕೆ ರಾಜಮೌಳಿಯನ್ನು ದೂರಿದ್ರು? ಅಂತಹದ್ದೇನಾಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬಾಹುಬಲಿ'ಗೂ ಮುನ್ನ ಪ್ರಭಾಸ್ ತೆಲುಗು ಚಿತ್ರರಂಗದ ಟಾಪ್ ಸ್ಟಾರ್ ಆಗಿದ್ದರು. ಆದರೆ, 'ಬಾಹುಬಲಿ' ರಿಲೀಸ್ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇಲ್ಲಿಂದ ಪ್ರಭಾಸ್ ವಿಶ್ವದ ಯಾವುದೇ ಮೂಲೆಗೆ ಹೋದರೂ, ಯಾರಾದರೂ ಒಬ್ಬರು ಗುರುತು ಹಿಡಿದು ಮಾಡಿಸೋಕೆ ಬರುತ್ತಿದ್ದರು. ಇದು ಪ್ರಭಾಸ್‌ಗೆ ತೀರ ಕಷ್ಟ ಅಂತ ಅನಿಸುವುದಕ್ಕೆ ಶುರುವಾಗಿತ್ತು.

"ಬಾಹುಬಲಿ ಬಳಿಕ ತುಂಬಾನೇ ಕಷ್ಟ ಅಂತ ಅನಿಸುವುದಕ್ಕೆ ಶುರುವಾಗಿತ್ತು. ನನಗೆ ಏನು ಮಾಡಬೇಕು ಅಂತಾನೇ ಗೊತ್ತಾಗುತ್ತಿರಲಿಲ್ಲ. ತೆಲುಗು ಚಿತ್ರರಂಗದಿಂದ ದಿಢೀರನೇ ನಾನು ಪ್ಯಾನ್ ಇಂಡಿಯಾಗೆ ಹೋದೆ. ಅಲ್ಲಿಂದ ಗ್ಲೋಬಲ್ ಲೆವೆಲ್‌ನಲ್ಲಿ ಗುರುತಿಸುವುದಕ್ಕೆ ಮುಂದಾಗಿದ್ದೆ." ಎಂದು ಪ್ರಭಾಸ್ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಪ್ರಭಾಸ್ ಇಟಲಿಯಲ್ಲಿರುವಾಗ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದು, ತನ್ನ ಪ್ರೈವಸಿ ಹೇಗೆ ಹಾಳಾಯ್ತು ಅನ್ನೋದನ್ನು ವಿವರಿಸಿದ್ದಾರೆ. "ನಾನು ಇಟಲಿಯಲ್ಲಿ ಇದ್ದೆ. ಯಾರೋ ಒಬ್ಬರು ದಿಢೀರನೇ ನನ್ನ ಎದುರಿಗೆ ಬಂದಿದ್ದರು. ನನ್ನನ್ನು ಕರೆದರು. ಅವರಿಗೆ ಇಂಗ್ಲಿಷ್ ಅರ್ಥ ಆಗಿದ್ದೇ ಇದ್ದಿದ್ದರಿಂದ, ಬೇರೆಯವರು ಈತ ಬಾಹುಬಲಿ ಸಿನಿಮಾ ನೋಡಿದ್ದಾನೆ. ಅದಕ್ಕಾಗಿ ನಿಮ್ಮನ್ನು ಗುರುತು ಹಿಡಿದಿದ್ದಾನೆ ಎಂದರು. ನನ್ನ ಪ್ರೈವಸಿ ಹಾಳು ಮಾಡಿದ್ದಕ್ಕೆ ರಾಜಮೌಳಿಯನ್ನು ದೂಷಿಸಿಕೊಂಡೆ." ಎಂದು ಪ್ರಭಾಸ್ ಹೇಳಿದ್ದಾರೆ.
ಇದೇ ವೇಳೆ 'ಸಲಾರ್' ಸಿನಿಮಾವನ್ನು ತಾನೇಕೆ ಒಪ್ಪಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಹೋದಲ್ಲೆಲ್ಲ ಕೆಜಿಎಫ್ ಅಂತಹ ಸಿನಿಮಾದಲ್ಲಿ ನೀವು ನಟಿಸಬೇಕು ಅಂತ ಪ್ರಭಾಸ್‌ಗೆ ಹೇಳುತ್ತಿದ್ದರು. "ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರಿಂದ ಆರಂಭದಲ್ಲಿ ಬೇಡ ಅಂತ ಹೇಳಬೇಕು ಅಂತ ಅನಿಸಿದ್ದರೂ, ಇದೇನಾದರು ಗೊತ್ತಾದರೆ, ನನ್ನ ಅಭಿಮಾನಿಗಳು ನನ್ನನ್ನು ಸಾಯಿಸಿ ಬಿಡುತ್ತಾರೆ." ಎಂದು ಪ್ರಭಾಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


Click it and Unblock the Notifications











