ಕುಮಾರಸ್ವಾಮಿ ಅವತಾರವತ್ತಲಿರೋ ಜೂನಿಯರ್ ಎನ್‌ಟಿಆರ್? ತ್ರಿವಿಕ್ರಮ್ ಆಕ್ಷನ್ ಕಟ್

RRR ಸಿನಿಮಾ ಬಳಿಕ ಜೂನಿಯರ್ ಎನ್‌ಟಿಆರ್‌ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ 'ವಾರ್ 2' ಬಿಡುಗಡೆ ಬಳಿಕ ಯಂಗ್ ಟೈಗರ್ ಕೈಗೆ ಸಿಗುವುದೇ ಅನುಮಾನ ಎಂದು ಹೇಳಲಾಗುತ್ತಿತ್ತು. ಈ ಮಧ್ಯೆ ಹೊಸದೊಂದು ಪ್ರಾಜೆಕ್ಟ್ ಬಗ್ಗೆ ಟಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಜೂ.ಎನ್‌ಟಿಆರ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ಓಡಾಡುವುದಕ್ಕೆ ಶುರು ಮಾಡಿದೆ. ಈ ಸಿನಿಮಾಗೆ ಬ್ಲಾಕ್‌ಬಸ್ಟರ್ ಸಿನಿಮಾಗಳ ಸರದಾರ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋದು ಇನ್ನೊಂದು ಸುದ್ದಿ.

ಜೂನಿಯರ್ ಎನ್‌ಟಿಆರ್ ಮಾಸ್ ಹೀರೋ. ಇವರ ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್‌ ಭರಪೂರ ಇರುತ್ತೆ. ಈ ಬಾರಿ ಫಾರ್ ಎ ಚೇಂಜ್ ಅವರ ವೃತ್ತಿ ಬದುಕಿನ ವಿಭಿನ್ನ ಸಿನಿಮಾಗೆ ಕೈ ಹಾಕುತ್ತಿದ್ದಾರೆ ಎನ್ನಲಾಗಿದೆ. ಟಾಲಿವುಡ್‌ ಸೇರಿದಂತೆ ವಿಶ್ವದಾದ್ಯಂತ ಯಂಗ್ ಟೈಗರ್‌ಗೆ ಅಭಿಮಾನಿಗಳು ಇದ್ದಾರೆ. ಹೀಗಾಗಿ ದೊಡ್ಡ ಪ್ರಾಜೆಕ್ಟ್‌ಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಹೆಚ್ಚಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳನ್ನೇ ಒಪ್ಪಿಕೊಳ್ಳುತ್ತಿದ್ದಾರೆ.

Jr NTR film with Trivikram Srinivas on mythological based on Lord Kumara Swamy after Allu Arjun exit

ಇದೂವರೆಗೂ ಮಾಸ್ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸಿರುವ ಜೂನಿಯರ್ ಎನ್‌ಟಿಆರ್ ಹೊಸ ಪ್ರಯತ್ನ ಟಾಲಿವುಡ್ ಮಂದಿಯ ಕಣ್ಣು ಅರಳಿಸಿದೆ. ಯಾಕಂದ್ರೆ, ಇದು ಯಂಗ್ ಟೈಗರ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಇಬ್ಬರಿಗೂ ಹೊಸತು. ಹೀಗಾಗಿ ಇವರಿಬ್ಬರೂ ಸೇರಿ ಅದ್ಯಾವ ಸಿನಿಮಾ ಮಾಡುತ್ತಾರೆ ಅನ್ನೋ ಕುತೂಹಲ ಸೃಷ್ಟಿಯಾಗಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಹೆಸರು 'ಕುಮಾರಸ್ವಾಮಿ'. ಆದರೆ, ಇನ್ನೊಂದು ಟ್ವಿಸ್ಟ್ ಇದೆ.

ಜೂ.ಎನ್‌ಟಿಆರ್‌-ತ್ರಿವಿಕ್ರಮ್ ಕಾಂಬೋ

ಜೂನಿಯರ್ ಎನ್‌ಟಿಆರ್ ಹಾಗೂ ತ್ರಿವಿಕ್ರಮ್ ಇಬ್ಬರೂ 'ಜುಲಾಯಿ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲಿಂದ ಈ ಜೋಡಿ ಮತ್ತೆ ಸಿನಿಮಾ ಮಾಡಿರಲಿಲ್ಲ. ಈಗ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಬಾರಿಗೆ ಪೌರಾಣಿಕ ಸಿನಿಮಾಗೆ ಯಂಗ್ ಟೈಗರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಲಾರ್ಡ್ ಕುಮಾರಸ್ವಾಮಿ ಕಥೆಯನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ತ್ರಿವಿಕ್ರಮ್ ನಿರ್ದೇಶನ ಅನ್ನೋದು ಟಾಲಿವುಡ್‌ ಮಂದಿಯ ಕುತೂಹಲವನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.

ಈ ಪಾತ್ರ ಮಾಡಬೇಕಿತ್ತು ಅಲ್ಲು ಅರ್ಜುನ್?

ಅಂದ್ಹಾಗೆ, ನಿರ್ದೇಶಕ ತ್ರಿವಿಕ್ರಮ್ ಮೊದಲು ಲಾರ್ಡ್ ಕುಮಾರಸ್ವಾಮಿ ಕತೆಯನ್ನು ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ ಹೇಳಿದ್ದರು. ಆದರೆ, 'ಪುಷ್ಪ 2' ಸೂಪರ್ ಸಕ್ಸಸ್ ಬಳಿಕ ಐಕಾನ್ ಸ್ಟಾರ್ ತಮ್ಮ ವರಸೆಯನ್ನು ಬದಲಿಸಿದ್ದರು. ತಮಿಳು ನಿರ್ದೇಶಕ ಅಟ್ಲೀಯ ಕತೆ ಇಷ್ಟ ಆಗಿತ್ತು. ಹೀಗಾಗಿ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ಕಾರಣಕ್ಕೆ ತ್ರಿವಿಕ್ರಮ್ ಯಂಗ್ ಟೈಗರ್ ಜೂ.ಎನ್‌ಟಿಆರ್‌ಗೆ ಹೇಳಿದ್ದರು. ಕಾನ್ಸೆಪ್ಟ್ ಕೇಳಿದ ಮೇಲೆ ಈ ಪೌರಾಣಿಕ ಸಿನಿಮಾಗೆ ಜೂ.ಎನ್‌ಟಿಆರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

Jr NTR film with Trivikram Srinivas on mythological based on Lord Kumara Swamy after Allu Arjun exit

ಬಿಗ್ ಬಜೆಟ್ ಸಿನಿಮಾ

ಲಾರ್ಡ್ ಕುಮಾರಸ್ವಾಮಿ ಕುರಿತ ಈ ಪೌರಾಣಿಕ ಸಿನಿಮಾವನ್ನು ತೆಲುಗಿನ ಪ್ರತಿಷ್ಠಿತ ಹಾರಿಕಾ ಹಾಸಿನಿ ಕ್ರಿಯೇಷನ್ ಬ್ಯಾನರ್‌ನಲ್ಲಿ ರಾಧಾ ಕೃಷ್ಣ ಹಾಗೂ ಸೂರ್ಯದೇವರ ನಾಗ ವಂಶಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೊಂದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಈ ಸುದ್ದಿ ಜೂ.ಎನ್‌ಟಿಆರ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟಿದೆ. ಹಾಗೇ ಶೀಘ್ರದಲ್ಲಿಯೇ ಈ ಸಿನಿಮಾ ಅನೌನ್ಸ್ ಕೂಡ ಆಗಲಿದೆ ಎನ್ನಲಾಗುತ್ತಿದೆ.

ಜೂನಿಯರ್ ಎನ್‌ಟಿಆರ್ ಫುಲ್ ಬ್ಯುಸಿ

'ದೇವರ' ಸಿನಿಮಾ ಬಳಿಕ ಜೂ.ಎನ್‌ಟಿಆರ್ 'ವಾರ್ 2'ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ಆ ಸಿನಿಮಾ ಕೂಡ ರೆಡಿಯಾಗಿದ್ದು, ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು, ಈಗಾಗಲೇ ಬಾಲಿವುಡ್‌ನಲ್ಲಿ ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಇನ್ನೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಡ್ರ್ಯಾಗನ್' ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿದೆ. ಹಾಗೇ ದಾದಾ ಸಾಹೇಬ್ ಫಾಲ್ಕೆ ಬಯೋಪಿಕ್ 'ಮೇಡ್ ಇನ್ ಇಂಡಿಯಾ'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಸುದ್ದಿಯಿದೆ. ಈಗ ತ್ರಿವಿಕ್ರಮ್ ಸಿನಿಮಾ ಸದ್ದು ಮಾಡುತ್ತಿದೆ.

More from Filmibeat

English summary
Jr NTR film with Trivikram Srinivas on mythological based on Lord Kumara Swamy after Allu Arjun exit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X