ರಿಲೀಸ್‌ಗೆ 2 ದಿನವಿರುವಾಗಲೇ Jr.Ntr 'ದೇವರ'ಗೆ ಬಿಗ್ ಶಾಕ್; ಹೈಕೋರ್ಟ್‌ನಲ್ಲಿ ದೂರು
ದಕ್ಷಿಣ ಭಾರತದ ಹೀರೋಗಳು ಈಗ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿದ್ದಾರೆ. ಎಲ್ಲಾ ಭಾಷೆಯ ಪ್ರೇಕ್ಷಕರ ನೆಚ್ಚಿ ಸ್ಟಾರ್‌ಗಳಾಗಿ ಹೊರ ಹೊಮ್ಮಿದ್ದಾರೆ. ಇದೇ ಧೈರ್ಯದ ಮೇಲೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ನಿರ್ಮಾಣ ಆಗಿರುವ ಮತ್ತೊಂದು ಸೂಪರ್‌ಸ್ಟಾರ್ ಸಿನಿಮಾವೇ 'ದೇವರ'.
ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ 'ದೇವರ' ಸಿನಿಮಾ ರಿಲೀಸ್ ಆಗುತ್ತಿದೆ. ಇನ್ನು ಎರಡು ದಿನಗಳಲ್ಲಿ ಅಂದರೆ, ಸೆಪ್ಟೆಂಬರ್ 27ರಂದು ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಅದಕ್ಕೆ ಬೇಕಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬೆನ್ನಲ್ಲೇ ಜೂ.ಎನ್‌ಟಿಆರ್ 'ದೇವರ' ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ.

ಜೂ.ಎನ್‌ಟಿಆರ್ ಹಾಗೂ ನಿರ್ದೇಶಕ ಕೊರಟಾಲ ಶಿವಗೆ ಈ ಸಿನಿಮಾದ ಗೆಲುವು ತುಂಬಾನೇ ಮುಖ್ಯ. RRR ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಜೂ.ಎನ್‌ಟಿಆರ್‌ಗೆ ಆ ಇಮೇಜ್ ಅನ್ನು ಹಾಗೇ ಉಳಿಸಿಕೊಳ್ಳಬೇಕಿದೆ. ಹಾಗೇ ಸೋಲಿನ ಸುಳಿಗೆ ಸಿಲುಕಿದ್ದ ಕೊರಟಾಲ ಶಿವಗೆ ಈ ಸಿನಿಮಾ ಗೆಲ್ಲಲೇ ಬೇಕು. ಈ ಕಾರಣಕ್ಕೆ ಇಬ್ಬರಿಗೂ 'ದೇವರ' ಗೆಲವು ತುಂಬಾನೇ ಮುಖ್ಯ. ಹೀಗಾಗಿ ದೊಡ್ಡ ಬಜೆಟ್‌ನಲ್ಲಿಯೇ ಸಿನಿಮಾ ನಿರ್ಮಾಣ ಮಾಡಿ, ರಿಲೀಸ್ ರೆಡಿಯಾಗಿ ನಿಂತಿದೆ. ಈ ಬೆನ್ನಲೇ ಸಿನಿಮಾ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಇದ್ದ ಜಗನ್ ಸರ್ಕಾರ ಟಿಕೆಟ್ ಬೆಲೆ ಏರಿಕೆ ಮೇಲೆ ನಿರ್ಬಂಧ ಹಾಕಿತ್ತು. ಆದರೆ, ಚಂದ್ರಬಾಬು ನಾಯ್ಡು ಸರ್ಕಾರ 'ದೇವರ' ಸಿನಿಮಾದ ಟಿಕೆಟ್ ಬೆಲೆ ಏರಿಕೆ ವಿಚಾರದಲ್ಲಿ ಸಮ್ಮತಿಯನ್ನು ನೀಡಿತ್ತು. ಈ ಸಂಬಂಧ 100 ಸಿಂಗಲ್ ಸ್ಕ್ರೀನ್ಸ್ ಹಾಗೂ 60 ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಏರಿಕೆ ಮಾಡುವುದಕ್ಕೆ ಅನುಮತಿಯನ್ನು ನೀಡಿತ್ತು. ಇದರಿಂದ ಚಿತ್ರತಂಡ ಹಾಗೂ ಥಿಯೇಟರ್ ಮಾಲೀಕರು ಖುಷಿಯಾಗಿದ್ದರು. ಈ ಬೆನ್ನಲ್ಲೇ ಮೊದಲ ದಿನ ಈ ಸಿನಿಮಾದ ಟಿಕೆಟ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು.
ಆಂಧ್ರಪ್ರದೇಶದಲ್ಲಿ ಜೂ.ಎನ್‌ಟಿಆರ್ 'ದೇವರ' ಸಿನಿಮಾದ ಟಿಕೆಟ್ ದರ ಏರಿಕೆ ಮಾಡಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಆಂಧ್ರ ಪ್ರದೇಶದ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಲಾಗಿದೆ. ಎಪಿ ಸರ್ಕಾರ ಟಿಕೆಟ್ ದರವನ್ನು ಹೆಚ್ಚಿಸಲು ನೀಡಿರುವ ಅನುಮತಿಯನ್ನು ಹಿಂಪಡೆಯ ಬೇಕೆಂದು ಅರ್ಜಿದಾರರು ಕೋರಿಕೊಂಡಿದ್ದಾರೆ.

ಇದೇ ಅರ್ಜಿಯಲ್ಲಿ ಯಾವ ಆಧಾರದ ಮೇಲೆ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ ಅನ್ನೋದನ್ನು ತಿಳಿಸುವಂತೆ ಆಗ್ರಹಿಸಲಾಗಿದೆ.. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ನ್ಯಾಯಾಲಯ ಏನು ಹೇಳುತ್ತೆ ಅನ್ನೋದನ್ನು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಅನ್ನುವಾಗಲೇ 'ದೇವರ' ತಂಡ ಸಂಕಷ್ಟವನ್ನು ಎದುರಿಸಬೇಕಿದೆ.
'ದೇವರ' ಸಿನಿಮಾಗೆ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಜೂ.ಎನ್‌ಟಿಆರ್ ನಟಿಸಿರುವ ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು, ಬಾಕ್ಸಾಫೀಸ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.


Click it and Unblock the Notifications











