ರಾಮ್ ಚರಣ್ 'ಪೆದ್ದಿ'ಯಲ್ಲಿ ಅಚ್ಚಿಯಮ್ಮನಾದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್
ರಾಮ್ ಚರಣ್ ತೇಜಾ ನಟಿಸುತ್ತಿರುವ ಸಿನಿಮಾ 'ಪೆದ್ದಿ' ಮೇಲೆ ಎಲ್ಲರ ಕಣ್ಣು ಬಿದ್ದಿದೆ. ನಿರ್ದೇಶಕ ಸುಕುಮಾರ್ ಶಿಷ್ಯನೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಈ ಸಿನಿಮಾ ತುಣುಕು ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿದೆ. ಇದು ಟಾಲಿವುಡ್‌ನಲ್ಲಿ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. 'ಉಪ್ಪೆನ' ಅಂತ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿರೋ ಬುಚ್ಚಿ ಬಾಬು ಸನಾ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

'ಪೆದ್ದಿ' ಸಿನಿಮಾ 2026ರಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಿನಿಮಾ ಶೂಟಿಂಗ್ ಅನ್ನು ವೇಗವಾಗಿ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಾಮ್ ಚರಣ್ ಜೊತೆಯಾಗಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಇಲ್ಲಿವರೆಗೂ ರಾಮ್ ಚರಣ್ ಹಾಗೂ ಶಿವಣ್ಣನ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದ ಚಿತ್ರತಂಡ ಈಗ ಸಿನಿಮಾದ ನಾಯಕಿ ಜಾಹ್ನವಿ ಕಪೂರ್ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ತೆಲುಗು ಸಿನಿಮಾ ಹೊಸದೇನೂ ಅಲ್ಲ. ಈಗಾಗಲೇ ಟಾಲಿವುಡ್‌ನ ಮತ್ತೊಬ್ಬ ಗ್ಲೋಬಲ್ ಸ್ಟಾರ್ ಜೂ.ಎನ್‌ಟಿಆರ್ ಜೊತೆ 'ದೇವರ' ಸಿನಿಮಾದಲ್ಲಿ ನಟಿಸಿ ತೆಲುಗು ಮಂದಿಯ ಮನಸ್ಸು ಗೆದ್ದಿದ್ದರು. ಈಗ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜಾಹ್ನವಿಯ ಲುಕ್ ಹಾಗೂ ಪಾತ್ರದ ಹೆಸರನ್ನು ರಿವೀಲ್ ಮಾಡಲಿದ್ದಾರೆ.
ಜಾಹ್ನವಿ ಕಪೂರ್ 'ಪೆದ್ದಿ' ಸಿನಿಮಾದಲ್ಲಿ ಅಚಿಯಮ್ಮ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಜಾಹ್ನವಿ ಕಪೂರ್ ಸಿಕ್ಕಾಪಟ್ಟೆ ಖಡಕ್ ಹಾಗೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೀಪಿನ ಮೇಲೆ ನಿಂತು ತಲೆಯ ಮೇಲೆ ಕೈಗಳನ್ನು ಎತ್ತಿಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿರೋದು ನೋಡಿದರೆ, ಇವರ ಪಾತ್ರ ಸಿನಿಮಾದಲ್ಲಿ ಖಡಕ್ ಆಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು.
ಇನ್ನು RRR ಬಳಿಕ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡಿರುವ ರಾಮ ಚರಣ್‌ಗೆ ಈ ಸಿನಿಮಾ ದೊಡ್ಡ ಸಕ್ಸಸ್ ಕೊಡುತ್ತೆ ಅಂತ ಈಗಾಗಲೇ ಅಭಿಮಾನಿಗಳೇ ಭವಿಷ್ಯ ನುಡಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಕೆಲವು ತುಣುಕುಗಳನ್ನು ನೋಡಿದರೆ, ರಾಮ್ ಚರಣ್ ಪಾತ್ರ ಕೂಡ ಅಷ್ಟೇ ರಫ್ ಅಂಡ್ ಟಫ್ ಆಗಿದೆಯೆಂದು ನಿರೀಕ್ಷೆ ಮಾಡಬಹುದು.
ರಾಮ್ ಚರಣ್ ನಟಿಸುತ್ತಿರುವ 'ಪೆದ್ದಿ' ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾದಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಪಾತ್ರ ಅಂದರೆ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಒಂದು ಖಡಕ್ ರೋಲ್ ಕಾಣಿಸಿಕೊಳ್ಳುತ್ತಿದ್ದಾರೆ.ಇವರೆಲ್ಲರ ಹೊತೆಗೆ ಜಗಪತಿ ಬಾಬು, ದಿವೇಂದು ಶರ್ಮಾ ಇವರಿಬ್ಬರೂ ಸೇರಿದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಪೆದ್ದಿ' ಸ್ಫೋರ್ಟ್ ಆಕ್ಷನ್ ಡ್ರಾಮಾ ಆಗಿದೆ. ಈ ಸಿನಿಮಾ ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳು ಚಿತ್ರಕ್ಕೆ ಬೆಂಬಲವಾಗಿ ನಿಂತಿವೆ. ಆರ್. ರತ್ನವೇಲು ಛಾಯಾಗ್ರಹಣ ಮಾಡುತ್ತಿದ್ದು, 2026ರ ಮಾರ್ಚ್ 27ಕ್ಕೆ 'ಪೆದ್ದಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.


Click it and Unblock the Notifications











