ಆಂಧ್ರ ಪ್ರದೇಶಕ್ಕೆ ಉಪ ಮುಖ್ಯಮಂತ್ರಿ ಆಗ್ತಾರಾ ಪವನ್ ಕಲ್ಯಾಣ್? ಪವರ್‌ಸ್ಟಾರ್ ಪ್ರತಿಕ್ರಿಯೆ ಏನು?
2024ರ ಲೋಕಸಭೆ ಚುನಾವಣೆ ವೇಳೆನೇ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆ ಕೂಡ ನಡೆದಿತ್ತು. ಈ ಬಾರಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿರುದ್ಧ ಚಂದ್ರ ಬಾಬು ನಾಯ್ಢು ಮುಂದಾಳತ್ವದ ತೆಲುಗು ದೇಶಂ ಪಾರ್ಟಿ, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು.
ಆಂಧ್ರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಮೈತ್ರಿಕೂಟಗಳಿಗೆ ಮತದಾರರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಅಚ್ಚರಿ ಫಲಿತಾಂಶ ಸಿಕ್ಕಿದೆ. ಆಂಧ್ರದ ಸುಮಾರು 21 ಕ್ಷೇತ್ರಗಳಲ್ಲಿ ಜನಸೇನಾ ಪಕ್ಷ ಸ್ಪರ್ಧೆ ಮಾಡಿತ್ತು. ಆ 21 ಸ್ಥಾನದಲ್ಲೂ ಪವರ್‌ಸ್ಟಾರ್ ಪವನ್ ಕಲ್ಯಾಣ್ ಪಕ್ಷದ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಇತ್ತ ಚಂದ್ರಬಾಬು ನಾಯ್ಡು ಪಕ್ಷ ಟಿಡಿಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮೈತ್ರಿಯಾಗಿ ಸ್ಪರ್ಧೆ ಮಾಡಿದ್ದ ಈ ಎರಡೂ ಪಕ್ಷಗಳು ಸೇರಿ ಆಡಳಿತ ನಡೆಸಲಿದೆ. ಹೀಗಾಗಿ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ಬಗ್ಗೆ ಪವನ್ ಕಲ್ಯಾಣ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪವನ್ ಕಲ್ಯಾಣ್ ತಮ್ಮ ಜನಸೇನಾ ಪಕ್ಷ 21 ಸ್ಥಾನಗಳನ್ನು ಗೆದ್ದು ಶೇ.100ರಷ್ಟು ಫಲಿತಾಂಶ ಗಿಟ್ಟಿಸಿಕೊಂಡಿದೆ. ಈ ಬೆನ್ನಲ್ಲೇ ನ್ಯೂಸ್ 18 ಕ್ಲಿಕ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ತಮ್ಮ ಪಕ್ಷಕ್ಕೆ ಸಿಕ್ಕಿರುವ ಯಶಸ್ಸು ಹಾಗೂ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
"ಶೇ.98ರಷ್ಟು ಫಲಿತಾಂಶವನ್ನಷ್ಟು ನಿರೀಕ್ಷೆ ಮಾಡಿದ್ದೆ. ಶೇ.100ರಷ್ಟು ಬಂದಿದ್ದಕ್ಕೆ ಖುಷಿಯಿದೆ. ಜನಸೇನಾ ವಿಷಯದಲ್ಲಿ ವೀಕ್ ಇರುವ ಏರಿಯಾದಲ್ಲಿ ವೋಟ್ ಶೇರ್ ಆಗಿರುವ ಪರ್ಸಂಟೇಜ್ 18 ರಿಂದ 19 ಪರ್ಸೆಂಟ್ ಹೆಚ್ಚಾಗಿದೆ. ಇನ್ನು ಸ್ಟ್ರಾಂಗ್ ಇರುವ ಏರಿಯಾದಲ್ಲಿ ಶೇ.35ರಷ್ಟು ಏರಿಕೆ ಆಗಿದೆ. ಜನರು ನನ್ನ ಉದ್ದೇಶಗಳನ್ನು ಅರ್ಥ ಮಾಡಿಕೊಂಡಿದ್ದಾರೆ." ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇನ್ನು ಆಂಧ್ರ ಪ್ರದೇಶಕ್ಕೆ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಹಬ್ಬಿದೆ. ಈ ಬೆನ್ನಲ್ಲೇ ಈ ಹುದ್ದೆಯ ಆಕಾಂಕ್ಷಿ ಹೌದಾ? ಅಲ್ವಾ? ಅನ್ನೋ ಪ್ರಶ್ನೆಗೆ ಪವನ್ ಪ್ರತಿಕ್ರಿಯೆ ಹೀಗಿದೆ. "ಉಪ ಮುಖ್ಯಮಂತ್ರಿ ಹುದ್ದೆ ಬಗ್ಗೆ ಇನ್ನೂ ಚರ್ಚೆಯಾಗಬೇಕು. ಇನ್ನು ಎರಡು ದಿನಗಳಾದ್ಮೇಲೆ ಇದೆಲ್ಲದರ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಮುಂದೆ ಏನೆಲ್ಲ ಅವಕಾಶಗಳು ಇವೆ ಅನ್ನೋದನ್ನು ನೋಡಬೇಕು. ಸರಿಯಾದ ಸಮಯಕ್ಕೆ ಆ ಬಗ್ಗೆ ಚರ್ಚೆ ಆಗುತ್ತೆ. ಇನ್ನು 3 ರಿಂದ 4 ದಿನಗಳ ನಂತರ ಈ ಬಗ್ಗೆ ಚರ್ಚೆಯಾಗುತ್ತೆ." ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಇದರ ಜೊತೆ ತಮ್ಮ ಪಕ್ಷದ ನಿಲುವು ಎನ್‌ಡಿಎ ಜೊತೆನೇ ಇರುವುದಾಗಿ ಪವನ್ ಕಲ್ಯಾಣ್ ಹೇಳಿದ್ದು, ಇನ್ನೂ ಮೋದಿ ಜೊತೆ ಇನ್ನೂ ಮಾತುಕಥೆ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗೇ ಬದುಕಿನಲ್ಲಿ ಸಾಕಷ್ಟು ಸೋಲು ಕಂಡಿದ್ದು, ತನ್ನ ಕೆಲಸವನ್ನು ನಿರಂತರವಾಗಿ ಮಾಡುತ್ತೇನೆ ಎಂದಿದ್ದಾರೆ.
"ನನ್ನ ಲೈಫ್‌ನಲ್ಲಿ ಸಾಕಷ್ಟು ಸೋಲುಗಳನ್ನು ನೋಡುತ್ತಲೇ ಬಂದಿದ್ದೇನೆ. ನಾನು ಸಕ್ಸಸ್ ಅನ್ನು ಎಕ್ಸ್‌ಪಿರೀಯನ್ಸ್ ಮಾಡಿಲ್ಲ. ನೀವು 2019ರ ಚುನಾವಣೆ ವೇಳೆ ಇದೇ ಪ್ರಶ್ನೆ ಕೇಳಿದ್ದರೆ, ನಾನು ನನ್ನ ಕೆಲಸವನ್ನು ಮಾಡಿದ್ದೆ. ಆಗ ನನಗೆ ಕೆಲಸ ಸಿಕ್ಕಿರಲಿಲ್ಲ. ಈಗಲೂ ನಾನು ನನ್ನ ಕೆಲಸ ಮಾಡಿದ್ದೆ. ಈಗ ಅದಕ್ಕೆ ರಿಸಲ್ಟ್ ಸಿಕ್ಕಿದೆ." ಎಂದಿದ್ದಾರೆ.


Click it and Unblock the Notifications











