ಜೂ.ಎನ್‌ಟಿಆರ್ ಬರ್ತ್‌ಡೇ: NTR 30 ಮೋಷನ್ ಪೋಸ್ಟರ್ ಹೊರಬಿಟ್ಟ ಕೊರಟಾಲ ಶಿವ

ಜೂ.ಎನ್‌ಟಿಆರ್ ಟಾಲಿವುಡ್‌ನ ಯಂಗ್ ಟೈಗರ್. ಮಾಸ್ ಹಾಗೂ ಕ್ಲಾಸ್ ಎರಡೂ ಸಿನಿಮಾಗಳಿಗೂ ಜೂ.ಎನ್‌ಟಿಆರ್ ಸಖತ್ತಾಗಿ ಮ್ಯಾಚ್ ಆಗುತ್ತಾರೆ. ಆಕ್ಷನ್ ಇರಲಿ, ಸೆಂಟಿಮೆಂಟ್ ಇರಲಿ. ಜೂ.ಎನ್‌ಟಿಆರ್ ಇದ್ದ ಮೇಲೆ ಆ ಸೀನ್‌ಗಳು ಪ್ರೇಕ್ಷಕರಿಗೆ ಇಷ್ಟ ಆಗಲೇ ಬೇಕು.

ಜೂ.ಎನ್‌ಟಿಆರ್ ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ರಾಜಮೌಳಿ ನಿರ್ದೇಶನದ 'RRR' ಸಿನಿಮಾ 1000 ಕೋಟಿಯ ಗಡಿ ದಾಟಿದೆ. ಇದು ಜೂ. ಎನ್‌ಟಿಆರ್ ವೃತ್ತಿ ಬದುಕಿನ ಅತೀ ದೊಡ್ಡ ಮೈಲಿಗಲ್ಲು. ಈ ಮೆಗಾ ಸಕ್ಸಸ್ ಜೂ.ಎನ್‌ಟಿಆರ್‌ಗೆ ಹೊಸ ಹುರುಷು ನೀಡಿದೆ.

ಈ ಜೋಷ್‌ನಲ್ಲಿಯೇ ಮತ್ತೊಂದು ಮಾಸ್ ಮಸಾಲ ಎಂಟರ್‌ಟೈನರ್ ಸಿನಿಮಾ ಜೂ.ಎನ್‌ಟಿಆರ್ ರೆಡಿಯಾಗಿದ್ದಾರೆ. RRR ಸಿನಿಮಾದ ಪ್ರಚಾರ ಮುಗಿಯುತ್ತಿದ್ದಂತೆ ತನ್ನ 30ನೇ ಸಿನಿಮಾ ಕಡೆಗೆ ಜೂ.ಎನ್‌ಟಿಆರ್ ಗಮನ ಹರಿಸಲು ಆರಂಭಿಸಿದ್ದರು. ನಾಳೆ (ಮೇ 20) ಯಂಗ್ ಟೈಗರ್ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ NTR 30ರ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

Jr.NTR ಹೊಸ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್

ಜೂ. ಎನ್‌ಟಿಆರ್ ಹೊಸ ಸಿನಿಮಾ ಲಾಂಚ್ ಆಗಿದೆ. ಟಾಲಿವುಡ್‌ನ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೂ. ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್‌ ಬಗ್ಗೆ ಫ್ಯಾನ್ಸ್ ಕೂಡ ಕಾದು ಕೂತಿದ್ದರು. ಅದಕ್ಕೆ ಸರಿಯಾಗಿ ಯಂಗ್ ಟೈಗರ್ ಬರ್ತ್‌ಡೇ ಒಂದು ದಿನ ಇರುವಾಗಲೇ ಮೋಷನ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಮೋಷನ್ ಪೋಸ್ಟರ್ ಇದೊಂದು ಮಾಸ್ ಎಂಟರ್‌ಟೈನರ್ ಎಂಬುದನ್ನು ಸಾರಿ ಹೇಳುತ್ತಿದೆ.

ಮೋಡಿ ಮಾಡುತ್ತಾ 'ಜನತಾ ಗ್ಯಾರೇಜ್' ಜೋಡಿ

ಮೋಡಿ ಮಾಡುತ್ತಾ 'ಜನತಾ ಗ್ಯಾರೇಜ್' ಜೋಡಿ

ಜೂ. ಎನ್‌ಟಿಆರ್ ಮತ್ತೊಮ್ಮೆ ಕೊರಟಾಲ ಶಿವ ಜೊತೆ ಕೈ ಜೋಡಿಸಿದ್ದಾರೆ. ಈ ಹಿಂದೆ (2016)ರಲ್ಲಿ 'ಜನತಾ ಗ್ಯಾರೇಜ್' ಸಿನಿಮಾಗಾಗಿ ಕೊರಟಾಲ ಶಿವ ಹಾಗೂ ಜೂ.ಎನ್‌ಟಿಆರ್ ಒಂದಾಗಿದ್ದರು. ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಜನತಾ ಗ್ಯಾರೇಜ್' ಆಕ್ಷನ್ ಎಂಟರ್‌ಟೈನರ್ ಎಂದು ಸಾಬೀತಾಗಿತ್ತು. ಈಗ ಮತ್ತೊಂದು ಮಾಸ್ ಎಂಟರ್‌ಟೈನರ್ ಸಿನಿಮಾ ನೀಡಲು ಈ ಜೋಡಿ ಮತ್ತೆ ಸಜ್ಜಾಗಿದೆ. ಅಲ್ಲದೆ RRR ಸಿನಿಮಾ ಬಳಿಕ ಯಶಸ್ಸಿನಲ್ಲಿ ತೇಲುತ್ತಿರುವ ಜೂ.ಎನ್‌ಟಿಆರ್ ಇನ್ನೊಂದು ಹಿಟ್ ಸಿನಿಮಾ ಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

'NTR 30' ಸಿನಿಮಾಗೆ ನಾಯಕಿ ಯಾರು?

'NTR 30' ಸಿನಿಮಾಗೆ ನಾಯಕಿ ಯಾರು?

'NTR 30' ಸಿನಿಮಾಗೆ ಆಲಿಯಾ ಭಟ್ ನಾಯಕಿಯಾಗಿತ್ತಾರೆ ಎಂದು ಹೇಳಲಾಗಿತ್ತು. ಅದ್ರೀಗ ಆಲಿಯಾ ಭಟ್ ಹಾಲಿವುಡ್‌ ಸಿನಿಮಾ 'ಹಾರ್ಟ್ ಆಫ್ ಸ್ಟೋನ್'ನಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ NTR 30 ಸಿನಿಮಾ ಹಿಂದೆ ಸರಿದಿದ್ದಾರೆ. ಇನ್ನೊಂದು ಕಡೆ ಈ ಸ್ಥಾನಕ್ಕೆ ಶ್ರದ್ಧಾ ಕಪೂರ್ ಬರಬಹುದು ಎನ್ನಲಾಗಿತ್ತು. ಆದ್ರೀಗ ಶ್ರದ್ಧಾ ಕೂಡ ನಾಯಕಿ ಅಲ್ಲ ಎನ್ನಲಾಗಿದೆ. ಹೀಗಾಗಿ ಜೂ.ಎನ್‌ಟಿಆರ್‌ಗೆ ಯಾರು ನಾಯಕಿ ಆಗುತ್ತಾರೆ ಎಂಬುದೇ ದೊಡ್ಡ ಕುತೂಹಲವಾಗಿದೆ.

ಕೊರಟಾಲ ಶಿವಗೆ ಬೇಕು ಗೆಲುವು

ಕೊರಟಾಲ ಶಿವಗೆ ಬೇಕು ಗೆಲುವು

ಕೊರಟಾಲ ಶಿವ ನಿರ್ದೇಶಿಸಿದ 'ಆಚಾರ್ಯ' ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಗಲ್ಲಾಪಟ್ಟಿಗೆಯಲ್ಲಿ ಫ್ಲಾಪ್ ಎಂದು ಸಾಬೀತಾಗಿದೆ. ಈ ಕಾರಣಕ್ಕೆ ಜಬರ್ದಸ್ತ್ ಸ್ಕ್ರಿಪ್ಟ್ ಹೊತ್ತು ಬಂದಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಜೂ. ಎನ್‌ಟಿಆರ್ ಫುಲ್ ಖುಷಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಸಿನಿಮಾ ಟೈಟಲ್, ನಾಯಕಿ ಸೇರಿದಂತೆ ಉಳಿದ ಸ್ಟಾರ್ ಕಾಸ್ಟ್ ಎಲ್ಲವೂ ಮುಂದಿನ ದಿನಗಳಲ್ಲಿ ರಿವೀಲ್ ಆಗಲಿದೆ.

More from Filmibeat

English summary
Jr.NTR Birthday: Koratala Siva Directed His Next Film NTR 30 Motion Poster Released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X