Jr.NTR 'ದೇವರ' ಚಿತ್ರತಂಡದ ಮೇಲೆ ಜೇನು ನೋಣಗಳ ದಾಳಿ.. 20 ಕಲಾವಿದರು ಆಸ್ಪತ್ರೆಗೆ ದಾಖಲು!

RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಿದೆ. 'ಜನತಾ ಗ್ಯಾರೇಜ್' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಬಳಿಕ ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಜೋಡಿ ಮತ್ತೆ ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಅದುವೇ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'. ಈ ಸಿನಿಮಾ ತಂಡದ ಮೇಲೆ ಜೇನು ನೋಣಗಳು ದಾಳಿ ಮಾಡಿವೆ ಎಂದು ವರದಿಯಾಗಿವೆ.

ಜೂ.ಎನ್‌ಟಿಆರ್ 'ದೇವರ' ಹೈ ವೋಲ್ಟೇಜ್ ಆಕ್ಷನ್ ಸಿನಿಮಾ ಅನ್ನೋದನ್ನು ಚಿತ್ರತಂಡ ಈಗಾಗಲೇ ಕನ್ಫರ್ಮ್ ಮಾಡಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ.

jr Ntr Devara movie team twenty members hospitalized due to honeybees attack

'ದೇವರ' ಸಿನಿಮಾದ ಶೂಟಿಂಗ್ ಸದ್ಯ ವೈಜಾಗ್ ಸುತ್ತಮುತ್ತ ನಡೆಯುತ್ತಿದ್ದು, ಇಲ್ಲಿನ ಅರಣ್ಯ ಪ್ರದೇಶದಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿತ್ತು ಎನ್ನಲಾಗಿದೆ. 'ದೇವರ' ಸಿನಿಮಾದ ಪ್ರಮುಖ ದೃಶ್ಯಗಳು ಇದಾಗಿದ್ದು, ಈ ವೇಳೆ ಜೇನು ನೋಣಗಳು ಏಕಾಏಕಿ ಕಲಾವಿದರ ಮೇಲೆ ಅಟ್ಯಾಕ್ ಮಾಡಿವೆ ಎನ್ನಲಾಗಿದೆ.

ಈ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಜೇನು ನೊಣಗಳು ಜೂನಿಯರ್ ಎನ್‌ಟಿಆರ್ ತಂಡದ ಮೇಲೆ ದಾಳಿ ಮಾಡಿದ್ದು, ಶೂಟಿಂಗ್ ಸ್ಪಾಟ್‌ನಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ಸುದ್ದಿ ಕೇಳಿದ ಬಳಿಕ ಜೂ.ಎನ್‌ಟಿಆರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ, ಶೂಟಿಂಗ್ ಸ್ಪಾಟ್‌ನಲ್ಲಿ ಜೂ.ಎನ್‌ಟಿಆರ್ ಇರಲಿಲ್ಲ ಎಂದು ಹೇಳಾಗಿದೆ. ಜೂ.ಎನ್‌ಟಿಆರ್ ಸದ್ಯ 'ವಾರ್ 2' ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ ಎಂದು ವರದಿಯಾಗಿವೆ. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿಲ್ಲ.

jr Ntr Devara movie team twenty members hospitalized due to honeybees attack

ಇನ್ನು 'ದೇವರ' ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದಾರೆ. RRR ಸಿನಿಮಾದ ಬಳಿಕ ಜೂ.ಎನ್‌ಟಿಆರ್‌ ಮುಂದಿನ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಪೋಸ್ಟರ್ ಹಾಗೂ ಗ್ಲಿಂಪ್ಸ್ ಮೋಡಿ ಮಾಡಿದ್ದು, ಪ್ರೇಕ್ಷಕರನ್ನು ನಿರೀಕ್ಷೆಯಲ್ಲಿ ಮುಳುಗಿಸುತ್ತಿದೆ.

'ದೇವರ' ಸಿನಿಮಾದಲ್ಲಿ ಜಾನ್ವಿ ಕಪೂರ್, ಸೈಫ್ ಅಲಿಖಾನ್ ಜೊತೆ ಪ್ರಕಾಶ್ ರಾಜ್, ಶ್ರೀಕಾಂತ್, ನರೈನ್, ಟಾಮ್ ಶೈನ್ ಚಾಕೋ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದುಬಾರಿ ಬಜೆಟ್‌ನಲ್ಲಿ 'ದೇವರ' ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾವನ್ನು ಕೂಡ ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಕ್ಟೊಬರ್ 10ಕ್ಕೆ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.

More from Filmibeat

English summary
Jr Ntr Devara movie team attacked by honeybees:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X