For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ತಾಯಿ ಜೊತೆ ಕಾಣಿಸಿಕೊಂಡ ಜಾಹ್ನವಿ ಕಪೂರ್: ಏನಿದರ ಗುಟ್ಟು?

  |

  ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಬಹಳ ದಿನಗಳಿಂದಲೂ ಜಾಹ್ನವಿ ಕಪೂರ್ ಟಾಲಿವುಡ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತಾನೇ ಸುದ್ದಿ ಓಡಾಡುತ್ತಿತ್ತು.

  ಇತ್ತ ವಿಜಯ್ ದೇವರಕೊಂಡ ಕೂಡ 'ಲೈಗರ್' ಬಳಿಕ ಬಿಗ್ ಪ್ರಾಜೆಕ್ಟ್‌ ಗ್ರೀನ್ ಸಿಗ್ನಲ್ ಕೊಡುವುದಕ್ಕೆ ಎದುರು ನೋಡುತ್ತಿದ್ದಾರೆ. 'ಲೈಗರ್' ಗೆದ್ದಿದ್ದರೆ ವಿಜಯ್ ದೇವರಕೊಂಡ ಇಷ್ಟೊತ್ತಿಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದರು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ತೀರಾ ನೆಲಕ್ಕಚ್ಚಿತ್ತು.

  'ಲೈಗರ್' ಹೀನಾಯ ಸೋಲಿನ ಬಳಿಕ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್?'ಲೈಗರ್' ಹೀನಾಯ ಸೋಲಿನ ಬಳಿಕ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್?

  ಇಷ್ಟು ದಿನ ಸೈಲೆಂಟ್ ಆಗಿಯೇ ಇದ್ದ ವಿಜಯ್ ದೇವರಕೊಂಡ ದಿಢೀರನೇ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕಾರಣ. ವಿಜಯ್ ದೇವರಕೊಂಡ ಅವರ ತಾಯಿಯೊಂದಿಗೆ ಜಾಹ್ನವಿ ಕಾಣಿಸಿಕೊಂಡು ಫೋಟೊ ನೂರೆಂಟು ಕಥೆಗಳನ್ನು ಹುಟ್ಟಾಕುತ್ತಿದೆ.

  ವಿಜಯ್ ದೇವರಕೊಂಡ ಅಮ್ಮನೊಂದಿಗೆ ಜಾಹ್ನವಿ

  ವಿಜಯ್ ದೇವರಕೊಂಡ ಅಮ್ಮನೊಂದಿಗೆ ಜಾಹ್ನವಿ

  ವಿಜಯ್ ದೇವರಕೊಂಡ ಬಗ್ಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹಲವು ಬಾರಿ ಮಾತಾಡಿದ್ದಾರೆ. ಕೆಲವೊಮ್ಮೆ ಇವರಿಬ್ಬರ ನಡುವೆ ಏನೋ ನಡೀತಿ ಅಂತ ಬಾಲಿವುಡ್ ಗುಸುಗುಸು ಹಬ್ಬಿಸಿದ್ದೂ ಇತ್ತು. ಆದರೀಗ ವಿಜಯ್ ದೇವರಕೊಂಡ ಅವರ ತಾಯಿ ದೇವರಕೊಂಡ ಮಾಧವಿ ಅವರೊಂದಿಗೆ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಈ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಸಲಿಗೆ ಈ ಫೋಟೊದ ರಹಸ್ಯದ ಹುಡುಕಾಟ ಈಗಾಗಲೇ ಶುರುವಾಗಿದೆ.

  ಟಾಲಿವುಡ್ ರೌಡಿ ಬಗ್ಗೆ ಜಾಹ್ನವಿ ಹೇಳಿದ್ದೇನು?

  ಟಾಲಿವುಡ್ ರೌಡಿ ಬಗ್ಗೆ ಜಾಹ್ನವಿ ಹೇಳಿದ್ದೇನು?

  ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಡೇಟಿಂಗ್ ಮಾಡುತ್ತಿರುಬಹುದು ಅನ್ನೋ ಸುದ್ದಿ ಹಬ್ಬಿತ್ತು. ಅದಕ್ಕೆ ಕಾರಣ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್ ಸೀಸನ್ 7'. ಈ ಟಾಕ್ ಶೋದ ಎರಡನೇ ಸೀಸನ್‌ನಲ್ಲಿ ಸಾರಾ ಅಲಿಖಾನ್ ಹಾಗೂ ಜಾಹ್ನವಿ ಕಪೂರ್ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕರಣ್ ವಿಜಯ್ ದೇವರಕೊಂಡ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ಸಾರಾ ಅಲಿ ಖಾನ್ "ನನಗೆ ವಿಜಯ್ ದೇವರಕೊಂಡ ಡೇಟಿಂಗ್ ಮಾಡುವುದಕ್ಕೆ ಇಷ್ಟ. ಆದರೆ, ಜಾಹ್ನವಿ ಕಪೂರ್‌ಗೆ ಬೇಸರ ಆಗುತ್ತೆ" ಎಂದು ಹೇಳಿದ್ದರು. ಆಗ ಜಾಹ್ನವಿ ಕೂಡ " ವಿಜಯ್ ದೇವರಕೊಂಡ ನನಗೆ ತುಂಬಾನೇ ಇಷ್ಟ. ಅವರು ನನ್ನನ್ನು ತುಂಬಾ ನಗಿಸುತ್ತಾರೆ ಎಂದು ಹೇಳಿದ್ದರು. ಆದರೆ, ಇದೇ ಜಾಹ್ನವಿ ಕಪೂರ್ 'ಗೀತ ಗೋವಿಂದಂ' ಜೋಡಿ ಬಗ್ಗೆನೂ ಅನುಮಾನ ವ್ಯಕ್ತಪಡಿಸಿತ್ತು.

  ವಿಜಯ್-ರಶ್ಮಿಕಾ ಬಗ್ಗೆ ಸುಳಿವು ನೀಡಿದ್ದ ಜಾಹ್ನವಿ

  ವಿಜಯ್-ರಶ್ಮಿಕಾ ಬಗ್ಗೆ ಸುಳಿವು ನೀಡಿದ್ದ ಜಾಹ್ನವಿ

  ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆನೂ ಗುಸು ಗುಸು ಇದೆ. ಇದು 'ಗೀತಾ ಗೋವಿಂದಂ' ಸಿನಿಮಾದಿಂದಲೂ ಇದೆ. ಇಬ್ಬರೂ ಕುದ್ದಾಗಿ ಇಬ್ಬರೂ ಒಳ್ಳೆ ಸ್ನೇಹಿತರು ಎಂದರೂ, ನಂಬೋಕೆ ಅಭಿಮಾನಿಗಳೇ ರೆಡಿಯಿಲ್ಲ. ಇನ್ನೊಂದು ಜಾಹ್ನವಿ ಕಪೂರ್ 'ಮಿಲಿ' ಸಿನಿಮಾ ಪ್ರಚಾರದ ವೇಳೆ ವಿಜಯ್ ದೇವರಕೊಂಡ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. " ವಿಜಯ್ ದೇವರಕೊಂಡ ಪ್ರಾಕ್ಟಿಕಲಿ ಮ್ಯಾರೀಡ್." ಎಂದು ಹೇಳಿದ್ದರು. ಈ ಹೇಳಿಕೆ ಕೂಡ ಆಗ ಸಿಕ್ಕಾ ಪಟ್ಟೆ ಚರ್ಚೆಯಾಗಿತ್ತು. ಆಗ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆ ಜಾಹ್ನವಿ ಕಪೂರ್ ಮಾತಾಡಿದ್ದಾರೆಂದು ಸುದ್ದಿಯಾಗಿತ್ತು.

  ವಿಜಯ್ ಅಮ್ಮ- ಜಾಹ್ನವಿ ಭೇಟಿಯ ರಹಸ್ಯವೇನು?

  ವಿಜಯ್ ಅಮ್ಮ- ಜಾಹ್ನವಿ ಭೇಟಿಯ ರಹಸ್ಯವೇನು?

  ಬಾಲಿವುಡ್ ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಇತ್ತೀಚೆಗೆ ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಜಯ್ ಜೊತೆ ಅವರ ಅಮ್ಮ ಮಾಧವಿ ಕೂಡ ಹೋಗಿದ್ದರು. ಆ ವೇಳೆ ಜಾಹ್ನವಿ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಬ್ಬರೂ ಒಟ್ಟಿಗೆ ನಟಿಸುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಜಾಹ್ನವಿ ಕಪೂರ್ ಹೆಸರು ಜೂ.ಎನ್‌ಟಿಆರ್ ಹಾಗೂ ಮಹೇಶ್ ಬಾಬು ಸಿನಿಮಾಗಳ ಜೊತೆ ತಳುಕು ಹಾಕಿಕೊಳ್ಳುತ್ತಿದೆ.

  English summary
  Jahnvi Kapoor And Vijay Deverakonda Mother Spotted Together Photo Goes Viral, Know More.
  Tuesday, December 6, 2022, 13:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X